ಪರಿಸರ ಮತ್ತು ಜೈವಿಕ ಪರಿಸ್ಥಿತಿ ನಿರ್ವಹಣೆಗೆ ವೈಜ್ಞಾನಿಕ ತಾಂತ್ರಿಕ ನೀತಿ ಸಂಶೋಧನೆ ಮತ್ತು ಇತರ ಚಟುವಟಿಕೆಗಳಾದ ವಿದ್ಯಾರ್ಥಿಗಳು, ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆ, ಸರ್ಕಾರದ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅರಿವು ಮೂಡಿಸುವ ಮುಖಾಂತರ ಎಂಪ‍್ರಿ ಸಂಸ್ಥೆ ಕೊಡುಗೆ ನೀಡಿದೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ, ತುಮಕೂರು ಕೆರೆ ಜಲಾಶಯಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಅವುಗಳನ್ನು ನಿವಾರಿಸುವ ವಿಧಾನಗಳು, ಕಾವೇರಿ ನದಿಯ ದಂಡೆಯ ಇಕ್ಕೆಲ ಪ್ರದೇಶದಲ್ಲಿ ಆಗಿರುವ ಬೆಳವಣಿಗೆ, ಅದನ್ನು ರಕ್ಷಿಸಿಕೊಳ್ಳಬೇಕಾದ ಕ್ರಮಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯದಲ್ಲಿ ಹವಾಮಾನ ಬದಲಾವಣೆಯಿಂದ ಆಗಿರುವ ಪ್ರಭಾವದ ಅಧ್ಯಯನಕ್ಕೆ ರಚಿಸಿರುವ ಸ್ಯಾಂಪಲ್ ಪ್ಲಾಟ್‌ಗಳು, ಅವುಗಳ ಜೀವವೈವಿಧ್ಯತೆ ಅಧ್ಯಯನ, ಸಂಡೂರಿನ ಕಬ್ಬಿಣ ಅದಿರು ತೆಗೆಯುತ್ತಿರುವ ಕಂಪನಿಯಿಂದ ಪರಿಸರದ ಮೇಲೆ ಆಗಿರುವ ಪ್ರಭಾವ, ವಾಹನ ಸಂಚಾರದಿಂದ ಹೆಚ್ಚುವ ಮಾಲಿನ್ಯ ಇವೆಲ್ಲವೂ ಸಾಮಾನ್ಯ ವಿಷಯವೇನಲ್ಲ.

ಪರಿಸರ ಮಹತ್ವ ಕುರಿತು ದಶಕಗಳಿಂದಲೂ ನಿಖರ ಅಧ್ಯಯನ, ವರದಿಯನ್ನು ನೀಡುತ್ತಾ ಜಾಗೃತಿ ಮೂಡಿಸುತ್ತಿರುವ ಸಂಸ್ಥೆಯೊಂದು ಕರ್ನಾಟಕದಲ್ಲಿದೆ. ಅದು ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ( ಎಂಪ್ರಿ).

ಮೂರು ದಶಕದ ಹಾದಿ

ನಾಗರಿಕತೆಯ ಅಭಿವೃದ್ಧಿಯ ಪರಿಣಾಮವಾಗಿ ನಾಡಿನ ಪರಿಸರಕ್ಕೆ ಆಗಿರುವ ಅನಾಹುತ ಅಧ್ಯಯನ ಮಾಡಿ ಅದಕ್ಕೆ ಪರಿಹಾರಗಳನ್ನು ಸೂಚಿಸಿ ಅರಿವು ಮೂಡಿಸಲು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು (EMPRI-Environmental Management and Policy Research Institute)ಕರ್ನಾಟಕ ಸರ್ಕಾರದ ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಡಿಯಲ್ಲಿ ಸ್ಥಾಪಿಸಿರುವ ಒಂದು ಸ್ವಾಯತ್ತ ಸಂಸ್ಥೆ. ಅಲ್ಲಿಂದಲೂ ಈ ಸಂಸ್ಥೆ ಸ್ಥಿರವಾಗಿ ಬೆಳೆಯುತ್ತಾ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ಪೂರ್ವದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪರಿಸರ ತರಬೇತಿ ಸಂಸ್ಥೆಯಾಗಿ 1996ರಿಂದ ಕಾರ್ಯನಿರ್ವಹಿಸಿ 2002 ರ 17ನೇ ಸೆಪ್ಟೆಂಬರ್‌ನಲ್ಲಿ ಪ್ರತ್ಯೇಕ ಸ್ಥಾನಮಾನ ಪಡೆಯಿತು. ಒಂದು ಜ್ಞಾನ ಕೇಂದ್ರವಾಗಿ ನಾಗರಿಕ ಸಮಾಜಕ್ಕೆ ನಿಸರ್ಗದೊಂದಿಗೆ ಸಾಮರಸ್ಯದಿಂದ ಬದುಕಲು ಪ್ರೇರಣೆ ಒದಗಿಸುವ ದೂರ ದೃಷ್ಟಿ ಹೊಂದಿದೆ.

ಭಾರತೀಯ ಅರಣ್ಯ ಸೇವೆಯ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಹಾನಿರ್ದೇಶಕರಾಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶಕರಾಗಿ, ಅರಣ್ಯ ಸಂರಕ್ಷಣಾಧಿಕಾರಿ ಸಂಶೋಧನಾ ನಿರ್ದೇಶಕರಾಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲ್ಲದೇ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಪರಿಸರ ಅಧಿಕಾರಿ ಯೋಜನಾ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ,

ಪ್ರಸ್ತುತ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಮುಖ್ಯ ಪರಿಸರ ಅಧಿಕಾರಿ ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ನಿರ್ದೇಶಕ ಹಾಗೂ ಸಂಶೋಧನಾ ನಿರ್ದೇಶಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ, ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತರ ಪದವಿ, ವಿಜ್ಞಾನ, ಕಲೆ, ವಾಣಿಜ್ಯ, ಇಂಜಿನಿಯರಿಂಗ್ ಪದವಿ ಪಡೆದಿರುವ ಯುವ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ಜೀವ ಪರಿಸ್ಥಿತಿ ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಎಂಪ್ರಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವುದು ಇಲ್ಲಿನ ವ್ಯವಸ್ಥೆ.

ಕಾರ್ಯಯೋಜನೆ ಹೇಗಿದೆ

ಪರಿಸರಕ್ಕೆ ಸಂಬಂಧಪಟ್ಟಂತೆ ನಿಯಮಾನುಸಾರ, ಸಮಯಾನುಸಾರ ಕಡ್ಡಾಯವಾಗಿ ಪಾಲಿಸಲೇಬೇಕಾದ ವಿವಿಧ ಶಾಸನಬದ್ಧ ಕಾಯ್ದೆ, ಮಾರ್ಗದರ್ಶಿ ಸೂತ್ರಗಳ ಜೊತೆಗೆ ಕಾಲಕಾಲಕ್ಕೆ ನೀಡಲಾಗುವ ನ್ಯಾಯಾಂಗ ತೀರ್ಪು ಮತ್ತು ಘೋಷಣೆಗಳನ್ನು ಕಾರ್ಯರೂಪದಲ್ಲಿ ತರುವುದಕ್ಕೆ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕರಿಗೆ ಸಹಾಯ ಮಾಡುವುದು ಮತ್ತು ಸಂಬಂಧಿಸಿದ ಸಂಸ್ಥೆಗಳಿಗೆ ನಿಯಮಗಳನ್ನು ರೂಪಿಸುವಲ್ಲಿ ಸಹಕರಿಸುತ್ತಿದೆ.

ಪರಿಸರ ಸಂರಕ್ಷಣೆ ಮತ್ತು ಅದಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಸಂಶೋಧನೆ ಅಧ್ಯಯನ ಕೈಗೊಳ್ಳುವುದು, ಅಭಿವೃದ್ದಿಪಡಿಸುವುದು ಮತ್ತು ಪರಿಸರ ಸಂರಕ್ಷಣೆಯ ಸಮಗ್ರ ಗುಣಮಟ್ಟದ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದೂ ಇದರ ಕಾರ್ಯಯೋಜನೆಗಳಲ್ಲಿ ಸೇರಿದೆ. ಪರಿಸರ ಸಂಶೋಧನೆ ಕ್ಷೇತ್ರದಲ್ಲಿ ಪರಿಣಿತಿ ಮತ್ತು ವಿಶ್ವ ದರ್ಜೆಯ ಸಲಹೆಗಾರರನ್ನು ಬೆಳೆಸುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ನಿಯಮಿತ ತರಬೇತಿ

ಸದಭಿರುಚಿ ಧ್ಯೇಯೋದ್ದೇಶ ಹೊಂದಿದ ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪರಿಸರ ಸಂವಹನೆ ನಡೆಸಿ ಎಂಪ್ರಿ ವಿಶ್ವಾಸಾರ್ಹತೆ ಬೆಳೆಸಿಕೊಂಡಿದೆ. ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ, ತರಬೇತಿ ಕೈಗೊಂಡು ಪಾಲುದಾರರಿಗಾಗಿ ಉಪನ್ಯಾಸ, ಕಾರ್ಯಾಗಾರ, ಚರ್ಚೆ ಮತ್ತು ಪ್ರದರ್ಶನ ಆಯೋಜಿಸಿದೆ.

ಸಂಸ್ಥೆಯ ಧ್ಯೇಯೋದ್ದೇಶ ಅಭಿವೃದ್ಧಿಗೆ ಅಪೇಕ್ಷಣೀಯವೆನಿಸುವ ಶೈಕ್ಷಣಿಕ ಮತ್ತು ಮಾಹಿತಿ ಪೂರ್ಣವಾದ ಪುಸ್ತಕಗಳು ಕರಪತ್ರಗಳು ಮತ್ತು ನಿಯತಕಾಲಿಕ ಮುದ್ರಣ ಪ್ರಕಾಶನ ಮತ್ತು ಪ್ರದರ್ಶನಗಳನ್ನು ಮಾಡಿದೆ. ಪರಿಸರ ಮಾಹಿತಿ ಕೇಂದ್ರವನ್ನು ಮುನ್ನಡೆಸುವುದು ಮತ್ತು ಪುಸ್ತಕಗಳು, ನಿಯತಕಾಲಿಕಗಳು, ಚಿತ್ರಗಳು ಮತ್ತು ಇತರ ಶ್ರವಣ, ದೃಶ್ಯ ಸಾಮಗ್ರಿಗಳ ಮೂಲಕ ಆಧಾರಯುಕ್ತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಣೆ ಮಾಡುತ್ತಲೇ ಪ್ರಸಕ್ತ ನೀತಿ ಮತ್ತು ಪರಿಸರ ಸಮಸ್ಯೆಗಳ ಮೇಲೆ ಸಂಶೋಧನೆ ಮುಂದುವರಿಸುತ್ತಿದೆ.

ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಕರ್ನಾಟಕದ ಪರಿಸರ ನೀತಿ ನಿರೂಪಣೆ, ಅಧ್ಯಯನ ಶ್ರೇಷ್ಠತೆಯ ಎಂಪ್ರಿ ಸಂಸ್ಥೆ ಹೇಗಿದೆ ?

ಒಂದು ಸಾಲಿನಲ್ಲಿಕರ್ನಾಟಕ ಸರ್ಕಾರದ ಎಂಪ್ರಿ (EMPRI) ಸಂಸ್ಥೆಯು ಪರಿಸರ ಸಂಶೋಧನೆ, ನೀತಿ ನಿರೂಪಣೆ ಮತ್ತು ವೈಜ್ಞಾನಿಕ ಅಧ್ಯಯನಗಳ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ತರ ಕೊಡುಗೆ ನೀಡುತ್ತಿದೆ.ಏನು? ಏಕೆ? ಹೇಗೆ?

ಎಂಪ್ರಿ (EMPRI) ಸಂಸ್ಥೆ ಎಂದರೇನು?

ಇದು ಕರ್ನಾಟಕ ಸರ್ಕಾರದ ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಡಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಪರಿಸರ ನೀತಿ ಮತ್ತು ಸಂಶೋಧನೆಗಾಗಿ ಸ್ಥಾಪಿಸಲಾಗಿದೆ.

ಈ ಸಂಸ್ಥೆಯ ಮುಖ್ಯ ಉದ್ದೇಶವೇನು?

ಪರಿಸರ ಸಂರಕ್ಷಣೆಗಾಗಿ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳುವುದು, ಸರ್ಕಾರದ ಇಲಾಖೆಗಳಿಗೆ ನೀತಿ ನಿರೂಪಣೆಯಲ್ಲಿ ಸಹಾಯ ಮಾಡುವುದು ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಗುರಿಯಾಗಿದೆ.

ಸಂಸ್ಥೆ ಕೈಗೊಳ್ಳುವ ಪ್ರಮುಖ ಕಾರ್ಯಗಳು ಯಾವುವು?

ಜಲ ಸಂಪನ್ಮೂಲ ನಿರ್ವಹಣೆ, ವಾಯುಗುಣ ಬದಲಾವಣೆ ಅಧ್ಯಯನ, ತ್ಯಾಜ್ಯ ನಿರ್ವಹಣೆ, ಜೀವವೈವಿಧ್ಯತೆ ಸಂರಕ್ಷಣೆ ಮತ್ತು ಪರಿಸರಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರಗಳನ್ನು ಎಂಪ್ರಿ ನಡೆಸುತ್ತದೆ.

ಎಂಪ್ರಿ ಸಂಸ್ಥೆಗೆ ಸಿಕ್ಕಿರುವ ಮಾನ್ಯತೆಗಳೇನು?

ಸಂಸ್ಥೆಯು ಐಎಸ್‌ಒ (ISO) 9001:2015 ಮತ್ತು 45002:2018 ಮಾನ್ಯತೆಗಳನ್ನು ಪಡೆದಿದೆ, ಜೊತೆಗೆ 'ಹಸಿರು ಭವನ' ಕಟ್ಟಡಕ್ಕಾಗಿ ಗೃಹ (GRIHA) ಪ್ರಶಸ್ತಿ ಸೇರಿದಂತೆ ಹಲವು ಸುಸ್ಥಿರ ಅಭಿವೃದ್ಧಿ ಪುರಸ್ಕಾರಗಳನ್ನು ಪಡೆದಿದೆ.

ಸಂಸ್ಥೆಯ ತಜ್ಞರ ತಂಡ ಹೇಗಿದೆ?

ವಿಜ್ಞಾನ, ಕಲೆ, ಇಂಜಿನಿಯರಿಂಗ್ ಮತ್ತು ಅರಣ್ಯ ಸೇವೆಯ ಅನುಭವಿ ಅಧಿಕಾರಿಗಳು ಹಾಗೂ ವಿವಿಧ ವಿಷಯಗಳಲ್ಲಿ ಡಾಕ್ಟರೇಟ್ ಪಡೆದ ಯುವ ತಜ್ಞರು ಇಲ್ಲಿ ಪರಿಸರ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

&ಪ್ರಮುಖ ಅಂಕಿಅಂಶಗಳು2002ಪ್ರತ್ಯೇಕ ಸ್ಥಾನಮಾನ ಪಡೆದ ವರ್ಷ2015ಗೃಹ ಪ್ರಶಸ್ತಿ ಪಡೆದ ವರ್ಷISO 9001:2015ಪ್ರಯೋಗಾಲಯದ ಪ್ರಮಾಣೀಕರಣಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅಧ್ಯಯನಗಳ ವಿಶೇಷತೆ

ಪರಿಸರ ನಿರ್ವಹಣೆ ಕುರಿತು ವಿಶ್ವದರ್ಜೆಯ ತರಬೇತಿ, ಸಲಹೆ ಸೇವೆ ನೀಡುತ್ತಿದೆ. ನೈಸರ್ಗಿಕ ಸಂಪನ್ಮೂಲ ಪರಿಣಾಮಕಾರಿಯಾಗಿ ರಕ್ಷಿಸಿ ನಿರ್ವಹಿಸಲು ಮತ್ತು ಇತರ ಸಂಸ್ಥೆಗಳಿಗೆ ಸಲಹಾ ಸೇವೆ ಒದಗಿಸುತ್ತಿದೆ. ಪರಿಸರಕ್ಕೆ ಸಂಬಂಧಿಸಿ ಹಲವಾರು ಅಂಶಗಳ ಮೇಲೆ ಅಧ್ಯಯನಗಳನ್ನು ಕೈಗೊಂಡು ನೀತಿ ದಾಖಲೆ ಅಭಿವೃದ್ಧಿಪಡಿಸಿದೆ.

ರಾಜ್ಯದಾದ್ಯಂತ ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಪರಿಸರ ನಿರ್ವಹಣೆ, ಹವಾಗುಣ ಬದಲಾವಣೆ ವಿವಿಧ ಇಲಾಖೆಗಳ ಕ್ರಿಯಾಯೋಜನೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆ, ವಾಯುಗುಣ ಮೌಲ್ಯಮಾಪನ ಬೆಂಗಳೂರಿನ ವಿವಿಧ ವಾರ್ಡುಗಳಲ್ಲಿ ತರಬೇತಿ ನೀಡುವುದನ್ನು ರೂಢಿಸಿಕೊಂಡು ಬರಲಾಗುತ್ತಿದೆ.

ನಗರೀಕರಣದಿಂದ ಮರಗಳಿಗೆ ಆಗುವ ತೊಂದರೆಗಳು, ಅವುಗಳನ್ನು ಎಚ್ಚರಿಕೆಯಿಂದ ಬಳಸಬೇಕಾದ ರೀತಿ, ಉಡುಪಿ ವಿದ್ಯುತ್ ಸ್ಥಾವರ ವಿಸ್ತರಣೆಯ ಪರಿಣಾಮ, ಮಾರುಕಟ್ಟೆಯಲ್ಲಿ ದೊರಕುವ ತರಕಾರಿಯಲ್ಲಿರುವ ಕೀಟನಾಶಕ ವಸ್ತುಗಳ ಅಂಶದ ಪರಿಶೀಲನೆ, ಪರಾಗಸ್ಪರ್ಶ ಏಜೆಂಟುಗಳಾದ ಕೀಟಗಳ ಅಧ್ಯಯನ, ಚಿಟ್ಟೆಗಳ ಅಧ್ಯಯನ.. ಹೀಗೆ ಹಲವಾರು ಅಧ್ಯಯನಗಳನ್ನು ಎಂಪ್ರಿಯಿಂದ ನಡೆಸಲಾಗುತ್ತಿದೆ. ಪರಿಸರದ ವಿಚಾರದಲ್ಲಿ ಎಂಪ್ರಿ ಕಾರ್ಯ ಮಹತ್ತರವಾದದ್ದೇ.

ಕರ್ನಾಟಕದ ಪರಿಸರದ ವಸ್ತು ಸ್ಥಿತಿಯ ವರದಿ 2003, 2008 , 2013, ಹವಾಗುಣ ಬದಲಾವಣೆಯಲ್ಲಿ ರಾಜ್ಯ ಕ್ರಿಯಾಯೋಜನೆಗಳು 2015, 2025, ಬೆಂಗಳೂರಿಗೆ ಜಲ ಸುರಕ್ಷತಾ ಯೋಜನೆ ಕೂಡ ಎಂಪ್ರಿ ಕೈಗೊಂಡ ಪ್ರಮುಖ ಅಧ್ಯಯನಗಳೇ.

(ಲೇಖಕರು: ನಿವೃತ್ತ ಐಎಫ್‌ಎಸ್ ಅಧಿಕಾರಿ ಹಾಗೂ ಎಂಪ್ರಿ ಸಂಸ್ಥೆ ಮಾಜಿ ನಿರ್ದೇಶಕ)

ಬೆಂಗಳೂರಿನ ದೊರೆಸಾನಿಪಾಳ್ಯದಲ್ಲಿರುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಕಟ್ಟಡ 'ಹಸಿರು ಭವನ'ಕ್ಕೆ ಗೃಹ 2015 ರ ಪ್ರಶಸ್ತಿ ಮತ್ತು 4 ಸ್ಟಾರ್‌ ಮೌಲ್ಯಮಾಪನ ದೊರಕಿದೆ. ಸುಸ್ಥಿರ ಉಪಕ್ರಮಗಳು ಪ್ರಶಂಸೆ ಪ್ರಶಸ್ತಿ 2002ರಲ್ಲಿ ಸಿಕ್ಕಿದೆ, ಎಲ್ಸಿಟಾ ಸುಸ್ಥಿರ ಪ್ರಶಸ್ತಿ 2024-25ರಲ್ಲಿ ದೊರಕಿದೆ. ರಾಷ್ಟ್ರೀಯ ಹಸಿರುಪಡೆ ಯೋಜನೆಯಲ್ಲಿ ಕರ್ನಾಟಕದ ಶಾಲೆಗೆ ರಾಷ್ಟ್ರೀಯ ಪುರಸ್ಕಾರವು ಸಿಕ್ಕಿದೆ. ಸಂಸ್ಥೆಯಲ್ಲಿ ಜಲ, ವಾಯು, ಪಾಚಿ,ಶಿಲೀಂದ್ರ, ಸಸ್ಯ ಪರೀಕ್ಷೆ ಹಾಗೂ ಹವಾಗುಣ ಬದಲಾವಣೆ ವಿಶ್ಲೇಷಣೆಗೆ ಸ್ಥಾಪಿಸಿರುವ ಪ್ರಯೋಗಶಾಲೆ ಐಎಸ್‌ಒ 9001:2015 45002:2018 ಮಾನ್ಯತೆ ಪಡೆದಿದೆ. ಸಂಸ್ಥೆಯಲ್ಲಿ ವಿವಿಧ ಶಾಖೆಗಳಾದ ಹವಾಗುಣ ಬದಲಾವಣೆ, ಸಾಮರ್ಥ್ಯ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಮತ್ತು ಸಾರ್ವಜನಿಕ ನೀತಿ, ಪರಿಸರ ಮಾಹಿತಿ , ಭೂ ಮಾಹಿತಿ ತಂತ್ರಜ್ಞಾನ ಕೇಂದ್ರ, ಪರಿಸರ ಮಾಹಿತಿ ಅರಿವು ಸಾಮರ್ಥ್ಯ ಅಭಿವೃದ್ಧಿ ಜೀವನೋಪಾಯ ಕಾರ್ಯಕ್ರಮಗಳ ಕೇಂದ್ರ, ಪರಿಸರ ಶೈಕ್ಷಣಿಕ ಕಾರ್ಯಕ್ರಮ, ಮಾಹಿತಿ ಕೇಂದ್ರ ಮತ್ತು ಗ್ರಂಥಾಲಯ, ಕೆರೆ ಸಂರಕ್ಷಣಾ ಕೇಂದ್ರ, ಅರಣ್ಯ ಪರಿಸರ ಶಾಸ್ತ್ರ ಮತ್ತು ವನ್ಯಜೀವಿ ಕೇಂದ್ರ, ಪ್ರಯೋಗಶಾಲಾ ಕೇಂದ್ರಗಳಿವೆ. ಪ್ರತಿಯೊಂದರಲ್ಲೂ ಸೂಕ್ತ ಸಿಬ್ಬಂದಿ ಇದ್ದಾರೆ.ಹಲ ಪ್ರಶಸ್ತಿ, ಐಎಸ್ಒ ಮಾನ್ಯತೆಪ್ರಜಾವಾಣಿ ಕರುನಾಡೋತ್ಸವ| ಗಡಿನಾಡ ಪರಂಪರೆಯ ‘ನಾಡೋಜ ಕಯ್ಯಾರ ಕಿಞ್ಞಣ್ಣ ರೈ’ಕರುನಾಡೋತ್ಸವ: ಸಹ್ಯಾದ್ರಿ ಕಣಿವೆ ಅರ್ಥೈಸಿಕೊಳ್ಳಲು ನಾವು ಸೋಲುತ್ತಿರುವುದೆಲ್ಲಿ?ಕರುನಾಡೋತ್ಸವ: ರೋಗಗ್ರಸ್ತಗೊಂಡಿರುವ ಕರ್ನಾಟಕದ ನದಿಗಳ ಸಂರಕ್ಷಣೆಗೆ ಇಲ್ಲಿದೆ ಮಾರ್ಗಕರುನಾಡೋತ್ಸವ | ಉದಯವಾದರೂ ಕನ್ನಡನಾಡು ಕೇರಳದಲ್ಲೇ ಉಳಿಯಿತು ಕಾಸರಗೋಡು