ಪಾಕ್‌ ಮಾಜಿ ವೇಗಿ ವಕಾರ್ ಯೂನಿಸ್ ಭಾರತ ಮತ್ತು ಪಾಕಿಸ್ತಾನದ ಹಲವಾರು ದಂತಕಥೆ ಆಟಗಾರರನ್ನು ಹೋಲಿಕೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಲವಾರು ಆಸಕ್ತಿದಾಯಕ ಮತ್ತು ಆಶ್ಚರ್ಯಕರ ಸಂಗತಿಗಳನ್ನು ಹಂಚಿಕೊಂಡು, ಭಾರತೀಯ ತಾರೆಯರ ಕಡೆಗೆ ಹೆಚ್ಚು ಒಲವು ತೋರುತ್ತಿದ್ದದ್ದು ಸಹ ಕಂಡಿ ಬಂದಿತು. ಧೋನಿ, ಕೊಹ್ಲಿ ಹೊಗಳಿದ ಯೂನಿಸ್‌ ವೈಭವ್‌ ಬಗ್ಗೆ ಹಾಗೆ ಹೇಳಿದ್ಯಾಕೆ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

ಶುಭಂಕರ್ ಮಿಶ್ರಾ ಪಾಡ್‌ಕ್ಯಾಸ್ಟ್‌ನಲ್ಲಿ ಯೂನಿಸ್‌ ಮಾತು!

ಶುಭಂಕರ್‍‌ ಮಿಶ್ರಾ, ಎರಡೂ ದೇಶಗಳ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಲು ಕೇಳಿದಾಗ, ವಕಾರ್ ಯೂನಿಸ್ ಹಲವಾರು ಸಂದರ್ಭಗಳಲ್ಲಿ ಭಾರತೀಯ ಪ್ರತಿಭೆಗೆ ಆದ್ಯತೆ ನೀಡಿದ್ದಾರೆ. ಇಂಜಮಾಮ್-ಉಲ್-ಹಕ್ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಆಯ್ಕೆ ಮಾಡಲು ಕೇಳಿದಾಗ, ಅವರು ಸಚಿನ್ ಅವರನ್ನು ಆಯ್ಕೆ ಮಾಡಿದರು. ಇದಲ್ಲದೆ, ಇಬ್ಬರು ಶ್ರೇಷ್ಠ ಆಧುನಿಕ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು ಹೋಲಿಸಿದಾಗ ಅವರು ಹಿಂಜರಿಕೆಯಿಲ್ಲದೆ ಕೊಹ್ಲಿಯನ್ನು ತಮ್ಮ ನೆಚ್ಚಿನವರು ಎಂದು ಹೆಸರಿಸಿದ್ದಾರೆ.

ಧೋನಿ ಉಲ್ಲೇಖಿಸಿದ ವಕಾರ್!

ಜಾವೇದ್ ಮಿಯಾಂದಾದ್ ಮತ್ತು ಎಂ.ಎಸ್. ಧೋನಿ ಅವರಲ್ಲಿ ಬೆಸ್ಟ್ ಫಿನಿಶರ್ ಯಾರು? ಎಂಬ ಪ್ರಶ್ನೆಗೆ ಪಾಕ್ ಮಾಜಿ ನಾಯಕ ವಕಾರ್ ಯೂನಿಸ್ ಅವರು ಧೋನಿ ಹೆಸರನ್ನು ಆಯ್ಕೆ ಮಾಡಿದ್ದಾರೆ. ಮಿಯಾಂದಾದ್‌ಗೆ ಹೋಲಿಸಿದರೆ ಧೋನಿ ಅವರು ಟೀಮ್ ಇಂಡಿಯಾಗೆ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ (ಮ್ಯಾಚ್ ವಿನ್ನರ್) ಎಂದು ವಕಾರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ನಡುವಿನ ಹೋಲಿಕೆಯಲ್ಲಿ ವಕಾರ್ ಯೂನಿಸ್ ಅವರು ಕೊಹ್ಲಿ ಅವರನ್ನೇ ಶ್ರೇಷ್ಠ ಎಂದು ಆಯ್ಕೆ ಮಾಡಿದ್ದು, ಕೊಹ್ಲಿ ಆಡಿದರೆ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.

ವೈಭವ್ ಸೂರ್ಯವಂಶಿ ಬಗ್ಗೆ ಹೇಳಿದ್ದೇನು?

ಭಾರತದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಪಾಕಿಸ್ತಾನದ ಸಮೀರ್ ಮಿನ್ಹಾಸ್ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ವಕಾರ್ ಯಾವುದೇ ಒಬ್ಬ ಆಟಗಾರನನ್ನು ಆಯ್ಕೆ ಮಾಡದೆ ತಟಸ್ಥರಾಗುಳಿದರು. ತಾನು ಇಬ್ಬರು ಯುವ ಆಟಗಾರರ ಆಟವನ್ನು ಇನ್ನೂ ಅಷ್ಟಾಗಿ ನೋಡಿಲ್ಲ, ಹಾಗಾಗಿ ಇಷ್ಟು ಬೇಗ ಅವರ ಬಗ್ಗೆ ತೀರ್ಪು ನೀಡುವುದು ಅಥವಾ ಒಬ್ಬರನ್ನು ಆರಿಸುವುದು ಸರಿಯಲ್ಲ ಎಂದು ವಕಾರ್ ಸ್ಪಷ್ಟಪಡಿಸಿದ್ದಾರೆ.

ಆಧುನಿಕ ಕ್ರಿಕೆಟ್ ಮೆಚ್ಚುಗೆ!

ವೈಭವ್ ಸೂರ್ಯವಂಶಿಯಂತಹ ಯುವ ಆಟಗಾರರ ಬಗ್ಗೆ ಮಾತನಾಡುತ್ತಾ, ಈಗಿನ ತಂತ್ರಜ್ಞಾನ, ಬಯೋಮೆಕಾನಿಕ್ಸ್ ಮತ್ತು ಆಧುನಿಕ ಫಿಟ್ನೆಸ್ ಸೌಲಭ್ಯಗಳಿಂದಾಗಿ ಇಷ್ಟು ಸಣ್ಣ ವಯಸ್ಸಿನಲ್ಲೇ ಅದ್ಭುತ ಪ್ರತಿಭೆಗಳು ಭಾರತದಲ್ಲಿ ಸಿದ್ಧಗೊಳ್ಳುತ್ತಿವೆ ಎಂದು ವಕಾರ್ ಶ್ಲಾಘಿಸಿದ್ದಾರೆ.