ನಟಿ ಶ್ರುತಿ ಹಾಸನ್ ಅವರು ಆಗಾಗ ಮಾಧ್ಯಮಗಳ ಎದುರು ಬಂದು ಸಂದರ್ಶನ ನೀಡುತ್ತಾರೆ. ಅವರು ಈ ವೇಳೆ ಹಲವು ವಿಷಯಗಳನ್ನು ಹಂಚಿಕೊಳ್ಳೋದನ್ನು ನೀವು ಕಂಡಿರಬಹುದು. ಈಗ ಅವರು ಇತ್ತೀಚೆಗೆ ತಾವು ವೀಕ್ಷಿಸಿದ ಅತ್ಯುತ್ತಮ ಸಿನಿಮಾ ಯಾವುದು ಎಂಬುದನ್ನು ರಿವೀಲ್ ಮಾಡಿದ್ದಾರೆ. ವಿಜಯ್ ಸೇತುಪತಿ ನಟನೆಯ ‘ಬತ್ತಾ’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ನೋಡಿದಾಗ ಕ್ಲೈಮ್ಯಾಕ್ಸ್ನಲ್ಲಿ ತಾವು ಭಾವುಕರಾಗಿ ಕಣ್ಣೀರು ಹಾಕಿದ್ದಾಗಿ ಸಂದರ್ಶನವೊಂದರಲ್ಲಿ ಅವರು ಹಂಚಿಕೊಂಡಿದ್ದಾರೆ.
ಶ್ರುತಿ ಹಾಸನ್ ಹೇಳಿದ್ದೇನು?
ಸಂದರ್ಶನದಲ್ಲಿ ಮಾತನಾಡಿದ ಶ್ರುತಿ ಹಾಸನ್ ಅವರು ಇತ್ತೀಚೆಗೆ ನೋಡಿದ ಉತ್ತಮ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದರು, ‘ಇತ್ತೀಚೆಗೆ ನಾನು ನೋಡಿದ ಅತ್ಯುತ್ತಮ ಸಿನಿಮಾಗಳಲ್ಲಿ ‘ಬತ್ತಾ’ ಒಂದು. ನಾನು ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದೆ. ನಿಜವಾಗಿಯೂ ತುಂಬಾ ಇಷ್ಟವಾಯಿತು. ಅದೊಂದು ಸುಂದರ ಸಿನಿಮಾ’ ಎಂದು ಹೇಳಿದ್ದಾರೆ.
View this post on Instagram
ಬಾಲಾಜಿ ತರಣೀಧರನ್ ಶೈಲಿಗೆ ಫಿದಾ
ಚಿತ್ರದ ನಿರ್ದೇಶಕ ‘ಬಾಲಾಜಿ ತರಣೀಧರನ್’ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಈ ವಿಷಯವನ್ನು ನಾನು ನಿರ್ದೇಶಕರ ಬಳಿಯೂ ಹೇಳಿದ್ದೇನೆ. ಅವರ ಹಿಂದಿನ ಸಿನಿಮಾ ಕೂಡ ನನಗೆ ತುಂಬಾ ಇಷ್ಟವಾಗಿತ್ತು. ಬಾಲಾಜಿ ತರಣೀಧರನ್ ಅವರ ಕೆಲಸವೆಂದರೆ ನನಗೆ ತುಂಬಾ ಇಷ್ಟ. ಅವರ ಯೋಚನಾ ಶೈಲಿ ತುಂಬಾ ವಿಭಿನ್ನ ಮತ್ತು ವಿಶಿಷ್ಟವಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಕನ್ನಡದಲ್ಲೂ ಇರುವ ವಿಜಯ್ ಸೇತುಪತಿಯ ಹೊಸ ಚಿತ್ರವನ್ನು ಮಿಸ್ ಮಾಡಿಕೊಳ್ಳಲೇಬೇಡಿ
ಸರಳತೆ ಮತ್ತು ಕಣ್ಣೀರು ತರಿಸಿದ ಕ್ಷಣ
ಸಿನಿಮಾದ ಕಥೆ ಮತ್ತು ನಿರೂಪಣೆಯ ಸರಳತೆಯ ಬಗ್ಗೆ ಮಾತನಾಡಿದ ಶ್ರುತಿ ಹಾಸನ್, ‘ಸಿನಿಮಾ ನನಗೆ ತುಂಬಾ ಇಷ್ಟವಾಯಿತು. ಅದರ ಸರಳತೆ ನನಗೆ ತುಂಬಾ ಹತ್ತಿರವಾಯಿತು. ಕೊನೆಯಲ್ಲಿ ಸಿನಿಮಾವೊಂದು ಸಹಜವಾಗಿ ನಮ್ಮನ್ನು ಭಾವುಕರನ್ನಾಗಿಸಿ ಕಣ್ಣೀರು ತರಿಸುವುದು ನಿಜಕ್ಕೂ ಅದ್ಭುತ ಅನುಭವ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

