ಬೆಂಗಳೂರು, ನವೆಂಬರ್ 25: ನಗರದಲ್ಲಿ ಜನಪ್ರಿಯವಾಗಿದ್ದ ಬೈಕ್ ಟ್ಯಾಕ್ಸಿ ಸೇವೆ ಇದೀಗ ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೂ ಲಗ್ಗೆಯಿಟ್ಟಿದೆ. ರಾಪಿಡೋ ಸೇವೆ ಹಾಸನ ಜಿಲ್ಲೆಯಲ್ಲಿ ಆರಂಭವಾಗುತ್ತಿದ್ದಂತೆ, ಆಟೋ ಚಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅನಧಿಕೃತವಾಗಿ ವೈಟ್ ಬೋರ್ಡ್ ಬೈಕ್ಗಳನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿದೆ ಎಂದು ಆಟೋ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ, ನೂರಾರು ಆಟೋ ಚಾಲಕರು ಎನ್.ಆರ್. ವೃತ್ತದಲ್ಲಿ ರಾಪಿಡೋ ಬೈಕ್ ಚಾಲಕರನ್ನು ತಡೆದು ಪ್ರತಿಭಟನೆ ನಡೆಸಿದರು. ಬೈಕ್ ಟ್ಯಾಕ್ಸಿ ಸೇವೆಗೆ ಯಾವುದೇ ನೀತಿ ನಿಯಮಗಳಿಲ್ಲ. ಯಾರು ಅವಕಾಶ ನೀಡಿದರು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೈಕ್ ಟ್ಯಾಕ್ಸಿ ಚಾಲಕರೊಬ್ಬರು, “ಹೊಟ್ಟೆಪಾಡಿಗಾಗಿ ಬಂದಿದ್ದೇನೆ, ತಪ್ಪಾಗಿದೆ ಎಂಬ ಅರಿವಿದೆ” ಎಂದು ಕಣ್ಣೀರಿಟ್ಟರು. ಇಂತಹ ಸೇವೆಗಳ ಅನಿಶ್ಚಿತತೆ ಮತ್ತು ಆಟೋ ಚಾಲಕರ ಸಂಕಷ್ಟದಿಂದಾಗಿ, ಈ ವಿಷಯದಲ್ಲಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕಿದೆ. ಬದುಕಿನ ಬಂಡಿ ಎಳೆಯಲು ಹೆಣಗಾಡುತ್ತಿರುವ ಎರಡೂ ವರ್ಗಗಳ ನಡುವೆ ಸಂಘರ್ಷ ತಲೆದೋರಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

