ನವದೆಹಲಿ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮೋದನೆ ನೀಡುವ ಸಂಬಂಧ ಕೇಂದ್ರ ಅರಣ್ಯ ಸಚಿವಾಲಯದ ನೇತೃತ್ವದಲ್ಲಿ ಇದೇ 27ರಂದು ಮಹತ್ವದ ಸಭೆ ನಡೆಯಲಿದೆ.
ಡೆಹ್ರಾಡೂನ್ನ ಭಾರತೀಯ ವನ್ಯಜೀವಿ ಸಂಸ್ಥೆ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
‘₹10 ಸಾವಿರ ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವವು ತಾಂತ್ರಿಕ ಅರ್ಹತೆ, ಪರಿಸರ ಸುಸ್ಥಿರತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ತಜ್ಞರ ತಂಡ, ‘ಈ ಯೋಜನೆಗೆ ಅನುಮತಿ ನೀಡುವುದು ಬೇಡ’ ಎಂದು ಶಿಫಾರಸು ಮಾಡಿತ್ತು. ಯೋಜನೆಗೆ 134 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡು ವಂತೆ ಕೆಪಿಸಿಎಲ್ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ತಜ್ಞರ ತಂಡದ ಚಾಟಿಯ ಬಳಿಕ ಯೋಜನೆಯ ವಿನ್ಯಾಸದಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಬದಲಾವಣೆ ಮಾಡಿ ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಅರಣ್ಯ ಪ್ರದೇಶದಲ್ಲಿ 24 ಹೆಕ್ಟೇರ್ನಲ್ಲಿ ನೆಲದಡಿ ಕಾಮಗಾರಿ ನಡೆಸಲಾಗುವುದು. 14.97 ಹೆಕ್ಟೇರ್ ಅರಣ್ಯವನ್ನಷ್ಟೇ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿತ್ತು.
261125-42-1018746985

