ಕಳೆದ ವಾರ ಬಿಗ್ಬಾಸ್ ಸ್ಪರ್ಧಿಗಳಿಗೆ ಮನೆಗಳಿಂದ ಪತ್ರಗಳು ಬಂದಿದ್ದವು. ಆ ಪತ್ರಗಳನ್ನು ಪಡೆಯಲು ಸ್ಪರ್ಧಿಗಳು ವಿವಿಧ ಟಾಸ್ಕ್ಗಳಲ್ಲಿ ಪಾಲ್ಗೊಂಡು ಆಡಿ ಗೆಲ್ಲಬೇಕಿತ್ತು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಟಾಸ್ಕನ್ನು ನೀಡಲಾಗಿತ್ತು. ಗಾನವಿ ಮತ್ತು ಆಸಿಯಾ ಅವರಿಗೆ ವಿಭಿನ್ನವಾದ ಟಾಸ್ಕ್ ನೀಡಲಾಗಿತ್ತು. ಪತ್ರವನ್ನು ಪಡೆಯಲು ಆಸಿಯಾ ಮತ್ತು ಗಾನವಿ ಅವರು ಮನೆ ಮಂದಿಯ ಮನ ಒಲಿಸಬೇಕಿತ್ತು. ಟಾಸ್ಕ್ ಶುರು ಆಗುವ ಮುನ್ನ ಎಲ್ಲರಿಗೂ ಅನಿಸಿದ್ದು, ಆಸಿಯಾ ಅವರಿಗೆ ಪತ್ರ ಸಿಗುತ್ತದೆಂದು ಆದರೆ ಅದು ಸಿಕ್ಕಿದ್ದು ಗಾನವಿಗೆ.
ಗಾನವಿ ಅವರು ಕಣ್ಣೀರು ಹಾಕುತ್ತಾ, ‘ನನ್ನ ತಾಯಿ ಸಿಂಗಲ್ ಮದರ್, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ’ ಎಂದೆಲ್ಲ ಹೇಳಿ ಎಲ್ಲರ ಮುಂಚೆ ಅತ್ತು ಬಿಟ್ಟರು. ಸದಾ ಇನ್ನೊಬ್ಬರೊಟ್ಟಿಗೆ ಜಗಳವನ್ನೇ ಮಾಡುತ್ತಿದ್ದ ಗಾನವಿ ಎಲ್ಲರ ಮುಂದೆ ಅತ್ತಿದ್ದು ನೋಡಿ ಹಲವರು ಭಾವುಕರಾಗಿಬಿಟ್ಟರು. ಆದರೆ ಆಸಿಯಾ ಕಣ್ಣೀರು ಹಾಕಲಿಲ್ಲ ಬದಲಿಗೆ, ತಮ್ಮ ಕುಟುಂಬದ ಪತ್ರ ತಮಗೇಕೆ ಬೇಕು ಎಂದು ವಿವರಿಸಿದರು. ಆದರೆ ಗಾನವಿಯ ಕಣ್ಣೀರು ಹೆಚ್ಚು ಕೆಲಸ ಮಾಡಿ ಗಾನವಿಗೆ ಪತ್ರ ಸಿಗುವಂತಾಯ್ತು.
ಆದರೆ ನಿನ್ನೆ ವೀಕೆಂಡ್ ಎಪಿಸೋಡಿನಲ್ಲಿ ಸುದೀಪ್ ಅವರು ಗಾನವಿಯ ನಿಜ ಬಣ್ಣ ಬಯಲು ಮಾಡಿದರು. ಗಾನವಿ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಾಗ ಅವರ ಪರಿಚಯದ ವಿಡಿಯೋ ಶೂಟ್ ಮಾಡಲಾಗಿತ್ತು. ಆ ವಿಡಿಯೋನಲ್ಲಿ ಖುದ್ದು ಗಾನವಿಯೇ ಹೇಳಿದ್ದರು, ಅವರದ್ದು ಕೂಡು ಕುಟುಂಬ. ಒಟ್ಟು 18 ಮಂದಿ ಅವರ ಕುಟುಂಬದಲ್ಲಿದ್ದು ಎಲ್ಲರೂ ಒಟ್ಟಿಗೆ ಇದ್ದಾರೆ ಎಂದು. ಆ ವಿಡಿಯೋ ಅನ್ನು ಸುದೀಪ್ ಪ್ಲೇ ಮಾಡಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ತಾಂಡವ್-ಪ್ರಶಾಂತ್ ಸಖತ್ ಕಾಮಿಡಿ: ವಿಡಿಯೋ
ವಿಡಿಯೋ ನೋಡುತ್ತಿದ್ದಂತೆ ಗಾನವಿಗೆ ಮತ ಹಾಕಿದವರಿಗೆ ಶಾಕ್ ಆಯ್ತು. ಅದರಲ್ಲೂ ತಾಂಡವ್, ಟಾಸ್ಕ್ ವೇಳೆ ಗಾನವಿ ಅತ್ತಿದ್ದನ್ನು ನೋಡಿ ಬಹಳ ಭಾವುಕರಾಗಿಬಿಟ್ಟಿದ್ದರು. ಖುದ್ದು ತಾವು ವೋಟ್ ಹಾಕುವ ಜೊತೆಗೆ ಬೇರೆ ಕೆಲವರಿಂದಲೂ ಗಾನವಿಗೆ ವೋಟ್ ಹಾಕಿಸಿದ್ದರು. ಆದರೆ ಸುದೀಪ್ ತೋರಿಸಿದ ವಿಡಿಯೋ ನೋಡಿ ತಾಂಡವ್ಗೆ ಶಾಕ್ ಆಗಿ ಬಿಟ್ಟಿತು.
ಆದರೆ ಅದಾದ ಮೇಲೆ ಗಾನವಿ ಹೇಳಿದಂತೆ. ‘ಮಂಗಳೂರಿನಲ್ಲಿ ನಮ್ಮ ಕುಟುಂಬ ಇರುತ್ತದೆ. ಮೊದಲು ನಾವೆಲ್ಲ ಒಟ್ಟಿಗೆ ಇದ್ದೆವು ಈಗ ಇಲ್ಲ. ಅಮ್ಮ ಪೊಲೀಸ್ ಇಲಾಖೆಯಲ್ಲಿದ್ದಾರೆ. ಅವರಿಗೆ ನೈಟ್ ಶಿಫ್ಟ್ ಎಲ್ಲ ಇರುತ್ತದೆ. ಅವರೊಟ್ಟಿಗೆ ಮಕ್ಕಳಾದ ನಾವುಗಳು ಇರುವುದಿಲ್ಲ. ಹಾಗಾಗಿ ಅವರ ಆರೋಗ್ಯದ ಬಗ್ಗೆ ನನಗೆ ಕಾಳಜಿ ಆಗಿತ್ತು, ಹಾಗಾಗಿ ಹಾಗೆ ಹೇಳಿದೆ’ ಎಂದರು ಗಾನವಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

