ಹಾವೇರಿ, ಅಕ್ಟೋಬರ್​​ 30: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದಾತ ಗ್ರಾಮ ಲೆಕ್ಕಾಧಿಕಾರಿ ಎಕ್ಸಾಂನಲ್ಲಿ 151 ಮಾರ್ಕ್ಸ್​​ ಪಡೆದು ರಾಜ್ಯಕ್ಕೆ ಟಾಪರ್​​ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹ ಸೋಶಿಯಲ್​​ ಮೀಡಿಯಾದಲ್ಲಿ ಕೇಳಿಬಂದಿತ್ತು. ಬಳಿಕ ಈ ಸಂಬಂಧ ತನಿಖೆಗೆ ಕೆಇಎ ಕೂಡ ಆದೇಶಿಸಿತ್ತು. ಈ ವಿಚಾರವಾಗಿ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಪರೀಕ್ಷಾ ಟಾಪರ್ ಶಂಕರ ಬನ್ನೂರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 45ಕ್ಕೂ ಅಧಿಕ ಪರೀಕ್ಷೆಗಳನ್ನು ತಾನು ಬರೆದಿದ್ದು, ಯಾವುದೇ ತನಿಖೆಗೂ ಸಿದ್ಧನಿದ್ದೇನೆ ಎಂದಿದ್ದಾರೆ. ನಿನ್ನೆ ಪೊಲೀಸರು, ತಹಶೀಲ್ದಾರ್​​ ಅವರು ಕರೆದು ವಿಚಾರಣೆ ಮಾಡಿದ್ದಾರೆ. ನನ್ನ ಎಲ್ಲಾ ಮೂಲ ದಾಖಲೆಗಳನ್ನ ನೀಡಿದ್ದೇನೆ. ಕಾನ್ಸ್​​ಟೇಬಲ್​​ ಪರೀಕ್ಷೆಯ ಸಂದರ್ಭ ತನ್ನ ಸಹೋದರಿನಿಗೆ ಅಪಘಾತವಾಗಿತ್ತು. ತನಗೂ ಏಟಾಗಿದ್ದ ಕಾರಣ ಸರಿಯಾಗಿ ಪರೀಕ್ಷೆ ಬರೆಯಲು ಆಗಿರಲಿಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.