ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತ ಮುನ್ನಡೆಯುತ್ತಿದೆ. ಮೊದಲ ವಾರದ ಭರ್ಜರಿ ಕಲೆಕ್ಷನ್ ಬಳಿಕ ಚಿತ್ರದ ದೈನಂದಿನ ಗಳಿಕೆಯಲ್ಲಿ ಸ್ವಲ್ಪ ಮಟ್ಟಿನ ಕುಸಿತ ಕಂಡುಬಂದಿದ್ದರೂ, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಒಟ್ಟು ಗಳಿಕೆಯು ಈಗ 850 ಕೋಟಿ ರೂ. ಮೈಲಿಗಲ್ಲಿನತ್ತ ದಾಪುಗಾಲು ಇಡುತ್ತಿದೆ.

ನಿತ್ಯದ ಕಲೆಕ್ಷನ್ ವಿವರಗಳನ್ನು ಗಮನಿಸಿದರೆ, ಬಿಡುಗಡೆಯಾದ 13ನೇ ದಿನದಂದು (ಮಂಗಳವಾರ) ಚಿತ್ರವು ದೇಶಾದ್ಯಂತ ಒಟ್ಟು 22,551 ಪ್ರದರ್ಶನಗಳೊಂದಿಗೆ 28.35 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 820.95 ಕೋಟಿ ರೂ.ಗಳಿಗೆ ತಲುಪಿದ್ದರೆ, ಒಟ್ಟು ಗ್ರಾಸ್ ಗಳಿಕೆ 981.10 ಕೋಟಿ ರೂ. ಗಡಿ ದಾಟಿದೆ. ಇಂದು ಸಿನಿಮಾದ ಭಾರತೀಯ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.

ವಿವಿಧ ಭಾಷೆಗಳ ಪ್ರದರ್ಶನವನ್ನು ನೋಡುವುದಾದರೆ, ಹಿಂದಿ ಆವೃತ್ತಿಯು ಅತಿಹೆಚ್ಚು ಅಂದರೆ 17,867 ಪ್ರದರ್ಶನಗಳೊಂದಿಗೆ 20.75 ಕೋಟಿ ರೂ. ಬಾಚಿಕೊಂಡಿದೆ. ಇನ್ನು ಮಲಯಾಳಂನಲ್ಲಿ 2.35 ಕೋಟಿ ರೂ., ಕನ್ನಡದಲ್ಲಿ 2.00 ಕೋಟಿ ರೂ., ತಮಿಳಿನಲ್ಲಿ 1.75 ಕೋಟಿ ರೂ. ಹಾಗೂ ತೆಲುಗಿನಲ್ಲಿ 1.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಚಿತ್ರದ ಹವಾ ಮುಂದುವರಿದಿದೆ. 13ನೇ ದಿನ ವಿದೇಶಿ ಮಾರುಕಟ್ಟೆಯಿಂದ 12.00 ಕೋಟಿ ರೂ. ಗಳಿಕೆ ಮಾಡುವುದರೊಂದಿಗೆ, ಇದುವರೆಗೆ ಒಟ್ಟು 502.00 ಕೋಟಿ ರೂ. ವಿದೇಶಿ ಗ್ರಾಸ್ ಕಲೆಕ್ಷನ್ ದಾಖಲಾಗಿದೆ. ಈ ಮೂಲಕ ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆಯು ಬರೋಬ್ಬರಿ 1,483.10 ಕೋಟಿ ರೂ. ತಲುಪಿದೆ.

ಇದನ್ನೂ ಓದಿ: ‘ರಾಮಾಯಣ 2’ ಚಿತ್ರದಲ್ಲಿ ಹನುಮಂತನ ಪಾತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್

ನಿತೇಶ್ ತಿವಾರಿ ನಿರ್ದೇಶನದ ಈ ಎರಡು ಭಾಗಗಳ ಮಹಾಕಾವ್ಯದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಅಭಿನಯಿಸಿದ್ದಾರೆ. ಥಿಯೇಟ್ರಿಕಲ್ ರನ್ ಮುಗಿದ ಬಳಿಕ ಈ ಸಿನಿಮಾ ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಆನ್-ಡಿಮ್ಯಾಂಡ್ ಖರೀದಿಯ ಮೂಲಕ ವೀಕ್ಷಕರಿಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.