ಸತತ ಎರಡು ಪ್ರಬಲ ಚಂಡಮಾರುತಗಳ ಪರಿಣಾಮದಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಹವಾಮಾನ ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆ ಇದೆ. ಈಶಾನ್ಯ ಮುಂಗಾರು ಅತ್ಯಂತ ಸಕ್ರಿಯ ಹಂತವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಇಂತಹ ಅಸಾಮಾನ್ಯ ಬೆಳವಣಿಗೆ ಕಂಡುಬಂದಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನಾಡಿದ್ದು ನವೆಂಬರ್ 13ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ಇನ್ನು 24 ಗಂಟೆಗಳಲ್ಲಿ ಅದು ಮತ್ತಷ್ಟು ತೀವ್ರಗೊಂಡು ಸುಸ್ಪಷ್ಟ ವಾಯುಭಾರ ಕುಸಿತವಾಗಿ ಮಾರ್ಪಡುವ ನಿರೀಕ್ಷೆಯಿದೆ. ಒಂದು ವೇಳೆ ಇದು ವಾಯುಭಾರ ಕುಸಿತದ ತೀವ್ರ ಸ್ವರೂಪ ಅಥವಾ ಚಂಡಮಾರುತವಾಗಿ ಅಭಿವೃದ್ಧಿಗೊಂಡರೆ, ಈಗಾಗಲೇ ಮುರುಸು ತೀವ್ರ ಚಂಡಮಾರುತ ಮತ್ತು ಅರ್ನಬ್ ಅತಿ ತೀವ್ರ ಚಂಡಮಾರುತಗಳ ರಚನೆಯಿಂದ ಗಮನ ಸೆಳೆದಿರುವ ಈ ವರ್ಷದ ಚಂಡಮಾರುತ ಋತುವಿಗೆ ಮತ್ತೊಂದು ಸೇರ್ಪಡೆಯಾಗಲಿದೆ.
Watch | ಆಂಧ್ರ ಕರಾವಳಿಗೆ ಅಪ್ಪಳಿಸಿದ 'ಮುರಸು' ಚಂಡಮಾರುತ; ಭಾರಿ ಅನಾಹುತಸ್ಕೈಮೆಟ್ ವೆದರ್ನ ಹವಾಮಾನ ವಿಭಾಗದ ಉಪಾಧ್ಯಕ್ಷ ಮಹೇಶ್ ಪಲಾವತ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿಗೆ ಪ್ರತಿಕ್ರಿಯಿಸಿ, ಅಲ್ಪಾವಧಿಯಲ್ಲಿ ಒಂದರ ಹಿಂದೊಂದರಂತೆ ಹವಾಮಾನ ವ್ಯವಸ್ಥೆಗಳು ರೂಪುಗೊಳ್ಳುತ್ತಿರುವುದು ಅಸಾಮಾನ್ಯ ಬೆಳವಣಿಗೆ. ಅದರಲ್ಲೂ ಸತತ ಎರಡು ಚಂಡಮಾರುತಗಳು ಕಾಣಿಸಿಕೊಂಡಿರುವುದು ಅಪರೂಪ ಎಂದು ಹೇಳಿದ್ದಾರೆ.
ಸತತ ಎರಡು ಚಂಡಮಾರುತಗಳು ರೂಪುಗೊಳ್ಳುವುದು ಅತ್ಯಂತ ಅಪರೂಪ. ಇದೀಗ ಮತ್ತೊಂದು ಹವಾಮಾನ ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆಯಿದೆ. ಇದು ವಾಯುಭಾರ ಕುಸಿತವಾಗಿ ತೀವ್ರಗೊಳ್ಳಬಹುದು. ಆದರೆ, ಅದನ್ನು ಕಾದು ನೋಡಬೇಕಿದೆ. ವಿವಿಧ ಹವಾಮಾನ ಮಾದರಿಗಳು ವಿಭಿನ್ನ ಪಥಗಳನ್ನು ಸೂಚಿಸುತ್ತಿವೆ. ಕೆಲವು ಆಂಧ್ರಪ್ರದೇಶದತ್ತ ಸಾಗುವ ಸಾಧ್ಯತೆ ವ್ಯಕ್ತಪಡಿಸಿದರೆ, ಇನ್ನು ಕೆಲವು ಮ್ಯಾನ್ಮಾರ್ನತ್ತ ಚಲಿಸಬಹುದು ಎಂದು ಅಂದಾಜಿಸಿವೆ. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದ್ದಾರೆ.
'ಅರ್ನಬ್' ಚಂಡಮಾರುತ ಪೀಡಿತ ಆಂಧ್ರಕ್ಕೆ ನೆರವಿನ ಹಸ್ತ: ವಿದ್ಯುತ್ ಪೂರೈಕೆ ಮರುಸ್ಥಾಪನೆಗೆ ನೆರವು- ಸಿಎಂ ಶಿವಕುಮಾರ್ಸದ್ಯ ಈ ಹವಾಮಾನ ವ್ಯವಸ್ಥೆಯು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇಲ್ಲ. ಆದರೆ, ಸಾಮಾನ್ಯಕ್ಕಿಂತ ಹೆಚ್ಚಿನ ಸಮುದ್ರದ ಮೇಲ್ಮೈ ತಾಪಮಾನವು ಮತ್ತಷ್ಟು ತೀವ್ರಗೊಳ್ಳಲು ಪೂರಕವಾಗಬಹುದು ಎಂದಿದ್ದಾರೆ. ಸದ್ಯಕ್ಕೆ ಉತ್ತರ ತಮಿಳುನಾಡಿಗೆ ಯಾವುದೇ ಅಪಾಯವಿಲ್ಲ ಎಂದು ಬಹುತೇಕ ಹವಾಮಾನ ಮಾದರಿಗಳು ಸೂಚಿಸುತ್ತಿವೆ. ಕೆಲವು ಮಾದರಿಗಳು ಈ ವ್ಯವಸ್ಥೆಯು ಈಶಾನ್ಯ ದಿಕ್ಕಿನತ್ತ ಮರು ತಿರುವು ಪಡೆಯುವ ಸಾಧ್ಯತೆಯನ್ನೂ ವ್ಯಕ್ತಪಡಿಸಿವೆ.
ಈ ಬೆಳವಣಿಗೆಯು ಈ ವರ್ಷ ಸಂಭವಿಸುತ್ತಿರುವ ಚಂಡಮಾರುತಗಳ ಆವರ್ತನದ ಬಗ್ಗೆಯೂ ಗಮನ ಸೆಳೆದಿದೆ. ಸಾಮಾನ್ಯವಾಗಿ ಉತ್ತರ ಹಿಂದೂ ಮಹಾಸಾಗರದಲ್ಲಿ ನೈಋತ್ಯ ಮತ್ತು ಈಶಾನ್ಯ ಮುಂಗಾರು ಅವಧಿಗಳೆರಡನ್ನೂ ಸೇರಿಸಿ ವಾರ್ಷಿಕವಾಗಿ ಸುಮಾರು ಮೂರರಿಂದ ನಾಲ್ಕು ಚಂಡಮಾರುತಗಳು ರೂಪುಗೊಳ್ಳುತ್ತವೆ ಎಂದು ಪಲಾವತ್ ತಿಳಿಸಿದ್ದಾರೆ.
ಈ ಹವಾಮಾನ ವ್ಯವಸ್ಥೆಯು ಚಂಡಮಾರುತವಾಗಿ ತೀವ್ರಗೊಂಡರೆ, ಈ ವರ್ಷ ಮೂರನೇ ಚಂಡಮಾರುತವಾಗಲಿದೆ. ಈಶಾನ್ಯ ಮುಂಗಾರು ಮುಗಿಯಲು ಇನ್ನೂ ಎರಡು ತಿಂಗಳು ಬಾಕಿಯಿದೆ" ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಇತ್ತೀಚೆಗೆ ಒಂಬತ್ತು ಮಂದಿ ಮೀನುಗಾರರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಚೆನ್ನೈ ಮೀನುಗಾರಿಕಾ ಬಂದರಿನಿಂದ ಸಮುದ್ರಕ್ಕೆ ತೆರಳಿರುವ ಎಲ್ಲಾ ಯಾಂತ್ರೀಕೃತ ದೋಣಿಗಳು ಮತ್ತು ಮೋಟಾರು ಅಳವಡಿಸಿರುವ ಸಾಂಪ್ರದಾಯಿಕ ಮೀನುಗಾರಿಕಾ ದೋಣಿಗಳು ನವೆಂಬರ್ 12ರೊಳಗೆ ದಡಕ್ಕೆ ಮರಳುವಂತೆ ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.
ದಕ್ಷಿಣ ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ
ಇಂದು ಬುಧವಾರ ರಾಮನಾಥಪುರಂ, ತೂತುಕುಡಿ ಮತ್ತು ತಿರುನಲ್ವೇಲಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ (RMC) ತಿಳಿಸಿದೆ.
ಕಾವೇರಿ ತೀರ ಪ್ರದೇಶದ ಕೆಲವು ಭಾಗಗಳು ಹಾಗೂ ದಕ್ಷಿಣ ತಮಿಳುನಾಡಿನ ತಂಜಾವೂರು, ತಿರುವಾರೂರು, ಮೈಲಾಡುತುರೈ, ನಾಗಪಟ್ಟಣಂ, ಪುದುಕ್ಕೊಟ್ಟೈ, ಶಿವಗಂಗಾ, ಮಧುರೈ, ವಿರುದುನಗರ, ಥೇಣಿ, ತೆಂಕಾಸಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು ಮತ್ತು ಪುದುಚೇರಿಯ ಉಳಿದ ಭಾಗಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗಬಹುದು.
ನವೆಂಬರ್ 12ರಂದು ಕಾವೇರಿ ತೀರ ಮತ್ತು ದಕ್ಷಿಣ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ನವೆಂಬರ್ 13ರಂದು ಮಳೆ ಪ್ರಮಾಣ ಕಡಿಮೆಯಾಗಲಿದ್ದು, ತಮಿಳುನಾಡಿನ ಬಹುತೇಕ ಭಾಗಗಳಲ್ಲಿ ಒಣ ಹವಾಮಾನ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ನವೆಂಬರ್ 14ರಂದು ಚೆನ್ನೈ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಸೇರಿದಂತೆ ಕರಾವಳಿ ಹಾಗೂ ಉತ್ತರ ಜಿಲ್ಲೆಗಳ ಹಲವು ಭಾಗಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 15ರಂದು ಕಾವೇರಿ ಡೆಲ್ಟಾ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ನವೆಂಬರ್ 16ರಂದು ನೀಲಗಿರಿ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯಿದೆ.

