ಹೊಸ ವರ್ಷ ಸಮೀಪಿಸಿದರೆ ಸಾಕು ಪಾರ್ಟಿ ಹಾಡುಗಳು ಸಾಲು ಸಾಲಾಗಿ ಬಿಡುಗಡೆ ಆಗುತ್ತವೆ. ಈ ಹಾಡುಗಳು ಸೆಲೆಬ್ರೇಷನ್ ವೇಳೆ ಬಳಕೆ ಆಗುತ್ತವೆ. ಹೊಸ ವರ್ಷಕ್ಕೆ ಒಂದೂವರೆ ತಿಂಗಳು ಬಾಕಿ ಇರುವಾಗಲೇ ‘ಜಾಕಿ 42’ ಚಿತ್ರದಿಂದ ಹಾಡೊಂದು ಬಿಡುಗಡೆ ಆಗಿದೆ. ‘ಸೆಲ್ಫಿ ಸರೋಜಾ’ ಎಂಬುದು ಹಾಡಿನ ಹೆಸರು. ಈ ಹಾಡು ಸಖತ್ ಜೋಶ್ ತುಂಬಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಂಗ್ ಗಮನ ಸೆಳೆಯುತ್ತಿದೆ.
‘ಜಾಕಿ 42’ ಚಿತ್ರಕ್ಕೆ ಕಿರಣ್ ರಾಜ್ ಹೀರೋ ಆದರೆ, ಹೃತಿಕಾ ಶ್ರೀನಿವಾಸ್ ನಾಯಕಿ. ದೀಪಕ್ ರೈ ಪಣಜೆ, ಬಾಲಾ ರಾಜ್ವಾಡಿ, ಯಶ್ ಶೆಟ್ಟಿ, ರಾಜೇಂದ್ರ ಕಾರಂತ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾದ ‘ಸೆಲ್ಫಿ ಸರೋಜಾ’ ಹಾಡಿಗೆ ಕೃತಿ ವರ್ಮ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಇದೆ. ಈ ಹಾಡು ಸಾಕಷ್ಟು ಗಮನ ಸೆಳೆಯುತ್ತಿದೆ.
‘ಜಾಕಿ 42’ ಚಿತ್ರಕ್ಕೆ ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಕಿರಣ್ ರಾಜ್ ಹಾಗೂ ಗುರುತೇಜ್ ಕಾಂಬಿನೇಷನ್ ಅಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಸಿನಿಮಾಗಾಗಿ ಸಾಕಷ್ಟು ಅಧ್ಯಯನ ನಡೆಸಿರುವ ಇವರು, ಹೊಸ ರೀತಿಯಲ್ಲಿ ಸಿನಿಮಾನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ನಾಯಕ ಕಿರಣ್ ರಾಜ್ ಮಾತನಾಡಿ, ‘ಬಣ್ಣದ ಲೋಕದ ಕೆಲಸ ಎಂದು ಬಂದಾಗ ನಾನು ನೂರಕ್ಕೆ ನೂರರಷ್ಟು ಕೊಡುತ್ತೇನೆ. ಯಾವುದರಲ್ಲೂ ರಾಜಿ ಆಗುವುದೇ ಇಲ್ಲ. ಸೋತಾಗ ಬೇರೆಯವರನ್ನು ದೂಷಿಸುವುದಿಲ್ಲ. ನಾನು ಪ್ರಯತ್ನ ಮುಂದುವರಿಸುತ್ತಿದ್ದೇನೆ. ಕಲ್ಲಿಗೆ ಏಟು ಬಿದ್ದು ಶಿಲೆ ಆಗಬೇಕು ಎಂಬುದು ನನ್ನ ಬಯಕೆ. ಒಮ್ಮೆಯಾದರೂ ಶಿಲೆಯಾಗಬೇಕು’ ಎಂದರು ಅವರು.
ಇದನ್ನೂ ಓದಿ: ಈ ರೀತಿ ಮಾಡೋಕೂ ಧೈರ್ಯ ಬೇಕು; ಕಿರಣ್ ರಾಜ್ ಏನು ಮಾಡಿದ್ರು ನೋಡಿ
‘ಸೆಲ್ಫಿ ಸರೋಜಾ’ ಹಾಡಿನಲ್ಲಿ ಕಿರಣ್ ರಾಜ್, ಕೃತಿ ವರ್ಮ ಜೊತೆ ಭೂಷಣ್ ಕೂಡ ಹೆಜ್ಜೆ ಹಾಕಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ ಅನುಭವ ಅವರಿಗೆ ಇದೆ. ಈ ಹಾಡು ಉತ್ತಮ ಪಾರ್ಟಿ ಸಾಂಗ್ ಆಗಲಿದೆ ಎಂದು ತಂಡ ಅಭಿಪ್ರಾಯಪಟ್ಟಿದೆ.
ಈ ಸಿನಿಮಾದ ಗೀತೆಗೆ ಮಮತಾ ಶರ್ಮಾ ಮತ್ತು ಸಿಂಹ ಧ್ವನಿ ನೀಡಿದ್ದು, ವಿನೋದ್ ಯಜಮನ್ಯ ಸಂಗೀತ ಹಾಗೂ ನಾಗಾರ್ಜುನ್ ಶರ್ಮಾ ಸಾಹಿತ್ಯ ಒದಗಿಸಿದ್ದಾರೆ. ಗುರುತೇಜ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಭಾರತಿ ಸತ್ಯನಾರಾಯಣ್ ನಿರ್ಮಾಪಕರಾಗಿದ್ದಾರೆ. ಕಿರಣ್ ರಾಜ್, ಹೃತಿಕಾ ಶ್ರೀನಿವಾಸ್ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಈ ಚಿತ್ರದ ಹಾಡಿಗೆ ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಡಿಸೆಂಬರ್ 18ಕ್ಕೆ ಸಿನಿಮಾ ತೆರೆಗೆ ಬರುತ್ತಿದ್ದು, ಏಕಾಂತ್ ಮೀಡಿಯಾ ಪ್ರೆಸೆಂಟೆ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

