Soujanya Case Update: ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! SIT ಮುಂದೆ ಅಧಿಕಾರಿಗಳಿಂದ ಮಹತ್ವದ ಹೇಳಿಕೆ
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ (SIT) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಕರಣದ ಆರಂಭಿಕ ಹಂತದಲ್ಲಿ ತನಿಖೆ ನಡೆಸಿ, ಸಾಕ್ಷ್ಯನಾಶ ಹಾಗೂ ಕರ್ತವ್ಯ ಲೋಪದ ಆರೋಪ ಎದುರಿಸುತ್ತಿರುವ ಮಾಜಿ ತನಿಖಾಧಿಕಾರಿಗಳಾದ ಬೆಳತಂಗಡಿ ಮಾಜಿ ಇನ್ಸ್‌ಪೆಕ್ಟರ್ ಭಾಸ್ಕರ್ ರೈ, ಧರ್ಮಸ್ಥಳ ಮಾಜಿ ಪಿಎಸ್‌ಐ ಯೋಗೇಶ್ ನಾಯಕ್ ಹಾಗೂ ಸಿಐಡಿ ನಿವೃತ್ತ ಡಿವೈಎಸ್‌ಪಿ ರುದ್ರಮುನಿ ಅವರನ್ನು ಎಸ್ಐಟಿ ಅಧಿಕಾರಿಗಳು ಇನ್‌ಕ್ಯಾಮೆರಾ ವಿಚಾರಣೆಗೊಳಪಡಿಸಿ ಸುದೀರ್ಘ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ತಾವಾಗಿಯೇ ಯಾವುದೇ…
