ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕತೆಯು ಅಸಾಧಾರಣ ಪಯಣದ ಕಥನವಾಗಿದ್ದು, ಅದನ್ನು ಓದಲು ಉತ್ಸುಕವಾಗಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ಸೋನಿಯಾ ಅವರ ಆತ್ಮಕಥೆ ʼಬಿಲಾಂಗಿಂಗ್: ಎ ಜರ್ನಿ ಆಫ್ ಲವ್ʼ ಅನ್ನು ಹಾರ್ಪರ್ಕಾಲಿನ್ಸ್ ಇಂಡಿಯಾ ಇಂದು ಪ್ರಕಟಿಸಿದೆ. 544 ಪುಟಗಳ ಈ ಪುಸ್ತಕದಲ್ಲಿ, ಸೋನಿಯಾ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ಪ್ರೀತಿ, ಅತ್ತೆ ಇಂದಿರಾ ಗಾಂಧಿ ಜೊತೆಗಿನ ಒಡನಾಟ, ಜೀವನದಲ್ಲಿ ಎದುರಾರ ದುರಂತಗಳು, ರಾಜಕೀಯ ವಿಚಾರಗಳೂ ಸೇರಿದಂತೆ ಹಲವು ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ.
ಕೃತಿಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಿಕೆಶಿ, ʼಪುಸ್ತಕದ ಮೊದಲ ಕೆಲವು ಪುಟಗಳನ್ನು ತಿರುವಿಹಾಕಿದೆ. ಪ್ರೀತಿ, ನಷ್ಟ, ಸ್ಥೈರ್ಯ ಹಾಗೂ ಸ್ವಂತಿಕೆಯ ಕಥನವಿದುʼ ಎಂದಿದ್ದಾರೆ.
ಹಾಗೆಯೇ, ʼಭಾರತವನ್ನೇ ತವರನ್ನಾಗಿ ಮಾಡಿಕೊಂಡ ಹಾಗೂ ತನ್ನದೇ ನಂಬಿಕೆಗಳು, ಸಾರ್ವಜನಿಕ ಹೊಣೆಗಾರಿಕೆಯಿಂದ ರೂಪುಗೊಂಡ ಬದುಕನ್ನು ಒಪ್ಪಿಕೊಂಡು ನಡೆದ ಮಹಿಳೆಯ ಅನುಭವಗಳನ್ನು ಈ ಕೃತಿ ಸಾರುತ್ತದೆ. ಅವರ ಅಸಾಧಾರಣ ಪಯಣದ ವಿಚಾರಗಳನ್ನು ಓದಲು ಎದುರುನೋಡುತ್ತಿದ್ದೇನೆʼ ಎಂದು ಬರೆದುಕೊಂಡಿದ್ದಾರೆ.
Turning the first few pages of Belonging: A Journey of Love by Smt. @SoniaGandhi avaru.
— DK Shivakumar (@DKShivakumar) November 10, 2026
A story of love, loss, resilience and belonging. Her journey reflects the experiences of a woman who made India her home and embraced a life shaped by personal convictions and public… pic.twitter.com/Q17q6RS84w

