‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಏನೋ ಕೊರತೆ ಇದೆ ಎಂದುಕೊಳ್ಳುವಾಗಲೇ ಸೌಂದರ್ಯಾ ಶೆಟ್ಟಿ ಅವರು ತಮ್ಮ ಅಸಲಿ ಆಟವನ್ನು ಪ್ರದರ್ಶಿಸಿದರು. ಆರಂಭದಲ್ಲಿ ಮಂಜು ಅವರು ಮಾಡಿದ ಅರಚಾಟ, ಕಿರುಚಾಟಗಳಿಂದ ಪ್ರೇಕ್ಷಕರು ಸುಸ್ತಾಗಿದ್ದರು. ಅವರು ಹೊರ ಹೋದ ಬಳಿಕ ಸೌಂದರ್ಯಾ ಶೆಟ್ಟಿ ಅವರ ಅಸಲಿ ಆಟ ಶುರುವಾಗಿದೆ. ಅವರು ನಡೆದುಕೊಳ್ಳುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಿಶೇಷ ಎಂದರೆ ಈ ವಾರ ಅದಕ್ಕೆ ಮತ್ತಿಬ್ಬರ ಸೇರ್ಪಡೆ ಆಗಿದೆ.

ಕಳೆದ ವಾರ ಸೌಂದರ್ಯಾ ಹಾಗೂ ತಾಂಡವ್ ಅವರು ಗಮನ ಸೆಳೆದಿದ್ದರು. ಈ ವಾರ ಪ್ರಶಾಂತ್ ಕೂಡ ಭರಪೂರ ಮನರಂಜನೆ ಕೊಟ್ಟಿದ್ದಾರೆ. ಕಳೆದ ವಾರದಂತೆ ಈ ವಾರವೂ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವೇ ಹರಿದು ಬಂದಿದೆ. ಬಿಗ್ ಬಾಸ್ ವೀಕ್ಷಕರ ಖುಷಿಯನ್ನು ಇದು ಹೆಚ್ಚಿಸಿದೆ. ಕಳೆದ ವಾರ ಡೈಮಂಡ್ ಕದಿಯೋ ಟಾಸ್ಕ್ ಇತ್ತು. ಈ ವಾರ ಶೆಟ್ಟಿ ಡಾನ್ ಮದುವೆ ಶಾಸ್ತ್ರ ನಡೆದಿದೆ.

ಸೌಂದರ್ಯಾ ಅವರು ಆರಂಭದ ಕೆಲ ವಾರ ಸೈಲೆಂಟ್ ಆಗಿದ್ದರು. ಕಳೆದ ಕೆಲ ವಾರಗಳಿಂದ ಅವರು ಮನರಂಜನೆ ನೀಡುತ್ತಿದ್ದಾರೆ. ತಾಂಡವ್ ರಾಮ್ ಅವರು ಸದಾ ಗಗನ್ ಚಿನ್ನಪ್ಪ ಮನ ಒಲಿಸಿರುವುದರಲ್ಲೇ ಬ್ಯುಸಿ ಇರುತ್ತಿದ್ದರು. ಆದರೆ, ಈಗ ಅವರು ಉತ್ತಮವಾಗಿ ಆಡಿ ಮನರಂಜನೆ ನೀಡುತ್ತಿದ್ದಾರೆ. ಈ ವಾರ ಶೆಟ್ಟಿ ಡಾನ್ ತಂದೆ ಪಾತ್ರದಲ್ಲಿ ಅವರು ಮೆಚ್ಚುಗೆ ಪಡೆದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಟ್ಟು, ಬೇರೆ ಸ್ಪರ್ಧಿಗಳಿಗಿಂತ ಹೆಚ್ಚು ಮಿಂಚಿದ ರಕ್ಷಿತಾ ಶೆಟ್ಟಿ

ಈ ವಾರ ಸೌಂದರ್ಯಾ ಶೆಟ್ಟಿ ತಾಯಿ ಪಾತ್ರದಲ್ಲಿ ಪ್ರಶಾಂತ್ ಮಿಂಚಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಬಹುವಾದ ಮೆಚ್ಚುಗೆ ಸಿಕ್ಕಿದೆ. ಅವರು ನಾರ್ಮಲ್​ ಆಗಿ ಇರುವುದಕ್ಕಿಂತ ಹುಡುಗಿ ಗೆಟಪ್​​ನಲ್ಲೇ ಹೆಚ್ಚು ಇಷ್ಟ ಆಗುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಈ ವಾರ ಅವರು ಭರಪೂರ ಮನರಂಜನೆ ನೀಡಿದ್ದು, ಕಿಚ್ಚನ ಚಪ್ಪಾಳೆಗೆ ಅವರು ಅರ್ಹರು ಎನ್ನುವ ಮಾತು ಕೇಳಿ ಬಂದಿದೆ. ಈ ವಾರ ಯಶಸ್ ಅವರು ಗಗನ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಬಿಟ್ಟರೆ ಅಂತಹ ದೊಡ್ಡ ಗಲಾಟೆ ನಡೆದಿಲ್ಲ. ಇದು ವೀಕ್ಷಕರಿಗೆ ನೆಮ್ಮದಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.