ನವದೆಹಲಿ: ನಿತೇಶ್ ತಿವಾರಿ ನಿರ್ದೇಶನ, ಯಶ್, ರಣಬೀರ್ ಕಪೂರ್ ಮುಖ್ಯಭೂಮಿಕೆಯ ರಾಮಾಯಣ ಸಿನಿಮಾ ಪಾಕಿಸ್ತಾನದಲ್ಲೂ ಸದ್ದು ಮಾಡಿದ್ದು ಅಲ್ಲಿನ ಹಿಂದೂ ಜನರು ಸಿನಿಮಾದ ಬಿಡುಗಡೆಗೆ ಆಗ್ರಹಿಸಿದ್ದಾರೆ. ಹಿಂದೂ ಸಮುದಾಯ ಸದಸ್ಯರು ಕರಾಚಿಯ ಬೀದಿಯಲ್ಲಿ ಮೆರವಣಿಗೆ ಹೋಗುತ್ತ ಸಿನಿಮಾ ಪರ ಘೋಷಣೆ ಕೂಗಿದ್ದಾರೆ. ಅಲ್ಲದೆ ಭಕ್ತಿ ಗೀತೆಗಳನ್ನು ಹಾಡುತ್ತ ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಅ.26ಕ್ಕೆ ಯೂಟ್ಯೂಬರ್ ಸುಮಿತ್ ಚಾಂಗ್ರಾ ದೃಶ್ಯದ ತುಣುಕೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸಿನಿಮಾದ ಕರಾಚಿ ಹಿಂದೂ ಅಭಿಮಾನಿಗಳು ಬೀದಿಯಲ್ಲಿ ರಾಮಾಯಣ ಪೋಸ್ಟರ್ ಹಿಡಿದು ಭಜನೆಗಳನ್ನು ಹಾಡುತ್ತ ಮೆರವಣಿಗೆ ಸಾಗಿದರು. ಸದಸ್ಯರು ಕರಾಚಿ ದೇಗುಲವೊಂದಕ್ಕೆ ಪೋಸ್ಟರ್ ಅಂಟಿಸುವುದು ವಿಡಿಯೋದಲ್ಲಿ ಕಾಣಿಸಿದೆ. ಸಿನಿಮಾಗೆ ಶುಭಾಶಯ ಕೋರಿರುವ ಸದಸ್ಯರು ಸಿನಿಮಾ ಕರಾಚಿಯಲ್ಲೂ ಬಿಡುಗಡೆಯಾಗಲಿ ಎಂದಿದ್ದಾರೆ. ಸಿನಿಮಾ ನ.5ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.
4,000 ಕೋಟಿ ರೂ. ಬಜೆಟ್
ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾದ ಒಟ್ಟು ಬಜೆಟ್ ಬರೋಬ್ಬರಿ 4000 ಕೋಟಿ ರೂಪಾಯಿಗಳಿಗೂ ಅಧಿಕವಾಗಿದ್ದು, ಈ ಚಿತ್ರದ ಮೊದಲ ಭಾಗ ಭಾರತದಲ್ಲಿ ನವೆಂಬರ್ 5ರಂದು ಬಿಡುಗಡೆಯಾಗುತ್ತಿದೆ.
ಚಿನ್ನದ ದಶಮುಖ ರಾವಣನನ್ನು ಧರಿಸಿ ಮಿಂಚಿದ ಯಶ್
ಯಶ್ ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದ ಜಾಗತಿಕ ಪ್ರೀಮಿಯರ್ ಅಮೆರಿಕಾದ ಲಾಸ್ ಏಂಜಲೀಸ್ನಲ್ಲಿ ಕಡುಗಪ್ಪು ಬಣ್ಣದ ಸೂಟ್ನಲ್ಲಿ ಕಂಗೊಳಿಸಿದರು. ಈ ಸೂಟಿನ ಮೇಲೆ ಅವರು ಧರಿಸಿದ್ದ ರಾವಣನ ಹತ್ತು ತಲೆಗಳ ವಿನ್ಯಾಸದ, ಚಿನ್ನದ ಸರಗಳು ನೇತಾಡುವ ಆಕರ್ಷಕ ಚಿನ್ನದ ಬ್ರೂಚ್ ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ಡಾರ್ಕ್ ಸನ್ಗ್ಲಾಸ್, ಕಿವಿಯಲ್ಲಿ ಹೂಪ್ ಇಯರಿಂಗ್ಸ್ ಧರಿಸಿ ಆಕರ್ಷಕವಾಗಿ ಕಂಡುಬಂದರು.

