'ಬಾಹುಬಲಿ' ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್! ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ಅವರ ಅಭಿಮಾನಿಗಳಿಗೆ ನಟನ ಕುರಿತ ಸಿಕ್ರೇಟ್ ಒಂದು ರಿವೀಲ್ ಆಗಿದೆ. ನಿಮಗೆ ಗೊತ್ತಾ? ಪ್ರಭಾಸ್ ಶೂಟಿಂಗ್ ಸೆಟ್ನಲ್ಲಿದ್ದಾಗ ಒಂದು ದಿನದ ಊಟಕ್ಕೆ ಎಷ್ಟು ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ ಎಂದು?
ಪ್ರಭಾಸ್ ಸಿಕ್ರೇಟ್
ಈ ಬಗ್ಗೆ ರೆಬಲ್ ಸ್ಟಾರ್ ಕೃಷ್ಣಂ ರಾಜು ಪತ್ನಿ ಶ್ಯಾಮಲಾ ದೇವಿ ಮಾತನ್ನಾಡಿದ್ದಾರೆ. ಕೃಷ್ಣಂ ರಾಜು, ಪ್ರಭಾಸ್ ಅವರ ದೊಡ್ಡಪ್ಪ ಆಗಿದ್ದರು. ಶ್ಯಾಮಲಾ ದೇವಿ ಅವರು ತಮ್ಮ ಕುಟುಂಬದ ಆಹಾರ ಪದ್ಧತಿ, ಆಹಾರದ ರಹಸ್ಯಗಳ ಬಗ್ಗೆ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಕೃಷ್ಣಂ ರಾಜು ಮತ್ತು ಪ್ರಭಾಸ್ ಇಬ್ಬರೂ ಹೆಚ್ಚು ಕಡಿಮೆ ಒಂದೇ ರೀತಿಯ ಆಹಾರ ಇಷ್ಟಪಡುತ್ತಾರೆ. ಸಾಂಪ್ರದಾಯಿಕ ಮನೆಯಲ್ಲಿ ಮಾಡಿದ ಭಕ್ಷ್ಯಗಳು ಅಂದ್ರೆ ಇಷ್ಟ. ನಮ್ಮ ಪ್ರಬಾಸ್ ವಿಶೇಷವಾಗಿ ಮೀನು ಸೂಪ್ ಇಷ್ಟಪಡುತ್ತಾರೆ.
ಹಿಂದೆ ನಮ್ಮ ಪತಿ ಕೃಷ್ಣಂ ರಾಜು ಶೂಟಿಂಗ್ ಸೆಟ್ಗಳಿಗೆ ಊಟಕ್ಕಾಗಿಯೇ ದೊಡ್ಡ ಗಾಡಿಗಳನ್ನು ಕಳುಹಿಸುತ್ತಿದ್ದರು. ಅದರಲ್ಲಿರುವ ಭಕ್ಷ್ಯಗಳಿಗಾಗಿ ಅವರ ಜೊತೆ ಕೆಲಸ ಮಾಡೋರು ಕಾತುರದಿಂದ ಕಾಯುತ್ತಿದ್ದರು. ಇನ್ನು, ಪ್ರಭಾಸ್ ಚೀಟ್ ಡೇಯಲ್ಲಿದ್ದಾಗ ಮೀನು ಸೂಪ್ ತಯಾರಿಸಿಕೊಳ್ಳುತ್ತಿದ್ದರು. ಕೃಷ್ಣಂ ರಾಜು ಆಹರಾ ತಯಾರಿಸುವ ಸಂದರ್ಭದಲ್ಲಿ ಉಪ್ಪು ಮತ್ತು ಮಸಾಲೆಗಳು ಸರಿಯಾಗಿವೆಯೋ ಇಲ್ಲವೋ ಅನ್ನೋದನ್ನ ನಿಖರವಾಗಿ ಹೇಳುತ್ತಿದ್ದರು. ಅವರು ಕೇವಲ ಒಬ್ಬರಿಗಾಗಿ ಮಾತ್ರ ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ನಾಲ್ಕು ಜನರಿಗೆ ಊಟ ಹಾಕೋದ್ರಲ್ಲಿ ತುಂಬಾ ಇಷ್ಟಪಡುತ್ತಿದ್ದರು ಎಂಬ ವಿಚಾರವನ್ನ ತಿಳಿಸಿದ್ದಾರೆ.
ಇನ್ನು ಕೃಷ್ಣಂ ರಾಜು ಕುಟುಂಬ ರಾಜಮನೆತನದ ಆತಿಥ್ಯ ಪದ್ಧತಿ ಅಳವಡಿಸಿಕೊಂಡಿದೆ. ವಿಶೇಷವಾಗಿ ಮೀನು ಸೂಪ್, ಬಿರಿಯಾನಿ ಮತ್ತು ಮಾಂಸಾಹಾರಿ ಭಕ್ಷ್ಯಗಳು ಅಂದರೆ ತುಂಬಾ ಇಷ್ಟ. ಕೃಷ್ಣಂ ರಾಜು ಸ್ವತಃ ಭಕ್ಷ್ಯಗಳನ್ನು ಪರಿಶೀಲಿಸಿ ಅತಿಥಿಗಳು ಇಷ್ಟಪಡುವುದನ್ನೇ ಮಾಡಿ ಬಡಿಸುತ್ತಿದ್ದರು ಎಂಬ ವಿಚಾರವನ್ನು ಹೇಳಿ ಭಾವುಕರಾಗಿದ್ದಾರೆ.
ಈಗ ಪ್ರಭಾಸ್ ಕೂಡ ಅದೇ ಸಂಪ್ರದಾಯ ಮುಂದುವರಿಸಿದ್ದಾರೆ. ಅವರು ಎಲ್ಲಿಗೆ ಹೋದರೂ, ಯಾವುದೇ ಶೂಟಿಂಗ್ ಸ್ಥಳದಲ್ಲಿ ತಮ್ಮ ಮನೆಯಲ್ಲಿ ಬೇಯಿಸಿದ ರುಚಿಕರ ಊಟವನ್ನು ತಮ್ಮ ಸುತ್ತಲಿನ ಹತ್ತು ಅಥವಾ ಇಪ್ಪತ್ತು ಜನರಿಗೆ ಕಳುಹಿಸುತ್ತಾರೆ. ಇವತ್ತು ಪ್ರಭಾಸ್ ಕೂಡ ತಾವು ಒಬ್ಬರೆ ಊಟ ಮಾಡೋದಿಲ್ಲ. ತಮ್ಮ ಸಿಬ್ಬಂದಿ ಮತ್ತು ಸಹ ನಟರಿಗೂ ಊಟ ತಯಾರಿಸುತ್ತಾರೆ. ಪ್ರತಿದಿನ ಮಟನ್, ಕೋಳಿ, ಸೀಗಡಿ, ಏಡಿ, ವಿವಿಧ ರೀತಿಯ ಮೀನು ಕರಿ, ಬಿರಿಯಾನಿ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ ಎಂದಿದ್ದಾರೆ.
ಇದಕ್ಕಾಗಿಯೇ ನಮ್ಮ ಮನೆಯಲ್ಲಿ ಅಡುಗೆಯವರ ವಿಶೇಷ ತಂಡ ಕೆಲಸ ಮಾಡುತ್ತಿರುತ್ತದೆ. ಪ್ರಭಾಸ್ ಅವರ ಶೂಟಿಂಗ್ ಸೆಟ್ಗಳಲ್ಲಿ ಒಂದು ದಿನದ ಊಟದ ವೆಚ್ಚ ಸುಮಾರು 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬೇರೆಯವರಿಗೆ ಊಟ ಮಾಡಿ ಬಡಿಸೋದನ್ನು ಪ್ರಭಾಸ್ ತುಂಬಾ ಇಷ್ಟಪಡುತ್ತಾರೆ ಎಂದು ಶ್ಯಾಮಲಾ ತಿಳಿಸಿದ್ದಾರೆ.

