ತಮಿಳುನಾಡು: ಹೃದಯಾಘಾತದಿಂದ ನಿಧನರಾದ ಕೊಳತ್ತೂರು ಶಾಸಕ ವಿ.ಎಸ್.ಬಾಬು ಅವರ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾಗಿಯಾಗಿದ್ದರು.
ಈ ವೇಳೆ ಪ್ರಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಸಿಎಂ ವಿಜಯ್ ಸಾಗಿದರು. ಇನ್ನು ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಚಪ್ಪಲಿ ಧರಿಸದೇ 2.3 ಕಿ.ಮೀ. ಬರಿಗಾಲಿನಲ್ಲಿ ನಡೆದು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.
ವಿ.ಎಸ್. ಬಾಬು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಕೊಳತ್ತೂರು ಕ್ಷೇತ್ರದಲ್ಲಿ ಸೋಲಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.
75 ವರ್ಷದ ಬಾಬು ಅವರು, 2026ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರನ್ನು ಸೋಲಿಸುವ ಮೂಲಕ ರಾಜಕೀಯ ವಲಯದಲ್ಲಿ ಭಾರಿ ಗಮನ ಸೆಳೆದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ಇಲ್ಲಿನ ಎಂಜಿಎಂ (MGM) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಎರಡು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದ ಅವರು, ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಸಿಎಂ ವಿಜಯ್ ಅವರು ವಿ.ಎಸ್.ಬಾಬು ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿಗಳು ಬಾಬು ಅವರ ಪಾದಗಳನ್ನು ಮುಟ್ಟಿ ಅಂತಿಮ ನಮನ ಸಲ್ಲಿಸಿದರು. ನಂತರ ಅಂತ್ಯಕ್ರಿಯೆಯ ಮೆರವಣಿಗೆ ವೇಳೆ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಮನೆಯಿಂದ ಮೆರವಣಿಗೆಯಲ್ಲಿ ಸಾಗುವ ವಾಹನದವರೆಗೆ ಪಾರ್ಥಿವ ಶರೀರಕ್ಕೆ ಹೆಗಲು ಕಟ್ಟರು. ಈ ವೇಳೆ ತಮ್ಮ ಪಾದರಕ್ಷೆಗಳನ್ನ ತೆಗೆಯುವ ಮೂಲಕ ಭಾವನಾತ್ಮಕವಾಗಿ ಗಮನ ಸೆಳೆದರು. ನಂತರ ಬರೀ ಗಾಲಲ್ಲೇ 2.3 ಕಿಲೋ ಮೀಟರ್ ದೂರ ನಡೆದರು.
ರಾಜ್ಯ ಸಚಿವರುಗಳು, ಟಿವಿಕೆ ಶಾಸಕರು, ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ವಿಜಯ್ ಅವರುಗಳು ಸಾಥ್ ನೀಡಿದರು. ಮೆರವಣಿಗೆಯ ನಂತರ ಕುಟುಂಬದ ಸದಸ್ಯರು ಮತ್ತು ಹಿರಿಯ ನಾಯಕರ ಸಮ್ಮುಖದಲ್ಲಿ ಸ್ಮಶಾನದಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.

