ಕರ್ನಾಟಕದಲ್ಲಿಯೂ ಜಪಾನ್ ಮಾದರಿಯ ಅತ್ಯಾಧುನಿಕ ರೈಲು ನಿಲ್ದಾಣವೊಂದನ್ನು ಪ್ರಾಯೋಗಿಕವಾಗಿ ನಿರ್ಮಿಸುವ ಅಭಿಲಾಷೆ ಹೊಂದಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಪಾನ್ ಮಾದರಿಯ ಟ್ಯಾಕ್ಸಿ ಪರಿಚಯಿಸಿ: ಟೊಯೊಟಾಗೆ ಡಿಕೆಶಿ ಮನವಿಜಪಾನ್ನಲ್ಲಿ ರೈಲು ಪ್ರಯಾಣ ಮಾಡಿದ ಅನುಭವವನ್ನು ವಿಡಿಯೊ ಮೂಲಕ ಹಂಚಿಕೊಂಡಿರುವ ಅವರು, ಅಲ್ಲಿನ ರೈಲು ನಿಲ್ದಾಣಗಳ ಸ್ವಚ್ಛತೆ, ಆಧುನಿಕ ಸೌಲಭ್ಯಗಳು, ರೈಲುಗಳ ವೇಗ ಮತ್ತು ಸಮಯಪಾಲನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಜಪಾನ್ನ ರೈಲು ನಿಲ್ದಾಣಗಳು ವಿಶೇಷ ಅನುಭವ ನೀಡುತ್ತವೆ. ನಿಲ್ದಾಣಗಳ ಕೆಳ ಮತ್ತು ಮೇಲಿನ ಮಹಡಿಗಳಲ್ಲಿ ದೊಡ್ಡ ಶಾಪಿಂಗ್ ಕೇಂದ್ರಗಳು ಹಾಗೂ ಪಂಚತಾರಾ ಹೋಟೆಲ್ಗಳಿವೆ. ವಿಮಾನ ನಿಲ್ದಾಣಗಳಂತೆ ರೈಲುಗಳು ಮತ್ತು ನಿಲ್ದಾಣಗಳನ್ನೂ ಅತ್ಯಂತ ಸ್ವಚ್ಛವಾಗಿ ನಿರ್ವಹಿಸಲಾಗುತ್ತಿದೆ. ಇಂತಹ ಮಾದರಿಯನ್ನು ಕರ್ನಾಟಕದಲ್ಲಿಯೂ ಕನಿಷ್ಠ ಒಂದು ಕಡೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು ಎಂಬ ಆಸೆ ಇದೆ’ ಎಂದು ಹೇಳಿದ್ದಾರೆ.
ಕ್ಯಾನ್ಸರ್: ಮಕ್ಕಳ ನೋವಿಗೆ ಕಿವಿಯಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ನೀವು ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರು: ಸಿಎಂ ಡಿಕೆಶಿ‘ಇಲ್ಲಿನ ರೈಲುಗಳ ವೇಗ, ಸ್ವಚ್ಛತೆ ಮತ್ತು ಪ್ರಯಾಣಿಕರಿಗೆ ಒದಗಿಸಿರುವ ಸೌಲಭ್ಯಗಳು ಉತ್ತಮವಾಗಿವೆ. ಮುಖ್ಯವಾಗಿ ರೈಲುಗಳ ಆಗಮನ ಮತ್ತು ನಿರ್ಗಮನದಲ್ಲಿ ಒಂದು ನಿಮಿಷವೂ ವ್ಯತ್ಯಯವಾಗದಂತೆ ಸಮಯಪಾಲನೆ ಮಾಡಲಾಗುತ್ತದೆ. ವಿವಿಧ ರೈಲು ನಿಲ್ದಾಣಗಳು ಮತ್ತು ಪ್ಲಾಟ್ಫಾರ್ಮ್ಗಳನ್ನು ವೀಕ್ಷಿಸುವ ಅವಕಾಶವೂ ದೊರೆತಿದೆ’ ಎಂದು ತಿಳಿಸಿದ್ದಾರೆ.
ದೇಶದ ಅಭಿವೃದ್ಧಿಗೆ ಇಂತಹ ಅತ್ಯುತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಜಪಾನ್ ಪ್ರವಾಸ ತಮ್ಮ ಜೀವನದಲ್ಲಿ ಹೊಸ ಅನುಭವ ನೀಡಿದೆ ಎಂದೂ ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ಜಪಾನ್: ಒಸಾಕಾ ತ್ಯಾಜ್ಯ ದಹನ ಘಟಕಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ