ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದೀಗ ರೇಸಿಂಗ್ ಟ್ರ್ಯಾಕ್‌ನಲ್ಲಿ ಫಾರ್ಮುಲಾ ರೇಸಿಂಗ್ ಕಾರು ಚಲಾಯಿಸುವ ಮೂಲಕ ಸುದ್ದಿಯಾಗಿದ್ದಾರೆ. ತಮ್ಮ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದೊಂದಿಗೆ ರೇಸಿಂಗ್ ಟ್ರ್ಯಾಕ್‌ಗೆ ಇಳಿದಿರುವ ಸುದೀಪ್, ರೇಸರ್ ಗೆಟಪ್‌ನಲ್ಲಿರುವ ಫೋಟೋ ಹಾಗೂ ಕಾರು ಚಲಾಯಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ರೇಸಿಂಗ್ ಹೆಲ್ಮೆಟ್ ಮತ್ತು ಸೇಫ್ಟಿ ಗೇರ್ ಧರಿಸಿ ಕಾಕ್‌ಪಿಟ್‌ನಲ್ಲಿ ಕುಳಿತು ಥಂಬ್ಸ್-ಅಪ್ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಸುದೀಪ್, ತಮ್ಮ ಈ ವಿಶೇಷ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸುದೀಪ್ ಹಂಚಿಕೊಂಡ ಅನುಭವದ ಮುಖ್ಯಾಂಶ

ರೋಮಾಂಚನಕಾರಿ ಅನುಭವ: ‘ಇದೊಂದು ಅಪರೂಪದ ಕ್ಷಣ… ಜೀವಮಾನದ ಅತ್ಯದ್ಭುತ ಡ್ರೈವಿಂಗ್ ಅನುಭವ, ಇದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಸಂಪೂರ್ಣ ತರಬೇತಿ ಮತ್ತು ಮಾಹಿತಿ: ಟ್ರ್ಯಾಕ್‌ಗೆ ಇಳಿಯುವ ಮುನ್ನ ರೇಸಿಂಗ್ ಕಾರಿನ ಕಾರ್ಯವೈಖರಿ, ತಾಂತ್ರಿಕ ಅಂಶಗಳು ಹಾಗೂ ಚಾಲನೆಯ ವೇಳೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ತಜ್ಞರಿಂದ ಸಂಪೂರ್ಣ ಮಾಹಿತಿ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಟ್ರ್ಯಾಕ್‌ನ ಭವ್ಯತೆಗೆ ಫಿದಾ: ರೇಸಿಂಗ್ ಟ್ರ್ಯಾಕ್‌ನ ಮೂಲಸೌಕರ್ಯ, ಅಲ್ಲಿನ ವಾತಾವರಣ ಮತ್ತು ಭವ್ಯತೆಯನ್ನು ಕಂಡು ಸುದೀಪ್ ಬೆರಗಾಗಿದ್ದು, ಈ ಅವಕಾಶ ಕಲ್ಪಿಸಿಕೊಟ್ಟ ಇಂಡಿಯನ್ ರೇಸಿಂಗ್ ಲೀಗ್ ಹಾಗೂ ಆಯೋಜಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಮುಂಬರುವ ರೇಸ್‌ಗಳ ವಿವರ:

ಇದೇ ವೇಳೆ ಸುದೀಪ್ ಅವರು ತಮ್ಮ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡಕ್ಕೆ ಶುಭ ಹಾರೈಸಿದ್ದು, ಮುಂಬರುವ ರೇಸ್‌ಗಳ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ:

It was a rare moment… a driving experience of a lifetime… simply unexplainable! 🥂

We were given a complete insight before being taken to the racing track — a detailed explanation of the car, its mechanism, the dos and don’ts, and everything we needed to know.

And then came the racing track itself! Its infrastructure, ambience, atmosphere, and sheer scale… absolutely breathtaking!

A big thank you to @Irlofficial1 and everyone who made this incredible experience possible.

Upcoming Races:
🏁 28th & 29th November – BIC, Noida
🏁 5th & 6th December – Navi Mumbai Street Circuit.

Cheers and best wishes!
@iampriya06
@KKB_Bengaluru
❤

— Kichcha Sudeepa (@KicchaSudeep) November 23, 2026

ನವೆಂಬರ್ 28 ಮತ್ತು 29: ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್, ನೋಯ್ಡಾ
ಡಿಸೆಂಬರ್ 5 ಮತ್ತು 6: ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್

ಇದನ್ನೂ ಓದಿ: ಮಂಜನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ ಕಾರಣ ವಿವರಿಸಿದ ಸುದೀಪ್

ಸುದೀಪ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಫಾರ್ಮುಲಾ ರೇಸಿಂಗ್ ಕಾರುಗಳು ಟ್ರ್ಯಾಕ್‌ನಲ್ಲಿ ಅತಿ ವೇಗವಾಗಿ ಸಾಗುವ ದೃಶ್ಯಗಳಿದ್ದು, ಅಭಿಮಾನಿಗಳು ನೆಚ್ಚಿನ ನಟನ ಹೊಸ ಅವತಾರ ಕಂಡು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.