ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರೋಚಕತೆ ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ಅದರಲ್ಲೂ ವಿಶೇಷವಾಗಿ ಮಂಜು ಹಾಗೂ ಯಶಸ್ ನಡುವೆ ತೀವ್ರ ಸ್ವರೂಪದ ಕಿರಿಕ್ ಉಂಟಾಗಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಟಾಸ್ಕ್ ಒಂದರ ವೇಳೆ ನಾಯಕನ ಕಟ್ ಔಟ್ ಹಾಗೂ ಬಣ್ಣದ ವಿಚಾರವಾಗಿ ಇಬ್ಬರ ನಡುವೆ ಮಾತಿನ ವಾಗ್ವಾದ ಆರಂಭವಾಗಿದೆ. ಇದು ಕ್ರಮೇಣ ತಾರಕಕ್ಕೇರಿ ಪರಸ್ಪರ ಗರಂ ಆಗುವಂತೆ ಮಾಡಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ದೊಡ್ಡ ಮಟ್ಟದ ವಾದ-ವಿವಾದವೇ ನಡೆದಿದೆ.
ಈ ಹಿಂದೆ ಕೂಡ ಬಿಗ್ ಬಾಸ್ ಮನೆಯಲ್ಲಿ ಇದೇ ರೀತಿಯ ಗಲಾಟೆಗಳು ಹಾಗೂ ಮನಸ್ತಾಪಗಳು ನಡೆದಿತ್ತು. ಇದೀಗ ಮತ್ತೆ ಮಂಜು ಮತ್ತು ಯಶಸ್ ನಡುವೆ ಅದೇ ರೀತಿಯ ಕಿರಿಕ್ ಮರುಕಳಿಸಿರುವುದು ಮನೆಯಲ್ಲಿ ಹೊಸ ಬಿರುಗಾಳಿಗೆ ಕಾರಣವಾಗುವ ಮುನ್ಸೂಚನೆ ನೀಡಿದೆ. ಆಟದ ಹುಮ್ಮಸ್ಸಿನಲ್ಲಿ ಶುರುವಾಗುವ ಈ ರೀತಿಯ ಕಿರಿಕ್ಗಳು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕಿದೆ. ವಾರಾಂತ್ಯದ ಪಂಚಾಯಿತಿಯಲ್ಲಿ ಈ ಜಗಳದ ವಿಚಾರವಾಗಿ ಯಾವ ಚರ್ಚೆ ನಡೆಯಲಿದೆ ಎಂಬ ಕುತೂಹಲವೂ ವೀಕ್ಷಕರಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

