ಬೆಂಗಳೂರು: ಕನ್ನಡದ ಸೂಪರ್ ಸ್ಟಾರ್‌ ಪೈಕಿಗಳಲ್ಲಿ ಮಂಜುಳಾ ಸಹ ಒಬ್ಬರಾಗಿದ್ದಾರೆ. ದಶಕಗಳ ಕಾಲ ಸಿನಿಮಾ ಅಂಗಳವನ್ನು ಆಳಿದ ನಟಿಯರಲ್ಲಿ ಮಂಜುಳಾ ಸಹ ಬರುತ್ತಾರೆ. ದುರಂತ ಸಾವಿನಿಂದ ಚಿಕ್ಕ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಇಂದಿಗೂ ಮಂಜುಳಾ ಅವರ ಪತಿ ಮತ್ತು ಪುತ್ರನ ಬಗ್ಗೆ ಒಂದಿಷ್ಟು ಸುದ್ದಿಗಳು ಬರುತ್ತಿರುತ್ತವೆ. ಆದ್ರೆ ಅಚ್ಚರಿ ವಿಷಯ ಏನೆಂದ್ರೆ ಮಂಜುಳಾ ಅವರು ತಮ್ಮ ಮದುವೆಯ ವಿಷಯವನ್ನು ಅತ್ಯಂತ ರಹಸ್ಯವಾಗಿಟ್ಟಿದ್ದರು. ಕಾರ್ಯಕ್ರಮವೊಂದರಲ್ಲಿ ನಟ ದ್ವಾರಕೀಶ್ ಅವರು ಈ ವಿಷಯವನ್ನು ಎಲ್ಲರ ಮುಂದೆ ಬಹಿರಂಗಗೊಳಿಸಿದ್ದರು.

ವರ್ಷದ 365 ದಿನವೂ ಬ್ಯುಸಿಯಾಗಿರುತ್ತಿದ್ದ ನಟಿ

1970 ಮತ್ತು 1980 ರ ದಶಕದಲ್ಲಿ ಕನ್ನಡ ಚಲನಚಿತ್ರಗಳ ಅತ್ಯಂತ ಯಶಸ್ವಿ ಮತ್ತು ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ತಮ್ಮ ಅತ್ಯಮೂಲ್ಯ ಕಲಾ ಸೇವೆಗೆ ಹಲವು ಪ್ರಶಸ್ತಿಗಳನ್ನು ಮಂಜುಳಾ ತಮ್ಮದಾಗಿಸಿಕೊಂಡಿದ್ದರು. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಶೋಕ್, ಪ್ರಭಾಕರ್, ಶ್ರೀನಾಥ್ ಸೇರಿದಂತೆ ದೊಡ್ಡ ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ ಅಂದು ಮಂಜುಳಾ ಕಾಲ್‌ಶೀಟ್‌ಗಾಗಿ ನಿರ್ದೇಶಕರು, ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದರು. ವರ್ಷದ 365 ದಿನಗಳಲ್ಲಿಯೂ ಮಂಜುಳಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತಿದ್ದರು.

ಚಾಮುಂಡಿ ದೇವಿ ಮುಂದೆ ಮದುವೆ

ತುಮಕೂರು ಜಿಲ್ಲೆಯವರಾದ ಮಂಜುಳಾ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ನಿರ್ದೇಶಕ ಮತ್ತು ನಿರ್ಮಾಪಕ ಅಮೃತಮ್ ಅವರನ್ನು ಮದುವೆಯಾಗುತ್ತಾರೆ. ಈ ಮದುವೆ ಅತ್ಯಂತ ಅತ್ಯಾಪ್ತರ ಸಮ್ಮುಖದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಡೆಯುತ್ತದೆ. ಆದರೆ ಈ ಮದುವೆ ವಿಷಯವನ್ನು ಮಂಜುಳಾ ಯಾರ ಜೊತೆಯಲ್ಲಿಯೂ ಶೇರ್ ಮಾಡಿಕೊಂಡಿರಲಿಲ್ಲ. ಮದುವೆ ಬಳಿಕ ಚೆನ್ನೈನಲ್ಲಿ ಮನೆ ಮಾಡಿಕೊಂಡಿದ್ದು, ಸಂಸಾರ ಸಹ ಆರಂಭಿಸಿದ್ದರು.

ಮದುವೆ ವಿಷಯ ರಿವೀಲ್ ಮಾಡಿದ್ದು ದ್ವಾರಕೀಶ್!

1981ರಲ್ಲಿ ಬಿಡುಗಡೆಯಾದ ಗುರುಶಿಷ್ಯರು ಸಿನಿಮಾದಲ್ಲಿ ಡಾ. ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್, ಶಿವರಾಂ, ಎಂ. ಎಸ್. ಉಮೇಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ದ್ವಾರಕೀಶ್ ಅವರು ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಗುರುಶಿಷ್ಯರು ಸಿನಿಮಾಗೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಂಜುಳಾ ಪತಿ ಅಮೃತಮ್ ಸಹ ಬಂದಿದ್ದರು.

ಅಂದು ಮಂಜುಳಾ ಸೇರಿದಂತೆ ಗುರುಶಿಷ್ಯರು ಸಿನಿಮಾದ ಸದಸ್ಯರು ಸೇರಿದಂತೆ ಪ್ರಮುಖ ಗಣ್ಯರೆಲ್ಲರೂ ವೇದಿಕೆ ಮೇಲಿದ್ದರು. ಅಮೃತಮ್ ವೀಕ್ಷಕರ ಸಾಲಿನಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದರು. ಪತಿ ಅಮೃತಮ್ ವೀಕ್ಷಕರ ಸಾಲಿನಲ್ಲಿ ಕುಳಿತಿರೋದನ್ನು ನೋಡಿ ಮಂಜುಳಾ ಅವರಿಗೆ ಕಸಿವಿಸಿ ಉಂಟಾಗಿತ್ತು. ಕೂಡಲೇ ನಿರ್ಮಾಪಕರೂ ಆದ ದ್ವಾರಕೀಶ್ ಅವರನ್ನು ಕರೆದು, ನನ್ನ ಗಂಡ ಅಮೃತಮ್ ವೀಕ್ಷಕರ ಗ್ಯಾಲರಿಯಲ್ಲಿದ್ದು, ಅವರನ್ನು ವೇದಿಕೆ ಮೇಲೆ ಆಹ್ವಾನಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಮುಂಗಾರುಮಳೆ ನಂತ್ರ ಪ್ರೇಕ್ಷಕರನ್ನು ಭಾವುಕರನ್ನಾಗಿಸಿ ಕೋಟಿ ಕೋಟಿ ಲಾಭ ಗಳಿಸಿದ ಅಜಯ್ ರಾವ್ - ಪೂಜಾ ಗಾಂಧಿ ನಟನೆಯ ಕನ್ನಡದ ಸಿನಿಮಾ

ಗಾಸಿಪ್, ವಿವಾದಗಳ ಸುಳಿಯಲ್ಲಿ ಸಿಲುಕದ ಸಭ್ಯ ನಟಿ

ಈ ವಿಷಯ ತಿಳಿಯುತ್ತಿದ್ದಂತೆ ದ್ವಾರಕೀಶ್, ಕಾರ್ಯಕ್ರಮದಲ್ಲಿ ಎಲ್ಲರೆದರು ಮಂಜುಳಾ ಮದುವೆ ವಿಷಯವನ್ನು ರಿವೀಲ್ ಮಾಡುತ್ತಾರೆ. ಅಂದು ಗುರುಶಿಷ್ಯರು ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಚಿತ್ರಕ್ಕಿಂತ ಮಂಜುಳಾ ಮದುವೆ ಹೆಚ್ಚು ಸದ್ದು ಮಾಡಿತ್ತು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿಯೂ ನಟಿಸಿದ್ರೂ ಮಂಜುಳಾ ಯಾವುದೇ ಗಾಸಿಪ್ ಸುಳಿಯಲ್ಲಿ ಸಿಲುಕದ ಸಭ್ಯ ನಟಿಯಾಗಿದ್ದರು.

ಇದನ್ನೂ ಓದಿ: ಆಪ್ತಮಿತ್ರ ನಂತರ ಭಯ ಹುಟ್ಟಿಸಿದ ಕನ್ನಡದ ಸಿನಿಮಾ: ಬೆಸ್ಟ್ ಹಾರರ್ ಥ್ರಿಲ್ಲರ್ ಕಥೆ!