ಬೆಳಗಾವಿ, ನವೆಂಬರ್​​ 05: ಒಂದು ತಿಂಗಳಿಂದ ನಿರಂತರ ಹೋರಾಟ, ರಾಷ್ಟ್ರೀಯ ಹೆದ್ದಾರಿ ಬಂದ್, ಪಾದಯಾತ್ರೆ, ಕರ್ನಾಟಕ ಬಂದ್, ಜೈಲ್ ಭರೋ ಚಳವಳಿ ಹೀಗೆ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರಿಗೆ ಕಡೆಗೂ ತಮ್ಮ ಬೇಡಿಕೆಗೆ ಸ್ಪಂದನೆ ತಕ್ಕ ಮಟ್ಟಿಗೆ ಸಿಕ್ಕಿದೆ. ಪ್ರತಿ ಟನ್ ಕಬ್ಬಿಗೆ ರೂ. 3,600 ದರ ನಿಗದಿ ಮಾಡಲಾಗಿದ್ದು, ಸಚಿವ ಸತೀಶ್​ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ನಮ್ಮ ಪ್ರತಿಭಟನೆಗೆ ಸಿಕ್ಕ ಮೊದಲ ಜಯ ಎಂದಿರುವ ರೈತ ಮುಖಂಡ ಚೂನಪ್ಪ ಪೂಜಾರಿ, ಆದರೆ ಹೋರಾಟದ ಸ್ಥಳಕ್ಕೆ ಬಂದು ಅಧಿಕೃತವಾಗಿ ಘೋಷಿಸುವಂತೆ ಪಟ್ಟುಹಿಡಿದಿದ್ದಾರೆ.

ಪ್ರತಿ ಟನ್ ಕಬ್ಬಿಗೆ 3,600 ದರ ನಿಗದಿ: ಸತೀಶ್ ಜಾರಕಿಹೊಳಿ‌ ಘೋಷಣೆ

ಪ್ರತಿ ಟನ್ ಕಬ್ಬಿಗೆ 5,500 ರೂ. ನಿಗದಿಗೆ ಆಗ್ರಹಿಸಿ ಸತತ ಒಂದು ತಿಂಗಳಿನಿಂದ ರೈತರು ಪಟ್ಟು ಹಿಡಿದಿದ್ದರು. ಜೈಲ್ ಭರೋ ಚಳವಳಿ ತೀವ್ರಗೊಳ್ಳುತ್ತಿದ್ದಂತೆಯೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಬೆಳಗಾವಿ ಡಿಸಿ ಕಚೇರಿಯಲ್ಲಿ ಬುಧವಾರ ಸಭೆ ಮಾಡಿದ್ದರು.

ಇದನ್ನೂ ಓದಿ: ಕಗ್ಗಂಟಾದ ಕಬ್ಬಿನ ಬೆಲೆ: ಸಂಧಾನ ಸಭೆಗಳು ವಿಫಲ; ಡಿಸಿ ಕಚೇರಿಗೆ ಬೀಗ ಹಾಕಲು‌ ಯತ್ನಿಸಿದ ರೈತರು

ಚರ್ಚೆ ಬಳಿಕ ಪ್ರತಿ ಟನ್ ಕಬ್ಬಿಗೆ 3,600 ದರ ನಿಗದಿಪಡಿಸಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ‌ ಘೋಷಿಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಯ ಇಳುವರಿ ಪ್ರಮಾಣ ಹೆಚ್ಚಿರುವುದರಿಂದ ಈ ಜಿಲ್ಲೆಯಲ್ಲಿ ಮಾತ್ರ ಪ್ರತಿ ಟನ್ ಕಬ್ಬಿಗೆ 3,600 ರೂ ನಿಗದಿ ಮಾಡಿದ್ದು, ಇಳುವರಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ಕಡಿಮೆ ದರ ನೀಡಲಾಗುತ್ತೆ.

LIVE TV

ನಮ್ಮ ಪ್ರತಿಭಟನೆಗೆ ಸಿಕ್ಕ ಮೊದಲ ಜಯ ಎಂದ ಚೂನಪ್ಪ ಪೂಜಾರಿ

ಇನ್ನು ಈ ಕುರಿತಾಗಿ ಮಾತನಾಡಿರುವ ರೈತ ಮುಖಂಡ ಚೂನಪ್ಪ ಪೂಜಾರಿ, ‘ಪ್ರತಿ ಟನ್ ಕಬ್ಬಿಗೆ 3600 ರೂ ಬೆಲೆ ಘೋಷಿಸಿರುವುದು, ನಮ್ಮ ಪ್ರತಿಭಟನೆಗೆ ಸಿಕ್ಕ ಮೊದಲ ಜಯ. ಆದರೆ ಹೋರಾಟದ ಸ್ಥಳಕ್ಕೆ ಬಂದು ಸಚಿವರೇ ಅಧಿಕೃತವಾಗಿ ಘೋಷಿಸಲಿ’ ಎಂದು ಅವರು ಒತ್ತಾಯಿಸಿದ್ದಾರೆ.

ನಗರದಾದ್ಯಂತ ನಿಷೇಧಾಜ್ಞೆ ಜಾರಿ: ಕೆರಳಿದ ರೈತರು 

ಇಂದು ಬೆಳಗಾವಿಗೆ ಜೈಲ್ ಭರೋ ಪಾದಯಾತ್ರೆ ತಲುಪಲಿದೆ. ಹೀಗಾಗಿ, ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರಿಗೆ ನಿಷೇಧಾಜ್ಞೆ ಜಾರಿ ರೈತರನ್ನ ಕೆರಳಿಸಿದೆ. ‘ಲಾಠಿ ಜಾರ್ಜ್ ಮಾಡಲಿ, ಗುಂಡು ಹಾಕಲಿ ನಾವು ನುಗ್ಗುತ್ತೇವೆ’ ಅಂತಾ ರೈತರು ಹೇಳಿದ್ದು, ಅವರನ್ನ ತಡೆಯುವ ಪ್ಲ್ಯಾನ್​ನಲ್ಲಿ ಪೊಲೀಸರಿದ್ದಾರೆ.


ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.