2016ರಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದ ಮುದ್ದು ಚೆಲುವೆ, 2026ರಲ್ಲಿ ಸತತ ನಾಲ್ಕು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ. ನೂರಾರು ಕೋಟಿ ಕಲೆಕ್ಷನ್ ಮಾಡುವ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳು ಇಡೀ ವಿಶ್ವದ ಗಮನವನ್ನೇ ಸೆಳೆಯುತ್ತಿವೆ. ಸೌಥ್ ಕಲಾವಿದರಿಗೆ ಇಂದು ಬಾಲಿವುಡ್‌ನಿಂದಲೂ ಒಳ್ಳೆಯ ಅವಕಾಶಗಳು ಸಿಗಲಾರಂಭಿಸಿವೆ. ಹಾಗೆಯೇ ಬಾಲಿವುಡ್ ತಾರೆಯರು ಸೌಥ್ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ಇಂದು ನಾವು ಹೇಳುತ್ತಿರುವ ಸೌಥ್ ನಟಿ 2026ರಲ್ಲಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

2016ರಲ್ಲಿ ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ಮಮಿತಾ ಬೈಜು (Mamitha Baiju). ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಆಕ್ಟಿವ್ ಆಗಿರುವ ಮಮಿತಾ ಬೈಜು, ಬಬ್ಲಿ ರೋಲ್‌ಗಳ ಮೂಲಕ ತಮ್ಮ ಛಾಪು ಮೂಡಿಸುತ್ತಿದ್ದಾರೆ. 2024ರಲ್ಲಿ ಬಿಡುಗಡೆಯಾದ ಪ್ರೇಮಲು (Premalu) ಸಿನಿಮಾ ಮಮಿತಾ ಬೈಜುಗೆ ದೊಡ್ಡ ಬ್ರೇಕ್ ನೀಡಿತು. 2025ರ ಡ್ಯೂಡ್ (Dude) ಸಹ ಕಮರ್ಷಿಯಲ್ ಹಿಟ್ ಕೊಟ್ಟ ಸಿನಿಮಾ ಆಗಿದೆ.

ಈ ವರ್ಷ ಮಮಿತಾ ಬೈಜು ನಟನೆಯ ನಾಲ್ಕು ಸಿನಿಮಾಗಳು ಬಿಡುಗಡೆಗೊಂಡಿವೆ. ನಾಲ್ಕು ಸಿನಿಮಾಗಳು ಹಿಟ್ ಲಿಸ್ಟ್‌ಗೆ ಸೇರಿಕೊಂಡಿದ್ದು, ಬಾಕ್ಸ್‌ ಆಫಿಸ್‌ನಲ್ಲಿ ಅಬ್ಬರಿಸಿವೆ. ನಾಲ್ಕು ಸಿನಿಮಾಗಳ ಪಾತ್ರಗಳ ಹೆಸರುಗಳಿಂದಲೇ ಮಮತಾ ಬೈಜು ಅವರನ್ನು ಗುರುತಿಸಲಾಗುತ್ತಿದೆ. ಈ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಮಮಿತಾ ಹೊಂದಿದ್ದಾರೆ.

ಜನ್ ನಾಯಗನ್: (Jana Nayagan)

ಬಜೆಟ್: 300-325 ಕೋಟಿ

ಬಾಕ್ಸ್ ಆಫಿಸ್ ಕಲೆಕ್ಷನ್: 350-500 ಕೋಟಿ

ವಿಶ್ವನಾಥ್ & ಸನ್ಸ್ (Vishwanath & Sons)

ಬಜೆಟ್: 130 ಕೋಟಿ

ಬಾಕ್ಸ್ ಆಫಿಸ್ ಕಲೆಕ್ಷನ್: 300 ಕೋಟಿ

ಬೆತ್ಲೆಹೆಮ್ ಕುಟುಂಬ ಯುನಿಟ್ (Bethlehem Kudumba Unit)

ಬಜೆಟ್: 25 ಕೋಟಿ

ಬಾಕ್ಸ್ ಆಫಿಸ್ ಕಲೆಕ್ಷನ್: 330 ಕೋಟಿ

Kara ಸಿನಿಮಾ 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ್ರೂ 50 ಕೋಟಿ ಮಾತ್ರ ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಆಗಿದೆ. ಆದ್ರೆ ಚಿತ್ರದಲ್ಲಿ ನಟನೆಗೆ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.

ಪ್ರೇಮಲು ಚಿತ್ರದಲ್ಲಿ ರೀನು ಪಾತ್ರದಲ್ಲಿ ಮಮಿತಾ ಬೈಜು ಲೀಡ್ ರೋಲ್‌ನಲ್ಲಿ ನಟಿಸಿದ ಮೊದಲ ಸಿನಿಮಾ ಆಗಿದೆ. ಈ ಚಿತ್ರವು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಗೆ ಪಾತ್ರವಾಯಿತು ಮತ್ತು ಇದು ಪ್ರಸ್ತುತ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರಗಳಲ್ಲಿ ಒಂದಾಗಿದೆ. 9 ಕೋಟಿಯ ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 130 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.