ಬೆಂಗಳೂರು: ಬಿಗ್​ಬಾಸ್​​ 13 (Bigg Boss 13) ಈಗ ಏಳನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಮನೆಯೊಳಕ್ಕೆ ರಕ್ಷಿತಾ ಶೆಟ್ಟಿ ಎಂಟ್ರಿಕೊಡುತ್ತಲೇ ಸಪ್ಪೆಯಾಗಿದ್ದ ಬಿಗ್​ಬಾಸ್​​ 13ನೇ ಸೀಸನ್​ ಚಿಗುರಿಕೊಂಡಿದೆ. ಇದಾಗಲೇ ಮನೆಯೊಳಕ್ಕೆ ಮದುವೆಯ ಟಾಸ್ಕ್​ಕೂಡ ನೀಡಲಾಗಿತ್ತು. ಒಂದು ಕಡೆ ಗಗನ್​ ಚಿನ್ನಪ್ಪ ಮತ್ತು ಇನ್ನೊಂದು ಕಡೆ ಯಶಸ್​ ಸೌಂದರ್ಯ ಶೆಟ್ಟಿ ಅವರನ್ನು ಒಲಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಹೆಣ್ಣುಮಕ್ಕಳ ಮನಸ್ಸನ್ನು ಹೇಗೆ ಗೆಲ್ಲಬೇಕು ಎಂದು ರಕ್ಷಿತಾ ಶೆಟ್ಟಿ ಕೂಡ ಟಿಪ್ಸ್​ ಕೊಟ್ಟಿದ್ದರು. ಇವೆಲ್ಲಾ ಆದ ಮೇಲೆ ಸೌಂದರ್ಯ ಅವರ ಮನಸ್ಸನ್ನು ಗೆಲ್ಲುವುದು ಟಾಸ್ಕ್​ ಆಗಿತ್ತು. ಇದಕ್ಕಾಗಿ ಗಗನ್​ ಮತ್ತು ಯಶಸ್​ ನಡುವೆ ಸಾಕಷ್ಟು ಜಟಾಪಟಿಯೂ ನಡೆದಿತ್ತು. ಒಂದು ಹಂತದಲ್ಲಿ ಇಬ್ಬರೂ ಸೀರಿಯಸ್​ ಎನ್ನುವಷ್ಟರ ಮಟ್ಟಿಗೆ ಜಗಳ ಮಾಡಿಕೊಂಡಿದ್ದರು. ಆದರೆ ಕೊನೆಗೆ ಇಬ್ಬರೂ ಒಂದಾಗಿದ್ದರು.

ಯಾರಿಗೆ ಒಲಿದ್ರು ಸೌಂದರ್ಯ

ಇದರ ನಡುವೆಯೇ, ಒಬ್ಬರು ಶೆಟ್ಟಿ ಡಾನ್​ ಎಂದೇ ಫೇಮಸ್​ ಆಗಿರೋ ಸೌಂದರ್ಯ ಶೆಟ್ಟಿ (Bigg Boss Soundarya Shetty) ಮನಸ್ಸನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಸೌಂದರ್ಯ ಒಲಿದಿದ್ದಾರೆ. ಇದರಿಂದಾಗಿ ಬಿಗ್​ಬಾಸ್​ ಮನೆಯೊಳಕ್ಕೆ ಮದುವೆ ಮಾತುಕತೆ ನಡೆದಿದೆ. ಸೌಂದರ್ಯ ಮದ್ವೆಗೆ ಸೈ ಎಂದಿದ್ದಾರೆ. ಅಷ್ಟಕ್ಕೂ ಇದೇನು ಸೀರಿಯಲ್​ ಮದುವೆಯಲ್ಲ. ಕೇವಲ ಟಾಸ್ಕ್​ ಅಷ್ಟೇ ಅನ್ನಿ.

ಆದರೂ, ಇದು ಸೀರಿಯಲ್​ ಎನ್ನುವಷ್ಟರ ಮಟ್ಟಿಗೆ ಹೋಗಿತ್ತು. ಅಷ್ಟಕ್ಕೂ, ಯಶಸ್​ ಮತ್ತು ಸೌಂದರ್ಯ ಬಾಂಡಿಂಗ್​ ಮೊದಲಿನಿಂದಲೂ ಚೆನ್ನಾಗಿಯೇ ಇದೆ. ಗಗನ್​ ಅವರ ಜೊತೆಯೂ ಸೌಂದರ್ಯ ಚೆನ್ನಾಗಿದ್ದಾರೆ. ಆದರೆ ಈ ಹಿಂದೆ ಸೌಂದರ್ಯ ಶೆಟ್ಟಿ ಅವರು ಓಪನ್​ ಆಗಿಯೇ, ಗಗನ್‌ ನನ್ನ ಬೆಸ್ಟ್‌ ಫ್ರೆಂಡ್‌, ಯಶಸ್‌ ಕೃಷ್ಣನ ನಾನು ಸ್ನೇಹಿತ ಅಂತ ಹೇಳಲ್ಲ, ಅದಕ್ಕೂ ಮೀರಿದ ಸಂಬಂಧ ಎಂದು ಹೇಳಿದ್ದೂ ಇದೆ. ಅದಕ್ಕಾಗಿಯೇ ಸಹಜವಾಗಿ ಯಶಸ್​ ಅವರನ್ನು ಸೌಂದರ್ಯ ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಜೋಡಿ ಸಕತ್​ ಆಗಿದೆ ಎಂದು ವೀಕ್ಷಕರು ಮೆಚ್ಚಿಕೊಂಡಿದ್ದಾರೆ, ಜೊತೆಗೆ ಮನೆಯೊಳಕ್ಕೆ ಇರುವ ಆಸಿಯಾ ಕೂಡ ಹೇಳಿದ್ದಾರೆ.

ರಕ್ಷಿತಾ ಶೆಟ್ಟಿ ಅವರೇ ಮಿಡ್ಲ್​ಮನ್​

ಅಂದಹಾಗೆ ಇವರಿಬ್ಬರಲ್ಲಿ ಯಾರನ್ನು ಆಯ್ಕೆಮಾಡಬೇಕು ಎನ್ನುವ ಮಿಡ್ಲ್​ಮನ್​ ರೀತಿ ರಕ್ಷಿತಾ ಶೆಟ್ಟಿ ವರ್ತಿಸಿದ್ದರು. ಇಬ್ಬರಿಗೂ ಸಾಕಷ್ಟು ಟಿಪ್ಸ್​ಕೊಟ್ಟಿದ್ದರು. ಕೊನೆಗೆ ರಕ್ಷಿತಾ ಅವರೇ, ಗಗನ್‌ ಒಳ್ಳೆಯ ವ್ಯಕ್ತಿ, ಅವರಿಗೆ ಜವಾಬ್ದಾರಿ ಇದೆ. ಆದರೆ ಸೌಂದರ್ಯ ಶೆಟ್ಟಿ ಜಾಲಿ ಸ್ವಭಾವದವರು. ಆದ್ದರಿಂದ ಇಬ್ಬರೂ ವಿಭಿನ್ನ ಕ್ಯಾರೆಕ್ಟರ್​ ಆಗಿರೋಕಾರಣ, ಅರ್ಥ ಸಂಸಾರಸರಿಯಾಗುತ್ತದೆ ಎಂದು ಆರು ಅಂಕ ಕೊಟ್ಟಿದ್ದರೆ, ಯಶಸ್​ ಕೂಡ ಜಾಲಿ ಹುಡುಗ ಆಗಿರುವುದರಿಂದ ಇಬ್ಬರೂ ಜಾಲಿ ಆದ್ರೆ ಲೈಫ್​ ಕಷ್ಟ ಎಂದು ನಾಲ್ಕೇ ಮಾರ್ಕ್ಸ್​ ಕೊಟ್ಟಿದ್ದರು. ಅಷ್ಟಕ್ಕೂ ಗಗನ್​ ಅವರಿಗೆ ಆರು ಅಂಕ ಕೊಡಿ ಎಂದು ಹೇಳಿದವರು ಕೂಡ ಸೌಂದರ್ಯ ಅವರೇ. ಕೊನೆಗೆ ಎಲ್ಲಾ ಅಳೆದು ತೂಗಿ ರಕ್ಷಿತಾ ಶೆಟ್ಟಿ ಡಿಸೈಡ್​ ಮಾಡಿದ್ದರು.