ಹಾಸನ, ಅಕ್ಟೋಬರ್ 30: ಹಾಸನದ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದಲ್ಲಿ ಸಾರ್ವಜನಿಕ ದರ್ಶನವು ಇಂದು ಶುಕ್ರವಾರದಿಂದ ಆರಂಭವಾಗಿದೆ. ನವೆಂಬರ್ 10ರವರೆಗೆ ಭಕ್ತರಿಗೆ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮೊದಲ ದಿನವೇ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವಿಯ ಆಶೀರ್ವಾದ ಪಡೆದರು.
ದರ್ಶನಕ್ಕಾಗಿ 300 ರೂ. ಮತ್ತು 1,000 ರೂ. ಬೆಲೆಯ ವಿಶೇಷ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಆನ್ಲೈನ್ನಲ್ಲಿ ಗೋಲ್ಡ್ ಪಾಸ್ ಟಿಕೆಟ್ಗಳನ್ನು ಬುಕ್ ಮಾಡಿಕೊಂಡು ಬರುವ ಭಕ್ತರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಳೆಯಿಂದ ಭಕ್ತರು ರಕ್ಷಣೆ ಪಡೆಯಲು ಟೆಂಟ್ಗಳನ್ನು ಹಾಕಲಾಗಿದ್ದು, ಜಿಲ್ಲಾಡಳಿತ ಪ್ರಸಾದ ವ್ಯವಸ್ಥೆ ಮಾಡಿದೆ. ಯಾವುದೇ ನೂಕುನುಗ್ಗಲು ಉಂಟಾಗದಂತೆ 2,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಂದಿನಿಂದ 12 ದಿನಗಳ ಕಾಲ ನಡೆಯುವ ದರ್ಶನೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

