ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಗಂಭೀರ ಹಾಗೂ ರೋಚಕವಾದ ಹೊಸ ಟಾಸ್ಕ್ ಒಂದನ್ನು ನೀಡಿದ್ದಾರೆ. ಮನೆಯೊಳಗೆ ಸ್ಪರ್ಧಿಗಳಾದ ಸೌಂದರ್ಯಾ ಹಾಗೂ ಧನುಷ್ ಅವರಿಗೆ ಮನೆಯಿಂದ ಪತ್ರಗಳು ಬಂದಿದ್ದು, ಆ ಪತ್ರಗಳನ್ನು ಪಡೆಯಲು ಅವರು ಕಠಿಣ ಸವಾಲನ್ನು ಎದುರಿಸಬೇಕಿದೆ.
ಬಿಗ್ ಬಾಸ್ ಸೂಚನೆಯಂತೆ, ಸ್ಪರ್ಧಿಗಳು ತಮ್ಮ ಪತ್ರಗಳನ್ನು ಪಡೆದುಕೊಳ್ಳಲು ಮನೆಯ ಮುಖ್ಯ ದ್ವಾರದ ಮೂಲಕ ಹೊರಹೋಗಬೇಕು. ಅಲ್ಲಿ ಇರಿಸಲಾಗಿರುವ ಹಲವಾರು ಪತ್ರಗಳ ರಾಶಿಯ ಮಧ್ಯೆ ತಮ್ಮ ಮನೆಯವರ ಪತ್ರವನ್ನು ಹುಡುಕಿಕೊಂಡು ಕೇವಲ ಒಂದು ನಿಮಿಷದ ಅವಧಿಯೊಳಗೆ ವಾಪಸ್ ಬಂದು ಮನೆಯೊಳಗೆ ಪ್ರವೇಶಿಸಬೇಕು. ಒಂದು ವೇಳೆ ನಿಗದಿತ ಒಂದು ನಿಮಿಷದ ಒಳಗೆ ಹಿಂತಿರುಗದಿದ್ದರೆ ಮುಖ್ಯ ದ್ವಾರ ಮುಚ್ಚಲ್ಪಡುತ್ತದೆ ಎಂದು ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ. ಈ ಸವಾಲು ಸ್ಪರ್ಧಿಗಳಲ್ಲಿ ಹಾಗೂ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

