ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ಆಟ ಹಾಗೂ ಭಾವನೆಗಳ ಪರೀಕ್ಷೆ ಮುಂದುವರಿದಿದೆ. ಮನೆಯೊಳಗೆ ಸದಾ ಜಟಾಪಟಿ, ಟಾಸ್ಕ್ ಹಾಗೂ ಮನಸ್ತಾಪಗಳಲ್ಲಿ ತೊಡಗಿರುತ್ತಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಈ ಬಾರಿ ಅತಿ ದೊಡ್ಡ ಭಾವುಕ ಉಡುಗೊರೆಯೊಂದನ್ನು ನೀಡಿದ್ದಾರೆ. ಮನೆಯಿಂದ ದೂರವಿರುವ ಸ್ಪರ್ಧಿಗಳ ಮನಸ್ಸಿಗೆ ಮುಟ್ಟುವ ಸನ್ನಿವೇಶವೊಂದು ನಿರ್ಮಾಣವಾಗಿದ್ದು, ಪ್ರೋಮೋ ಬಿಡುಗಡೆಯಾಗಿದೆ.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ವಿಶೇಷವಾದ ಟಾಸ್ಕ್ ಆಯೋಜನೆಗೊಂಡಿದೆ. ಮನೆಯ ಅಂಚೆಪೆಟ್ಟಿಗೆಯನ್ನು ತೆರೆದು, ಕುಟುಂಬದವರಿಂದ ಬಂದಿರುವ ಪ್ರೀತಿಯ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಪತ್ರಗಳು ಬ್ಲ್ಯಾಂಕ್ ಇದ್ದು, ಟಾಸ್ಕ್ ಗೆದ್ದು ಅದನ್ನು ಪಡೆದುಕೊಳ್ಳಬೇಕು. ಹೀಗಾಗಿ, ಹೆಚ್ಚಿನ ಜಟಾಪಟಿ ನಿರೀಕ್ಷೆ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.