ಹಾಸನ, ನವೆಂಬರ್ 08: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಜಾತ್ರೆಯ 10ನೇ ದಿನವಾದ ಭಾನುವಾರ ಅಪಾರ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಹರಿದು ಬಂದಿದ್ದಾರೆ. ವಾರಾಂತ್ಯ ಮತ್ತು ಜಾತ್ರೆಯ ಅಂತಿಮ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನಸಂದಣಿ ತೀವ್ರವಾಗಿ ಹೆಚ್ಚಳವಾಗಿದೆ. ದೇವಿಯ ದರ್ಶನ ಪಡೆಯಲು ಧರ್ಮ ದರ್ಶನದ ಸಾಲುಗಳು, ಹಾಗೂ 300 ಮತ್ತು 1000 ರೂ.ಗಳ ವಿಶೇಷ ಪ್ರವೇಶ ಟಿಕೆಟ್ ಸಾಲುಗಳೆಲ್ಲವೂ ಭಕ್ತರಿಂದ ತುಂಬಿ ತುಳುಕುತ್ತಿವೆ. ದರ್ಶನಕ್ಕೆ ಕೇವಲ ಎರಡು ದಿನ ಮಾತ್ರ ಅವಕಾಶವಿದ್ದು, ವೀಐಪಿಗಳು ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಇಂದು ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಸಹ ಹಾಸನಾಂಬೆ ದರ್ಶನ ಪಡೆಯಲಿದ್ದಾರೆ. ದೇವಾಲಯದೊಳಗೆ ಭಕ್ತರ ಸುಗಮ ಚಲನೆಗಾಗಿ ಮತ್ತು ಸರದಿಯ ನಿರ್ವಹಣೆಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ. ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ವಿಧಿಸಲಾಗಿದ್ದು, ಫೋಟೋ ಮತ್ತು ವಿಡಿಯೋ ಚಿತ್ರೀಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬಾಗಿಲಿನ ಬಳಿ ನಿಲ್ಲದಂತೆ, ತ್ವರಿತವಾಗಿ ದರ್ಶನ ಪಡೆದು ಮುಂದುವರಿಯುವಂತೆ ಭಕ್ತರಿಗೆ ಸೂಚನೆ ನೀಡಲಾಗುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

