ಪ್ರಯಾಗ್ರಾಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಭಾರಿ ಪೊಲೀಸ್ ಕಾರ್ಯಾಚರಣೆಯಲ್ಲಿ ನೆಲದಡಿಯಲ್ಲಿ ಬಚ್ಚಿಟ್ಟಿದ್ದ 3 ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ಗಳಿಂದ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಯಾಗ್ರಾಜ್ನ ಗಂಗಾನಗರ ವಲಯದ ನವಾಬ್ಗಂಜ್ ಠಾಣಾ ವ್ಯಾಪ್ತಿಯ ಬರೈಪುರ್ ರಾಮನಗರ ಗ್ರಾಮದಲ್ಲಿ ಅಕ್ಟೋಬರ್ 28ರ ತಡರಾತ್ರಿ ಈ ರೋಮಾಂಚಕ ದಾಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವರದಿ ಇಲ್ಲಿದೆ:
ಏನಿದು ಘಟನೆ?
ಉತ್ತರ ಪ್ರದೇಶದ ಪ್ರಯಾಗ್ರಾಜ್ (ಅಲಹಾಬಾದ್) ವ್ಯಾಪ್ತಿಯ ನವಾಬ್ಗಂಜ್ ಪೊಲೀಸ್ ಠಾಣಾ ಸರಹದ್ದಿನ ಬರೈಪುರ್ ರಾಮನಗರ ಎಂಬ ಗ್ರಾಮದಲ್ಲಿ, ಮೇಲ್ನೋಟಕ್ಕೆ ಕೇವಲ ಸಾಮಾನ್ಯ ನೀಲಿ ಬಣ್ಣದ ನೀರಿನ ಡ್ರಮ್ಗಳಂತೆ ಕಾಣುತ್ತಿದ್ದ ಇವುಗಳನ್ನು ಮನೆಯೊಂದರ ನೆಲದ ಅಡಿಯಲ್ಲಿ ಅಗೆದು ಹೂತಿಡಲಾಗಿತ್ತು. ಪೊಲೀಸರು ಮತ್ತು ಐಟಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭೂಮಿಯನ್ನು ಅಗೆದಾಗ ಈ ಮೂರು ಡ್ರಮ್ಗಳು ಸಿಕ್ಕಿವೆ. ಜೊತೆಗೆ, ಡ್ರಮ್ಗಳ ಒಳಗಿದ್ದ ಕೋಟ್ಯಂತರ ರೂಪಾಯಿ ಹಣವು ಮಣ್ಣು ಅಥವಾ ತೇವಾಂಶದಿಂದ ಹಾಳಾಗಬಾರದು ಎಂಬ ಕಾರಣಕ್ಕೆ, ನೋಟುಗಳ ಕಂತೆಗಳನ್ನು ಅತ್ಯಂತ ಜಾಗರೂಕತೆಯಿಂದ ಪ್ಲಾಸ್ಟಿಕ್ (ಪಾಲಿಥೀನ್) ಕವರ್ಗಳಲ್ಲಿ ಸುತ್ತಿಡಲಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ಈ ಡ್ರಮ್ಗಳಿಂದ ಸುಮಾರು ₹5 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ.
EDಯಿಂದ ಅಜಮ್ ಖಾನ್ ಮಾಲೀಕತ್ವದ, 1,170 ಕೋಟಿ ರೂ ಮೌಲ್ಯದ ಜೌಹರ್ ವಿಶ್ವವಿದ್ಯಾಲಯದ ಆಸ್ತಿ ಜಪ್ತಿ!ಮುಂದುವರೆದು, ಈ ಮನೆ ರಾಕೇಶ್ ಯಾದವ್ ಅಲಿಯಾಸ್ ಮಹಾಕಾಲ್ ಮತ್ತು ರಾಜೇಶ್ ಯಾದವ್ ಎಂಬ ಸಹೋದರರಿಗೆ ಸೇರಿದ್ದಾಗಿದೆ. ಈ ಇಬ್ಬರೂ ಈ ಹಿಂದೆ ಪುಣೆಯಲ್ಲಿ ಚಿನ್ನದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರು. 2020ರ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಹಠಾತ್ ಕೆಲಸ ಬಿಟ್ಟು ಹಳ್ಳಿಗೆ ಮರಳಿದ್ದ ಇವರು, ಇತ್ತೀಚೆಗೆ ಕೋಟ್ಯಂತರ ಮೌಲ್ಯದ ಜಮೀನು ಮತ್ತು ದುಬಾರಿ ಕಾರುಗಳನ್ನು ಖರೀದಿಸುವ ಮೂಲಕ ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದ್ದರು.
ಹಾಗಾದ್ರೆ, ರಹಸ್ಯ ಬಯಲಾಗಿದ್ದು ಹೇಗೆ?
ಇತ್ತೀಚೆಗೆ ಈ ಸಹೋದರರು ಮತ್ತು ಗ್ರಾಮಸ್ಥರ ನಡುವೆ ಜಗಳ ನಡೆದಿತ್ತು. ಮತ್ತೊಂದೆಡೆ ಮಹೀಂದ್ರಾ ಥಾರ್ ಕಾರು ಖರೀದಿಸುವ ವಿಚಾರದಲ್ಲಿ ಸಹೋದರರ ನಡುವೆಯೂ ಭಿನ್ನಾಭಿಪ್ರಾಯ ತಲೆದೋರಿತ್ತು. ಈ ಜಗಳಗಳ ಬೆನ್ನಲ್ಲೇ, ಇವರ ಬಳಿ ಭಾರಿ ಪ್ರಮಾಣದ ಕಪ್ಪುಹಣ ಇರುವ ಬಗ್ಗೆ ಪೊಲೀಸರಿಗೆ ರಹಸ್ಯ ಸುಳಿವು ಲಭಿಸಿತ್ತು. ಅದರಂತೆ, ಪೊಲೀಸರು ಈಗಾಗಲೇ ಮನೆಯನ್ನು ಸೀಲ್ ಮಾಡಿ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಣದ ನಿಖರ ಮೊತ್ತವನ್ನು ಎಣಿಕೆ ಮಾಡಲು ಮತ್ತು ಇದರ ಅಸಲಿ ಮೂಲವನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ಹಾಗೂ ಇತರ ಹಣಕಾಸು ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಜಂಟಿ ತನಿಖೆ ಮುಂದುವರಿದಿದೆ.
We don’t have even one note here. There are drums full of money buried underground in Prayagraj. https://t.co/MVq4ygPZNy
— Aman Singh (@_AmanJi) October 29, 2026

