ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅವರು compromised PM ಎಂದು ಟೀಕಿಸಿರುವುದಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಿರೋಧ ಪಕ್ಷಕ್ಕೆ ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಇದರಲ್ಲಿ "1962ರ ಅವಮಾನ"ಕ್ಕಾಗಿ ಕಾಂಗ್ರೆಸ್ ಕ್ಷಮೆ ಕೇಳುತ್ತದೆಯೇ ಮತ್ತು ಭಾರತವನ್ನು "ಬಡ ರಾಷ್ಟ್ರ"ವನ್ನಾಗಿ ಏಕೆ ಇರಿಸಿತ್ತು ಎಂಬ ಪ್ರಶ್ನೆಗಳು ಸೇರಿವೆ.

'ಎಕ್ಸ್' (X) ತಾಣದಲ್ಲಿ ಪೋಸ್ಟ್ ಮಾಡಿರುವ ರಿಜಿಜು, "ಕಾಂಗ್ರೆಸ್ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕು:

1. 1962ರಲ್ಲಿ ನನ್ನ ಗ್ರಾಮವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಈ 1962ರ ಅವಮಾನಕ್ಕಾಗಿ ಕಾಂಗ್ರೆಸ್ ಕ್ಷಮೆ ಕೇಳುತ್ತದೆಯೇ?

2. ಕಾಂಗ್ರೆಸ್ ಭಾರತವನ್ನು ಬಡ ರಾಷ್ಟ್ರವನ್ನಾಗಿ ಇರಿಸಿತ್ತು. ಏಕೆ?

3. ಭಾರತವನ್ನು 'ಹಾವು ಹಿಡಿಯುವವರ ನಾಡು' ಎಂದು ಏಕೆ ಕರೆಯಲಾಗುತ್ತಿತ್ತು?

4. ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು 'ಹಿಂದೂ ಬೆಳವಣಿಗೆ ದರ' ಎಂದು ಕರೆದು ಏಕೆ ಅವಮಾನಿಸಲಾಯಿತು?" ಎಂದು ಪ್ರಶ್ನಿಸಿದ್ದಾರೆ.

Congress must answer 4 questions:

1. My village was occupied by China in 1962. Will Congress apologize for 1962 humiliation?
2. Congress kept India a poor nation. Why?
3. Why was India called land of snake charmers?
4. Why was India's economy insulted as Hindu rate of growth? pic.twitter.com/ojrdYYDFLA

— Kiren Rijiju (@KirenRijiju) November 20, 2026
'Compromised PM' ಪೋಸ್ಟ್: ಭಾರತಕ್ಕೆ ಮಸಿ ಬಳಿಯಲು ರಾಹುಲ್‌ಗೆ ಸುಪಾರಿ; BJP ತೀವ್ರ ವಾಗ್ದಾಳಿ

ಚೀನಾದಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಸಂದರ್ಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡುವೆ ನಡೆದ ತ್ರಿಪಕ್ಷೀಯ ಸಭೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯನ್ನು ಟೀಕಿಸಿದ ನಂತರ, ರಿಜಿಜು ಈ ಪ್ರತಿಕ್ರಿಯೆ ನೀಡಿದ್ದಾರೆ.

ಸಭೆಯಲ್ಲಿ ಈ ಮೂವರು ನಾಯಕರು ಕುಳಿತಿರುವ ಫೋಟೋವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ, ಭಾರತದ ಪ್ರಧಾನಿ ಈ ಮೇಜಿನ ಬಳಿ ಕುಳಿತಿರುತ್ತಿದ್ದರು. ಆದರೆ, ಸಂಧಾನಕ್ಕೆ ಒಳಗಾದ ಪ್ರಧಾನಿಯೊಬ್ಬರು ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ" ಎಂದು 'ಎಕ್ಸ್'ನಲ್ಲಿ ಬರೆದುಕೊಂಡಿದ್ದರು.

ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, ರಾಹುಲ್ ಗಾಂಧಿ ಅವರು ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಈ ಹೇಳಿಕೆಯು ಬಿಜೆಪಿ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಹಲವು ಬಿಜೆಪಿ ನಾಯಕರು, ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ರಾಹುಲ್ ಗಾಂಧಿ ಅವರಿಗೆ "ಯಾವುದೇ ಅರಿವಿಲ್ಲ" ಎಂದು ಆರೋಪಿಸಿದರು.