ಬೆಂಗಳೂರು, ನವೆಂಬರ್ 18: ಕರ್ನಾಟಕದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟದ ಮೇಲೆ ನಿಗಾ ಇರಿಸಲಾಗಿದೆ. ಇಂದು ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 139ರಿಂದ 161ರ ನಡುವೆ ದಾಖಲಾಗಿದೆ. ಇದು ಬಳಸುವ ಮಾಪನ ಮೂಲ ಮತ್ತು ಅಪ್ಡೇಟ್ ಸಮಯಕ್ಕೆ ಅನುಗುಣವಾಗಿ ಬದಲಾಗುತ್ತಿದೆ. ನಗರದ ಕೆಲವೆಡೆ ವಾಯುಮಾಲಿನ್ಯ ಹೆಚ್ಚಾಗಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತುಸು ಉತ್ತಮವಾಗಿದೆ. ವಿಶೇಷವಾಗಿ ಸಿಲ್ಕ್ ಬೋರ್ಡ್, ಜಯನಗರದಂತಹ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ಗಮನ ಸೆಳೆಯುತ್ತಿದೆ.
ಸಿಲ್ಕ್ ಬೋರ್ಡ್ನಲ್ಲಿ ಗರಿಷ್ಠ ಮಟ್ಟ
- ಸಿಲ್ಕ್ ಬೋರ್ಡ್ – 197
- ಜಯನಗರ 5ನೇ ಬ್ಲಾಕ್ – 170
- ಹೊಂಬೇಗೌಡ ನಗರ – 119
- ಹೆಬ್ಬಾಳ – 109
- BTM ಲೇಔಟ್ – 89
- ಬಾಪೂಜಿನಗರ – 80
- ಜಿಗಣಿ – 84
- ಪೀಣ್ಯ – 71
- ಸ್ಯಾನೇಗುರವಳ್ಳಿ – 60
ಸಿಲ್ಕ್ ಬೋರ್ಡ್ ಮತ್ತು ಜಯನಗರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.
ಕರ್ನಾಟಕದ ಇತರ ನಗರಗಳ AQI ಹೇಗಿದೆ?
- ಬಳ್ಳಾರಿ – 172
- ಮೈಸೂರು – 134
- ಮಂಗಳೂರು – 110
- ವಿಜಯಪುರ – 102
- ರಾಯಚೂರು – 110
- ಬೆಳಗಾವಿ – 88
- ಹುಬ್ಬಳ್ಳಿ – 74
- ಶಿವಮೊಗ್ಗ – 73
- ದಾವಣಗೆರೆ – 73
- ಕಲಬುರಗಿ – 47
ವಾಯುಮಾಲಿನ್ಯದಿಂದ ಆರೋಗ್ಯದ ಮೇಲೆ ಪರಿಣಾಮ
ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. PM2.5 ಮತ್ತು PM10 ಸೂಕ್ಷ್ಮ ಕಣಗಳು ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು. AQI ಹೆಚ್ಚಿರುವ ಸಮಯದಲ್ಲಿ ಹೊರಾಂಗಣ ವ್ಯಾಯಾಮ, ವಾಕಿಂಗ್ ಸೇರಿದಂತೆ ಹೆಚ್ಚು ಶ್ರಮದ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಉತ್ತಮ. ಅಗತ್ಯವಿದ್ದರೆ ಹೊರಗೆ ಹೋಗುವಾಗ N95 ಮಾಸ್ಕ್ ಬಳಸಬಹುದು. ನಗರದಿಂದ ನಗರಕ್ಕೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ AQI ಬದಲಾಗುವುದರಿಂದ ಸ್ಥಳೀಯ ಮೇಲ್ವಿಚಾರಣಾ ಕೇಂದ್ರಗಳ ಮಾಹಿತಿಯನ್ನು ಗಮನಿಸುವುದು ಸೂಕ್ತ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

