ಬೆಂಗಳೂರು: ವಾಟ್ಸ್ಆ್ಯಪ್ ವಿಡಿಯೊ ಕರೆಯ ಮೂಲಕ ಯುವತಿಯೊಂದಿಗೆ ಮಾತನಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಪಪ್ರಚಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಣ್ಣ ಕೈಗಾರಿಕಾ ಸಚಿವ ವಿಜಯಾನಂದ ಕಾಶಪ್ಪನವರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸಚಿವರು ತಮ್ಮ ಆಪ್ತ ಸಹಾಯಕ ವಿಕಾಸ್ ಅವರ ಮೂಲಕ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
‘ವಿಡಿಯೊವನ್ನು ಕೆಲವು ಕಿಡಿಗೇಡಿಗಳು ತಿರುಚಿ, ತಮ್ಮ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಪ್ರಸಾರ ಆಗುತ್ತಿರುವ ವಿಡಿಯೊ ಹಾಗೂ ಆಡಿಯೊ ನೈಜವಾಗಿಲ್ಲ. ಅದನ್ನು ತಿರುಚಿ, ತಪ್ಪು ಅರ್ಥ ಬರುವಂತೆ ವಿಡಿಯೊ ರೂಪದಲ್ಲಿ ಹಂಚಿಕೊಳ್ಳಲಾಗಿದೆ’ ಎಂದು ಸಚಿವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
261105-51-1042479300

