ಬೆಂಗಳೂರು: ಹುದ್ದೆ ಕಳೆದುಕೊಳ್ಳುವ ಆತಂಕದಲ್ಲಿರುವ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಈ ಅಧಿಕಾರಿಗಳು ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.

ಈ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 362 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ನೇಮಕಾತಿಗೆ ಸಿಂಧುತ್ವದ ಮುದ್ರೆ ಒತ್ತಲು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ– 2022’ ಅನ್ನು ಸುಪ್ರೀಂ ಕೋರ್ಟ್‌ ಅ. 29ರಂದು ರದ್ದುಪಡಿಸಿತ್ತು.

‘ನೈಸರ್ಗಿಕ ನ್ಯಾಯದ ತತ್ವಗಳ ಪ್ರಕಾರ, ಯಾರ ಉದ್ಯೋಗವು ಪ್ರಶ್ನಾರ್ಹ ಆಗಿದೆಯೊ ಮತ್ತು ಆಕ್ಷೇಪಾರ್ಹ ತೀರ್ಪಿನಿಂದ ಪ್ರತಿಕೂಲ ಪರಿಣಾಮಕ್ಕೆ ಒಳಗಾಗಿದ್ದಾರೊ ಅಂತಹ ಎಲ್ಲ ಅಭ್ಯರ್ಥಿಗಳು ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ಉದ್ಯೋಗವನ್ನು ರದ್ದುಗೊಳಿಸುವ ಮೊದಲು ತಮ್ಮ ವಾದ ಮಂಡಿಸಲು ಅವರಿಗೆ ಅವಕಾಶ ನೀಡಬೇಕಿತ್ತು. ಅಲ್ಲದೆ, ಆಯ್ಕೆಯಾದ ಹಲವು ಅಭ್ಯರ್ಥಿಗಳು ಮೂಲ ಅರ್ಜಿಯಲ್ಲಿ ಪ್ರತಿವಾದಿಗಳಾಗಿದ್ದರೂ, ವಿಶೇಷ ಮೇಲ್ಮನವಿ ಇತ್ಯರ್ಥಪಡಿಸುವಾಗ ಈ ವಿಷಯವನ್ನು ಕೋರ್ಟಿನ ಗಮನಕ್ಕೆ ತರಲಾಗಿರಲಿಲ್ಲ. ಈ ವಿಶೇಷ ಅರ್ಜಿಯು, ಮೂಲ ಅರ್ಜಿಯಲ್ಲಿ ನೀಡಲಾದ ಮಧ್ಯಂತರ ಆದೇಶದಿಂದ ಉದ್ಭವಿಸಿರುವುದರಿಂದ, ನ್ಯಾಯಮಂಡಳಿ (ಕೆಎಟಿ) ಮುಂದೆ ಇದ್ದ ಪ್ರತಿವಾದಿಗಳನ್ನು ಮೇಲ್ಮನವಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿಲ್ಲ’ ಎಂದು ಮರು ಪರಿಶೀಲನಾ ಅರ್ಜಿಯಲ್ಲಿ ಸರ್ಕಾರ ಹೇಳಿದೆ.

‘ಕಾಯ್ದೆಯನ್ನು ‘ಅಸಾಂವಿಧಾನಿಕ’ ಎಂದು ಘೋಷಿಸಿದರೆ ಈ ಸಾಲಿನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಹುದ್ದೆ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಈ ತೀರ್ಪಿನಿಂದ ಬಾಧಿತರಾದ ಎಲ್ಲ ಅಭ್ಯರ್ಥಿಗಳ ವಾದವನ್ನು ಕೋರ್ಟ್‌ ಅತ್ಯಗತ್ಯವಾಗಿ ಆಲಿಸಬೇಕಿತ್ತು. ಹಾಗೆ ಮಾಡದಿರುವುದು ನ್ಯಾಯದ ವೈಫಲ್ಯ ಮತ್ತು ಸಹಜ ನ್ಯಾಯದ ತತ್ವಗಳ ಉಲ್ಲಂಘನೆಗೆ ಕಾರಣವಾಗಿದೆ. ‘ಪ್ರಬೋಧ್ ವರ್ಮಾ ವಿರುದ್ಧ ಉತ್ತರ ಪ್ರದೇಶ ರಾಜ್ಯ’ (1984) ಪ್ರಕರಣದಲ್ಲಿ ಸ್ಥಾಪಿತವಾದ ಕಾನೂನು ತತ್ವದ ಪ್ರಕಾರವೂ ಇದು ಸರಿಯಲ್ಲ. ಅಲ್ಲದೆ, ನೇಮಕಗೊಂಡ ಅನೇಕ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನ ಮುಂದೆ ಪ್ರತಿವಾದಿಗಳಲ್ಲ. ತಮ್ಮ ಪರ ವಾದ ಮಂಡಿಸಲು ತಮಗೂ ಅವಕಾಶ ಸಿಗುವಂತಾಗಲು, ಸುಪ್ರೀಂ ಕೋರ್ಟ್‌ನ ಮುಂದೆ ತಮ್ಮ ಪರವಾಗಿ ವಾದ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ’ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

‘ಇನ್ನು ಆಕ್ಷೇಪಾರ್ಹ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸುವ ವಿಷಯವು ಕೆಎಟಿ ಮುಂದೆ ಬಾಕಿ ಇತ್ತು. ಸುಪ್ರೀಂ ಕೋರ್ಟ್‌ ಮುಂದೆ ಅರ್ಜಿದಾರರಾಗಿದ್ದವರು ಕೆಎಟಿಯಲ್ಲಿಯೂ ಈ ವಿಷಯವನ್ನು  ಮುಂದುವರಿಸುತ್ತಿದ್ದಾರೆ. ಈ ಮಧ್ಯೆ, ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಇದರಿಂದಾಗಿ, ಮೊದಲ ಹಂತದ ನ್ಯಾಯಾಲಯದಲ್ಲಿ ಈ ಸವಾಲನ್ನು ನಿರ್ಣಯಿಸಿಕೊಳ್ಳುವ ಅವಕಾಶ ಮತ್ತು ಅಂತಹ ತೀರ್ಪಿನ ನಂತರ ಲಭ್ಯ ಇರಬಹುದಾದ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಪ್ರತಿವಾದಿಗಳು ಕಳೆದುಕೊಂಡಂತಾಗಿದೆ. ‘ಗರಿಕಪತಿ ವೀರಯ್ಯ ವಿರುದ್ಧ ಎನ್. ಸುಬ್ಬಯ್ಯ ಚೌಧರಿ’ (1957) ಪ್ರಕರಣದಲ್ಲಿ, ಸಂವಿಧಾನ ಪೀಠವು ‘ನ್ಯಾಯಾಲಯದ ನಿರ್ದೇಶನವೊಂದು ಕಾನೂನುಬದ್ಧವಾಗಿ ಲಭ್ಯವಿರುವ ಪರಿಹಾರವನ್ನು ಪಡೆಯದಂತೆ ಪ್ರತಿವಾದಿಗಳನ್ನು ತಡೆಹಿಡಿದರೆ, ಅಂತಹ ನಿರ್ದೇಶನವನ್ನು ಈ ನ್ಯಾಯಾಲಯವು ಸರಿಪಡಿಸಬೇಕು ಎಂದು ಹೇಳಿದೆ’ ಎಂದೂ ಅರ್ಜಿಯಲ್ಲಿದೆ.

‘ಯಾವ ಕಾನೂನು ಕ್ಷೇತ್ರಗಳಿಗಾಗಿ ನ್ಯಾಯಮಂಡಳಿಗಳನ್ನು ರಚಿಸಲಾಗಿದೆಯೊ, ಆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವು ‘ಮೊದಲ ಹಂತದ ನ್ಯಾಯಾಲಯ’ಗಳಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ. ಶಾಸನವೊಂದರ ಸಿಂಧುತ್ವವನ್ನೇ ಪ್ರಶ್ನಿಸುವ ಸಂದರ್ಭ ಬಂದರೂ, ನ್ಯಾಯಮಂಡಳಿಯ ವ್ಯಾಪ್ತಿಯನ್ನು ಕಡೆಗಣಿಸಿ, ದಾವೆದಾರರು ನೇರವಾಗಿ ಉನ್ನತ ನ್ಯಾಯಾಲಯಗಳನ್ನು ಸಂಪರ್ಕಿಸಲು ಸಾಧ್ಯವಿಲ್ಲ’ ಎಂದು ಪ್ರತ್ಯೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

ಹೀಗಾಗಿ, ಕೆಎಟಿ ಹೊರಡಿಸಿದ ಆದೇಶವೊಂದರಿಂದ ಉದ್ಭವಿಸಿದ ವಿವಾದವನ್ನು, ವಿಶೇಷ ಮೇಲ್ಮನವಿ ಮೂಲಕ ಅಂತಿಮವಾಗಿ ಇತ್ಯರ್ಥಪಡಿಸಿರುವುದರಿಂದ, ಈ ವಿವಾದವನ್ನು ಮೊದಲು ವಿಚಾರಣೆ ನಡೆಸಬೇಕಿದ್ದ ವೇದಿಕೆಯಲ್ಲಿ ಮಂಡಿಸುವ ಅವಕಾಶವನ್ನು ಮತ್ತು ನಂತರ ಲಭ್ಯವಾಗಬಹುದಾಗಿದ್ದ ಮೇಲ್ಮನವಿ ಸಲ್ಲಿಸುವ ಹಕ್ಕು ಕಸಿದುಕೊಂಡಂತಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್‌ ವಿಶೇಷ ಮೇಲ್ಮನವಿಯನ್ನು ಅವುಗಳ ಅರ್ಹತೆಗಳ ಆಧಾರದ ಮೇಲೆ ವಿಚಾರಣೆ ನಡೆಸಿ ತೀರ್ಪು ನೀಡಬಾರದಿತ್ತು’ ಎಂದೂ ಅರ್ಜಿಯಲ್ಲಿ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಅಲ್ಲದೆ, ಕಾಯ್ದೆಯನ್ನು ಅಸಂವಿಧಾನಿಕ ಎಂದು ತೀರ್ಪು ನೀಡುವಾಗ, ನೇಮಕಗೊಂಡ ಅಭ್ಯರ್ಥಿಗಳು ತಮ್ಮ ಹುದ್ದೆಗಳಲ್ಲಿ ಮುಂದುವರಿಯಲು ಕೋರ್ಟ್‌ ಅವಕಾಶ ನೀಡಬೇಕಿತ್ತು. ಏಕೆಂದರೆ, ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಯಾವುದೇ ತನಿಖೆಯಿಂದ ದೃಢಪಟ್ಟಿಲ್ಲ. ಹೀಗಾಗಿ, ಪ್ರತ್ಯೇಕ ಪ್ರಕರಣಗಳಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದ್ದ ಕಾನೂನು ತತ್ವಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕಿತ್ತು’ ಎಂದೂ ಸರ್ಕಾರ ಹೇಳಿದೆ.

ಈ ಎಲ್ಲ ಕಾರಣಗಳಿಗೆ ಈ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದೂ ಸರ್ಕಾರ ಹೇಳಿದೆ. ವಕೀಲ ರಾಜೇಶ್ ಜಿ. ಇನಾಮ್‌ದಾರ್‌ ಮೂಲಕ ಇದೇ 22ರಂದು ಈ ಅರ್ಜಿ ಸಲ್ಲಿಸಲಾಗಿದೆ.

‘ಪ್ರಬೋಧ್ ವರ್ಮಾ ವಿರುದ್ಧ ಉತ್ತರ ಪ್ರದೇಶ ರಾಜ್ಯ’ (1984) ಪ್ರಕರಣದಲ್ಲಿ ಸ್ಥಾಪಿತವಾದ ಕಾನೂನು ತತ್ವದ ಪ್ರಕಾರವೂ ಇದು ಸರಿಯಲ್ಲ. ಅಲ್ಲದೆ, ನೇಮಕಗೊಂಡ ಅನೇಕ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನ ಮುಂದೆ ಪ್ರತಿವಾದಿಗಳಲ್ಲ. ತಮ್ಮ ಪರ ವಾದ ಮಂಡಿಸಲು ತಮಗೂ ಅವಕಾಶ ಸಿಗುವಂತಾಗಲು, ಸುಪ್ರೀಂ ಕೋರ್ಟ್‌ನ ಮುಂದೆ ತಮ್ಮ ಪರವಾಗಿ ವಾದ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ’ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.