ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟಿವಿ9 ಲೈಫ್‌ಸ್ಟೈಲ್, ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ 2026ಕ್ಕೆ ‘ಪ್ರೇಮದ ಊರಲಿ’ ಚಲನಚಿತ್ರದ ನಾಯಕ ನಟ ಶ್ರೀರಾಮ್ ಮತ್ತು ನಾಯಕಿ ನಟಿ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ಭರ್ಜರಿ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡರು.

ನಟಿ ತಪಸ್ವಿನಿ ಮಾತನಾಡಿ, ‘ಕರ್ನಾಟಕದ ಜನರು ಪ್ರೇಮದ ಊರಲಿ ಚಿತ್ರಕ್ಕೆ ನೀಡಿದ ಪ್ರೀತಿ ನಿಜಕ್ಕೂ ಆಶೀರ್ವಾದ. ಈ ಯಶಸ್ಸನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಿರ್ದೇಶಕರು ಮತ್ತು ನಿರ್ಮಾಣ ತಂಡಕ್ಕೆ ಈ ಗೆಲುವಿನ ಬಹುಪಾಲು ಶ್ರೇಯಸ್ಸು ಸಲ್ಲುತ್ತದೆ. ಮಿಸ್ಟರ್ ಜ್ಯಾಕ್ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು. ನಟ ಶ್ರೀರಾಮ್, ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಜನರೇ ಈ ಚಿತ್ರವನ್ನು ದೊಡ್ಡ ಬ್ಲಾಕ್‌ಬಸ್ಟರ್ ಮಾಡಿದ್ದಾರೆ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.