ಬೆಂಗಳೂರು: ಸಾರಿಗೆ ನೌಕರರ ವೇತನ ಹಿಂಬಾಕಿಯನ್ನು ಕಂತುಗಳಲ್ಲಿ ಪಾವತಿಸುವ ಬದಲು ಒಂದೇ ಬಾರಿ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.
ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹಿಂಬಾಕಿ ನೀಡಬೇಕಿತ್ತು. ಅದರಲ್ಲಿ 26 ತಿಂಗಳುಗಳ ವೇತನ ಹಿಂಬಾಕಿ ₹ 1,271.92 ಕೋಟಿ ನೀಡುವುದಾಗಿ ಸರ್ಕಾರ ಏಕಪಕ್ಷೀಯವಾಗಿ ಆದೇಶ ಮಾಡಿತು. ಆ ನಂತರ ಏ.29ರಂದು ₹ 450 ಕೋಟಿ, ಆ.14ರಂದು ₹ 170 ಕೋಟಿ ಬಿಡುಗಡೆ ಮಾಡಿತ್ತು. ಇದೀಗ ₹ 280 ಕೋಟಿಯನ್ನು ಬಿಡುಗಡೆ ಮಾಡಿದೆ. ಈ ರೀತಿ ಕಂತುಗಳಲ್ಲಿ ಪಾವತಿಸಿದರೆ ಕಾರ್ಮಿಕರಿಗೆ ಪ್ರಯೋಜವಾಗುವುದಿಲ್ಲ. ಉಳಿದ ಬಾಕಿಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು ಎಂದು ಫೆಡರೇಷನ್ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್ ತಿಳಿಸಿದ್ದಾರೆ.
ಶಕ್ತಿ ಯೋಜನೆಯಡಿ ನಿಗಮಗಳಿಗೆ ಪಾವತಿಸಬೇಕಾದ ₹ 6,500 ಕೋಟಿಯನ್ನು ವಿಳಂಬವಿಲ್ಲದೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
261118-4-33975912

