ದೀಪಾವಳಿ ಹಬ್ಬದ ಬಳಿಕ ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯ ವಾಯು ಗುಣಮಟ್ಟ ಕಳಪೆ ಹಾಗೂ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಈ ಬೆಳವಣಿಗೆಯಿಂದ ಆಕ್ರೋಶಗೊಂಡಿರುವ ನಟಿ, ರಿಯಾಲಿಟಿ ಶೋ ತಾರೆ ಹಾಗೂ ಕಂಟೆಂಟ್ ಕ್ರಿಯೇಟರ್ ಉರ್ಫಿ ಜಾವೇದ್, ಪಟಾಕಿ ಸಿಡಿಸಿದವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಗೊತ್ತಿದ್ದರೂ ಜನರು ಹೀಗೆ ಮಾಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ದೀಪಾವಳಿ ಬಳಿಕ ಹಲವು ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉರ್ಫಿ ಜಾವೇದ್ ಒತ್ತಾಯಿಸಿದ್ದಾರೆ. ನವೆಂಬರ್ 9ರ ಸೋಮವಾರ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಬ್ಬದ ಆಚರಣೆಯ ಬಳಿಕ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವುದಕ್ಕೆ ಅವರು ಕಿಡಿಕಾರಿದ್ದಾರೆ.
ಪಟಾಕಿ ಸಿಡಿಸೋರನ್ನ ಜೈಲಿಗೆ ಹಾಕಿ
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಉರ್ಫಿ, "ಪಟಾಕಿ ಸಿಡಿಸುವ ಪ್ರತಿಯೊಬ್ಬರನ್ನೂ ಜೈಲಿಗೆ ಹಾಕಬೇಕು! ಅಷ್ಟೇ! ಗವಾರ್ ಜನರು ಪರಿಸ್ಥಿತಿಯನ್ನು ಏನು ಮಾಡಿದ್ದಾರೆ ನೋಡಿ?" ಎಂದು ಬರೆದುಕೊಂಡಿದ್ದಾರೆ. ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧಗಳಿದ್ದರೂ ಜನರು ಅವುಗಳನ್ನು ಮುಂದುವರಿಸಿರುವುದನ್ನು ಹಾಗೂ ಇದರಿಂದ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಹದಗೆಟ್ಟಿರುವುದನ್ನು ಅವರು ಟೀಕಿಸಿದ್ದಾರೆ.
ದೆಹಲಿಯಲ್ಲಿ 400ರ ಗಡಿ ದಾಟಿದ ಹಲವು ಪ್ರದೇಶಗಳ AQI
ಸೋಮವಾರ ಬೆಳಗ್ಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 'ಅತ್ಯಂತ ಕಳಪೆ' (Very Poor) ವಿಭಾಗದಲ್ಲಿತ್ತು. ನಗರದ ಹಲವು ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ಎಕ್ಯೂಐ ಪ್ರಮಾಣ 400ರ ಗಡಿಯನ್ನು ದಾಟಿದ್ದು, ಅವು 'ತೀವ್ರ ಕಳಪೆ' (Severe) ವಿಭಾಗಕ್ಕೆ ಸೇರಿದ್ದವು. ಇನ್ನೊಂದೆಡೆ, ಮುಂಬೈ ನಗರದ ಒಟ್ಟಾರೆ ಎಕ್ಯೂಐ 171 ದಾಖಲಾಗಿತ್ತು. ಇದು 'ಮಧ್ಯಮ' (Moderate) ವಿಭಾಗಕ್ಕೆ ಸೇರುತ್ತದೆ.
ದೆಹಲಿಯಲ್ಲಿ ಮತ್ತೊಮ್ಮೆ ಹೆಚ್ಚಾದ ಮಾಲಿನ್ಯವು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ವಿಚಾರವನ್ನು ಚರ್ಚೆಯ ಮುನ್ನೆಲೆಗೆ ತಂದಿದೆ. ಪಟಾಕಿ ಸಿಡಿಸುವುದಕ್ಕೆ ನಿರ್ಬಂಧಗಳಿದ್ದರೂ, ಭಾನುವಾರ ರಾತ್ರಿ ಅನುಮತಿಸಲಾದ ಸಮಯ ಮುಗಿದ ಬಳಿಕವೂ ಮಧ್ಯರಾತ್ರಿಯವರೆಗೆ ಹಲವೆಡೆ ಪಟಾಕಿ ಸಿಡಿಸುವುದು ಮುಂದುವರಿದಿತ್ತು.
ಕೆಲಸದ ವಿಚಾರದಲ್ಲಿ ಉರ್ಫಿ ಬ್ಯುಸಿ
ವೃತ್ತಿಜೀವನದ ವಿಚಾರಕ್ಕೆ ಬಂದರೆ, ಉರ್ಫಿ ಇತ್ತೀಚೆಗೆ 'ಲಾಕ್ ಅಪ್' ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 'ಸ್ಪ್ಲಿಟ್ಸ್ವಿಲ್ಲಾ' ಸ್ಪರ್ಧಿಗಳಾದ ಯೋಗೇಶ್ ರಾವತ್ ಮತ್ತು ಆಕಾಂಕ್ಷಾ ಚೌಧರಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಇದಕ್ಕೂ ಮೊದಲು ಅವರು ಸನ್ನಿ ಲಿಯೋನ್, ಕರಣ್ ಕುಂದ್ರಾ ಮತ್ತು ನಿಯಾ ಶರ್ಮಾ ಅವರೊಂದಿಗೆ 'ಸ್ಪ್ಲಿಟ್ಸ್ವಿಲ್ಲಾ X6' ಕಾರ್ಯಕ್ರಮವನ್ನು ನಿರೂಪಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು 'ಮಿಸ್ಚೀಫ್ ಮೇಕರ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

