ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು, ಅವುಗಳ ಗುರಿ ಮತ್ತು ಪ್ರಗತಿಯನ್ನು ಒಂದೇ ವೇದಿಕೆಯಲ್ಲಿ ತೋರಿಸುವ ‘ಸಿಎಂ ಡ್ಯಾಶ್‌ಬೋರ್ಡ್‌’ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶುಕ್ರವಾರ ಚಾಲನೆ ನೀಡಿದರು.

ಎಲ್ಲ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳ ಜತೆಗೆ ಸಾರ್ವಜನಿಕರಿಗೂಈ ಡ್ಯಾಶ್‌ಬೋರ್ಡ್‌ ಮಾಹಿತಿ ಮುಕ್ತ ವಾಗಿ ಲಭ್ಯವಾಗಲಿದೆ. ರಾಜ್ಯ ಸರ್ಕಾರದ ಐದೂ ಗ್ಯಾರಂಟಿಗಳ ಫಲಾನುಭವಿಗಳು ಮತ್ತು ಯೋಜನೆಗಳಿಗೆ ವೆಚ್ಚವಾದ ಹಣ,ಪ್ರತಿ ಕಾಮಗಾರಿಯ ಪ್ರಗತಿ ವರದಿ, ಸಕಾಲ ಸೇವೆಗಳ ಪ್ರಗತಿ, ನೇರ ನಗದು ವರ್ಗಾವಣೆ ವಿವರ, 4.6 ಲಕ್ಷ ಸರ್ಕಾರಿ ನೌಕರರ ಹಾಜರಾತಿ ಮತ್ತು ಗೈರು ಹಾಜರಿಯನ್ನು ರಾಜ್ಯದ ಪ್ರತಿಯೊಬ್ಬರೂ ಈ ಡ್ಯಾಶ್‌ಬೋರ್ಡ್‌ನಲ್ಲಿ ವೀಕ್ಷಿಸಬಹುದು. ಈ ವಿವರಗಳು ಪ್ರತಿ ದಿನವೂ ಅಪ್‌ಡೇಟ್‌ ಆಗುತ್ತವೆ. ಸಿಎಂ ಡ್ಯಾಶ್‌ಬೋರ್ಡ್‌ ವಿಳಾಸ : https://cmdashboard.karnataka.gov.in

ಎಲ್ಲ ಇಲಾಖೆಗಳ ಪ್ರಗತಿ ಕುರಿತು ನಾನು ನೋಡುವ ಮಾಹಿತಿಯನ್ನೇ ರಾಜ್ಯದ ಸಮಸ್ತ ನಾಗರಿಕರೂ ನೋಡಬೇಕು ಎಂಬ ಉದ್ದೇಶದಿಂದ ಈ ಡ್ಯಾಶ್‌ಬೋರ್ಡ್‌ ಆರಂಭಿಸಲಾಗಿದೆ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ

261121-4-2010014677