ಬಿಗ್​​ಬಾಸ್​​ನ ಪ್ರತಿ ಸೀಸನ್​​ನಲ್ಲೂ ಒಂದಲ್ಲ ಒಂದು ಜೋಡಿ ಆಗುತ್ತಲೇ ಇರುತ್ತದೆ. ಕೆಲ ಜೋಡಿ ಬಿಗ್​​ಬಾಸ್ ಮನೆಯ ಹೊರಗೂ ಉಳಿದುಕೊಂಡರೆ ಬಹುತೇಕ ಜೋಡಿಗಳು ಬಿಗ್​​ಬಾಸ್ ಮನೆಯಲ್ಲೇ ಅಂತ್ಯವಾಗುತ್ತವೆ. ಈಗಾಗಲೇ ಬಿಗ್​​ಬಾಸ್ ಮನೆಯಲ್ಲಿ ಒಂದು ಜೋಡಿ ಇದೆ. ಯಶಸ್​​ ಮತ್ತು ಆಸಿಯಾರನ್ನು ಪ್ರೇಕ್ಷಕರು ಜೋಡಿಯಂತೆ ನೋಡುತ್ತಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ, ಕೆಲವೊಮ್ಮೆ ಪ್ರೀತಿ-ಪ್ರೇಮದ ಮಾತುಗಳು ಸಹ ಪರೋಕ್ಷವಾಗಿ ನುಸುಳುತ್ತವೆ. ಇದೀಗ ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ಜೋಡಿ ಆಗುವ ಸುಳಿವು ಸಣ್ಣಗೆ ಸಿಗುತ್ತಿದೆ.

ತಾಂಡವ್ ಹಾಗೂ ಸೋನಿಕಾ ನಡುವೆ ಇಂಥಹದ್ದೊಂದು ಕೆಮಿಸ್ಟ್ರಿ ಶುರುವಾಗುತ್ತಿರುವುದನ್ನು ಪ್ರೇಕ್ಷಕರು ಗಮನಿಸುತ್ತಿದ್ದಾರೆ. ಈ ವಾರವೆಲ್ಲ ಬಿಗ್​​ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಸ್ವಯಂವರ ನಡೆಯಿತು. ಈ ಟಾಸ್ಕ್​​ನಲ್ಲಿ ತಾಂಡವ್ ಅವರು ಸೌಂದರ್ಯಾ ತಂದೆಯ ಪಾತ್ರವಹಿಸಿದ್ದರು. ಅವರಿಗೆ ಜೋಡಿಯಾಗಿ ಪ್ರಶಾಂತ್ ಅವರಿಗೆ ಮಹಿಳೆಯ ವೇಷ ತೊಡಿಸಲಾಗಿತ್ತು. ಆದರೆ ತಾಂಡವ್ ಆರಂಭದಲ್ಲಿಯೇ ತಮಗೆ ಪತ್ನಿಯಾಗಿ ಸೋನಿಕಾ ಅವರನ್ನು ನೀಡುವಂತೆ ಮನವಿ ಮಾಡಿದ್ದರು. ಆದರೆ ಬಿಗ್​ಬಾಸ್ ಒಪ್ಪಿರಲಿಲ್ಲ.

ಶುಕ್ರವಾರ ಪ್ರಸಾರವಾದ ಎಪಿಸೋಡಿನಲ್ಲಿ, ಟಾಸ್ಕಿನ ಮಧ್ಯೆ ಸೋನಿಕಾ, ಗಾನವಿ, ತಾಂಡವ್ ಮತ್ತು ಗಗನ್ ಸೋಫಾ ಮೇಲೆ ಕುಳಿತು ಮದುವೆಯ ವಿಷಯ, ಒಳ್ಳೆಯ ಗಂಡು ಸಿಗುವುದು ಎಷ್ಟು ಕಷ್ಟ ಎಂಬಿತ್ಯಾದಿ ವಿಷಯಗಳನ್ನು ಮಾತನಾಡುತ್ತಿದ್ದರು. ಈ ವೇಳೆ ತಾಂಡವ್ ಕೆಲ ತಮಾಷೆ ವಿಷಯಗಳನ್ನು ಹೇಳಿದರು. ಬಳಿಕ ಸೋನಿಕಾ, ತಾಂಡವ್ ಅವರನ್ನು ಉದ್ದೇಶಿಸಿ, ‘ನಿಮ್ಮನ್ನು ಮದುವೆ ಆಗುವ ಹುಡುಗಿ ಸಖತ್ ಲಕ್ಕಿ, ಅವಳಿಗೆ ಬೋರ್ ಆಗಲು ನೀವು ಬಿಡುವುದಿಲ್ಲ, ಸದಾ ಅವಳನ್ನು ಎಂಟರ್ಟೈನ್​​ ಮಾಡುತ್ತಲೇ ಇರುತ್ತೀರ’ ಎಂದು ಪ್ರಶಂಸಿದರು.

ಇದನ್ನೂ ಓದಿ:ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ

ಬಳಿಕ ಗಗನ್, ‘ಸೋನಿಕಾ ಮತ್ತು ತಾಂಡವ್ ಯಾಕೆ ಮದುವೆ ಆಗಬಾರದು?’ ಎಂದು ನೇರವಾಗಿ ಹೇಳಿದರು. ಆಗ ಇಬ್ಬರ ಮುಖದಲ್ಲಿಯೂ ಸಣ್ಣ ಮಂದಹಾಸ ಮೂಡಿತೇ ವಿನಃ ಇಬ್ಬರೂ ಸಹ ಬೇಡ, ಹಾಗಲ್ಲ ಹೀಗೆ ಎಂದೆಲ್ಲ ಸ್ಪಷ್ಟನೆ ಕೊಡುವ ಪ್ರಯತ್ನವನ್ನೂ ಮಾಡಲಿಲ್ಲ. ಸೋನಿಕಾ ಬಗ್ಗೆ ತಾಂಡವ್ ಅವರಿಗೆ ಸಣ್ಣ ಸಾಫ್ಟ್ ಕಾರ್ನರ್ ಇದ್ದೇ ಇದೆ. ಸೋನಿಕಾ ಅವರಿಗೂ ತಾಂಡವ್ ಅವರ ಬಗ್ಗೆ ಗೌರವ, ಕಾಳಜಿಗಳು ಸ್ಪಷ್ಟವಾಗಿ ಕಾಣುತ್ತದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ