ತುಮಕೂರು, ನವೆಂಬರ್ 25: ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ತುಮಕೂರಿನ 5ನೇ ತರಗತಿ ವಿದ್ಯಾರ್ಥಿನಿಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ‘‘ಏನಾಗುವುದಿಲ್ಲ, ಧೈರ್ಯವಾಗಿರು. ಈ ಸಂದರ್ಭದಲ್ಲಿ ಮಾನಸಿಕವಾಗಿ ಕುಂದಬೇಡ. ಭಗವಂತ ಇದ್ದಾನೆ, ಏನು ಆಗಲ್ಲ, ಆರೋಗ್ಯವಾಗಿ ಇರುತ್ತೀಯಾ. ಇಂಪಾಸಿಬಲ್ ಎಂಬ ಪದವೇ ಇಲ್ಲ, ಎಲ್ಲವೂ ಪಾಸಿಬಲ್’’ ಎಂದು ಬಾಲಕಿಗೆ ಅಭಯ ನೀಡಿದರು. ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿರುವ ಆ ಬಾಲಕಿಯನ್ನು ತಾವು ಜಪಾನ್‌ನಿಂದ ಹಿಂತಿರುಗಿದ ನಂತರ ಭೇಟಿ ನೀಡುವುದಾಗಿ ಭರವಸೆ ನೀಡಿದರು. ಸಿಎಂ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮತ್ತೊಂದೆಡೆ, ಬುಲೆಟ್ ರೈಲು ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ರೈಲು ನಿಲ್ದಾಣಗಳ ಸ್ವಚ್ಛತೆ, ರೈಲಿನ ವೇಗ ಮತ್ತು ಸಮಯ ಪಾಲನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಪಾನ್ ಮಾದರಿಯ ಅತ್ಯಾಧುನಿಕ ರೈಲು ನಿಲ್ದಾಣಗಳನ್ನು ಕರ್ನಾಟಕದಲ್ಲೂ ನಿರ್ಮಿಸುವ ಆಶಯವನ್ನು ಹೊಂದಿರುವುದಾಗಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ