ಬೆಂಗಳೂರು, ನವೆಂಬರ್​​ 27: ಸಿಎಂ ಡಿಕೆ ಶಿವಕುಮಾರ್​​ ಅವರ ಸದಾಶಿವನಗರದ ಮನೆ, ವಿಧಾನಸೌಧದಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನಮ್ಮ ಯಾತ್ರಿ ಆ್ಯಪ್​ನಲ್ಲಿ ಆಟೋ ಬುಕ್ಕಿಂಗ್ ಮಾಡಿದ್ದ ಕಾರ್ತಿಕ್ ಎಂಬಾತ ಆಟೋ ಚಾಲಕನನ್ನು ಸಿಎಂ ಡಿಕೆಶಿ ನಿವಾಸದ ಮುಂದಿನ ಬ್ಯಾರಿಕೇಡ್ ಬಳಿ ಬರಲು ಹೇಳಿದ್ದ. ನಿಗದಿತ ಸ್ಥಳಕ್ಕೆ ಬಂದಿದ್ದ ಆಟೋ ಚಾಲಕ ಭಗವಂತರಾಯ, ಕಾರ್ತಿಕ್​ಗೆ ಕರೆ ಮಾಡಿ ಸ್ಥಳಕ್ಕೆ ಬಂದಿರೋದಾಗಿ ತಿಳಿಸಿದ್ದಾರೆ. ಆಗ ಅಲ್ಲಿದ್ದ ಪೊಲೀಸರಿಗೆ ಫೋನ್ ಕೊಡು ಎಂದು ಕಾರ್ತಿಕ್​​ ಹೇಳಿದ್ದು, ಈ ವೇಳೆ ಸಿಎಂ ಮನೆ ಮತ್ತು ವಿಧಾನಸೌಧದಲ್ಲಿ ಬಾಂಬ್ ಇಟ್ಟಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. ಸಿಎಂ ಬೆಂಗಾವಲು ಹೋಗುವಾಗ ಬ್ಲಾಸ್ಟ್ ಆಗುತ್ತೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇನ್ನು ಘಟನೆ ಸಂಬಂಧ ಸದಾಶಿವನಗರ ಪೊಲೀಸರಿಂದ ಆರೋಪಿ ಕಾರ್ತಿಕ್​​ನನ್ನು ಬಂಧಿಸಲಾಗಿದೆ. ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಆರೋಪಿ ವರ್ತಿಸುತ್ತಿದ್ದು,
ಈ ಹಿಂದೆಯೂ ಹಲವು ಬೆದರಿಕೆ ಕರೆ ಮಾಡಿದ್ದ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.