ಕೊಪ್ಪಳ, ನವೆಂಬರ್ 18: ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಮನೆಯಲ್ಲಿ 16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ರಾಜೇಶ್ ಶರ್ಮಾ ಎಂಬಾತ ಪ್ರವಾಸಿಗರಿಗೆ ಮಾರಾಟ ಮಾಡಲೆಂದು ಹಿಮಾಚಲ ಪ್ರದೇಶದಿಂದ ಚರಸ್ ತಂದಿದ್ದ. ಇದನ್ನು ಸಣಾಪುರ, ಆನೆಗೊಂದಿ, ಬಸಾಪುರಕ್ಕೆ ಬರುವ ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣ ಸಂಬಂಧ ಆನೆಗೊಂದಿ, ಬಸಾಪುರದ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ರಾಜೇಶ್ ಶರ್ಮಾ, ಹನುಮನಹಳ್ಳಿಯ ಮಂಜುನಾಥ ಮತ್ತು ರಜಿನಿಕಾಂತ್ ಎಂಬವರನ್ನು ಬಂಧಿಸಲಾಗಿದೆ. 88 ಚಿಕ್ಕ ಪ್ಯಾಕೆಟ್ನಲ್ಲಿದ್ದ 753 ಗ್ರಾಂ ಚರಸ್ನ ಪೊಲೀಸರು ವಶಕ್ಕೆ ಪಡೆದಿದ್ದು, ಚರಸ್ ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

