ಮಂಗಳೂರು, ಅಕ್ಟೋಬರ್ 30: ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರುತನಿಖೆ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದ್ದು ಹಾಲಿ ಎಸ್ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್ ಅವರನ್ನು ರಿಲೀವ್ ಮಾಡಲಾಗಿದ್ದು, ಹೊಸ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ರನ್ನು ನೇಮಿಸಲಾಗಿದೆ. ASP ವಂಕಟೇಶ್ ಪ್ರಸನ್ನ ಬದಲಿಗೆ ACP ಶ್ರೀನಿಧಿ ಅವರ ನೇಮಕವೂ ಆಗಿದೆ. SIT ಮುಖ್ಯಸ್ಥರಾಗಿ ಇಂದಿನಿಂದಲೇ ಚೇತನ್ ಸಿಂಗ್ ರಾಥೋಡ್ ತನಿಖೆ ಮುಂದುವರೆಸಲಿದ್ದಾರೆ.
SITಯಿಂದ ಹಿಂದಿನ ಅಧಿಕಾರಿಗಳ ವಿಚಾರಣೆ
ಇನ್ನು ಕೇಸ್ ಸಂಬಂಧ ಹಿಂದಿನ ಅಧಿಕಾರಿಗಳಾಗಿದ್ದಅಂದಿನ ASI ಕಲೈಮಾರ್, ಹೆಡ್ಕಾನ್ಸ್ಟೇಬಲ್ ಸುಂದರ್ ಶೆಟ್ಟಿ ಮತ್ತು ಹೆಚ್ಸಿ ಸವಿತಾ ಶೆಟ್ಟಿ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳೂರಿನ ಎಸ್ಐಟಿ ಕಚೇರಿಯಲ್ಲಿ ಇವರಿಂದ ಮಾಹಿತಿ ಸಂಗ್ರಹ ಕಾರ್ಯ ನಡೆದಿದೆ. ಎಸ್ಐಟಿ ಅಧಿಕಾರಿಗಳು ಸಣ್ಣ ಕ್ಯಾಮೆರಾ ಹಾಗೂ ಕಾಲರ್ ಮೈಕ್ ತರಿಸಿಕೊಂಡಿದ್ದು, ನಿನ್ನೆ ರಾತ್ರಿ 9 ಗಂಟೆವರೆಗೂ ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭಾಸ್ಕರ್ ರೈ, ಸಿಐಡಿ ಡಿವೈಎಸ್‌ಪಿ ರುದ್ರಮುನಿ ಅವರನ್ನು ಎಸ್ಐಟಿ ವಿಚಾರಣೆ ನಡೆಸಿತ್ತು. ಇಂದು ವಿಚಾರಣೆಗೆ ಹಾಜರಾಗಿರುವರಿಂದಲೂ ಸಹ ರಾತ್ರಿವರೆಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಸೌಜನ್ಯ-ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ!: ತನಿಖೆ ನಡೆಸುವಂತೆ ಎಸ್ಐಟಿಗೆ ದೂರು ಸಲ್ಲಿಕೆ
ಇನ್ನು ಬೆಳ್ತಂಗಡಿ ಪೊಲೀಸರು ಮಾಡಿದ್ದ ತನಿಖೆಯ ಆಧಾರದಲ್ಲೇ CID ತನಿಖೆ ಮಾಡಲಾಗಿತ್ತು. ಆಗ ಲಭ್ಯ ಇದ್ದ ದಾಖಲೆ, ಸಾಕ್ಷಿ ಅಡಿಯಲ್ಲಿ ಇನ್ವೆಸ್ಟಿಗೇಷನ್ ನಡೆದಿತ್ತು. ತನಿಖೆಯಲ್ಲಿ ಯಾವುದೇ ಲೋಪ ಎಸಗಿಲ್ಲ ಎಂದು ರುದ್ರಮುನಿ ಅವರು ವಿಚಾರಣೆ ವೇಳೆ ತಿಳಿಸಿದ್ದಾರಂತೆ. ತಾನು ಸೌಜನ್ಯ ಕೇಸ್ ತನಿಖಾಧಿಕಾರಿ ಆಗಿರಲಿಲ್ಲ.ಕ್ರೈಂ ಸೀನ್ಗೆ ಭೇಟಿ ಮಾಡಿದಾಗ ಎಲ್ಲ ಎವಿಡೆನ್ಸ್ ಕಲೆಕ್ಟ್ ಮಾಡಿದ್ದೆ. ಅದನ್ನೇ ನಂತರದ ತನಿಖೆಗೆ ಕೊಟ್ದಿದ್ದೆ. ನನಗೆ ಯಾರೂ ಯಾವ ಒತ್ತಡ ಹಾಕಿಲ್ಲ. ತನ್ನ ಕರ್ತವ್ಯ ಸರಿಯಾಗಿಯೇ ಮಾಡಿದ್ದೇನೆ ಎಂದು ಯೋಗೇಶ್ ಹೇಳಿದ್ದರೆ, ಭಾಸ್ಕರ್ ರೈ ಅವರು ಕೂಡ ಇದೇ ರೀತಿ ಎಸ್ಐಟಿ ಎದುರು ಹೇಳಿಕೆ ನೀಡಿದ್ದಾರಂತೆ. ತಾನು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಅಂದಿನ ಆರೋಪಿ ಸಂತೋಷ್ ರಾವ್ ವಿಚಾರಣೆ ವೇಳೆ ಹೇಳಿದ್ದನ್ನೇ ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿರೋದಾಗಿ ತಿಳಿದುಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

