ಬೆಂಗಳೂರು: ‘ನಿಮ್ಮ‌ ಮೂರ್ಖತನ ಪ್ರದರ್ಶನ ಮಾಡಬೇಡಿ. ನೀವು ಹಳ್ಳಿಗಳಲ್ಲಿ ಇದ್ದರೂ ಮೂರ್ಖರೇ. ನಗರದಲ್ಲಿ ಇದ್ದರೂ ಮೂರ್ಖರೇ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

‘ಕುಮಾರಸ್ವಾಮಿ ಹಳ್ಳಿ ಗುಗ್ಗು’ ಎಂಬ ಪ್ರಿಯಾಂಕ್ ಹೇಳಿಕೆ ವಿರುದ್ಧ ಜೆಡಿಎಸ್‌ ನಾಯಕರು ಟೀಕಾಪ್ರಹಾರ ನಡೆಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ‘ನಗರದಲ್ಲಿದ್ದರೇನು? ಹಳ್ಳಿಯಲ್ಲಿದ್ದರೇನು? ಅಧಿಕಾರದಲ್ಲಿ ಇಲ್ಲದಿರುವಾಗ ಹಳ್ಳಿಯಲ್ಲಿ ಇದ್ದರು. ಅಧಿಕಾರ ಬಂದ ಬಳಿಕ ತಾಜ್ ವೆಸ್ಟ್ ಎಂಡ್​ನಲ್ಲಿ ಇರುತ್ತೀರಿ. ಹಳ್ಳಿ ಮಕ್ಕಳು ಎಂದು ಎಷ್ಟು ರಿಯಲ್ ಎಸ್ಟೇಟ್ ಮಾಡಿದ್ದೀರಿ? ಅಧಿಕಾರ ಇಲ್ಲದಾಗ ಕಣ್ಣೀರು ಬರುತ್ತದೆ. ಯಾವುದೊ ಒಂದಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ನಾನು ಆಡು ಭಾಷೆಯಲ್ಲಿ ಹೇಳಿದ್ದೇನೆ. ಅದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ಮಾಡುತ್ತಿರುವ ಆರೋಪ, ಪ್ರಶ್ನೆಗಳು, ಸಲಹೆಗಳು ಯಾವ ಹಳ್ಳಿ ಗುಗ್ಗುಗಳೂ ಮಾಡಲ್ಲ ಅಂದಿದ್ದೆ. ನನಗೆ ದಲಿತ ಬಲಿತ ಅಂದಾಗ ಯಾರೂ ಕೇಳಲಿಲ್ಲ. ಯಾಕೆ ಆ ಪದ ಬಳಕೆ ಮಾಡಿದ್ದು? ಅವರು ಮಾಡುತ್ತಿರುವ ಆರೋಪ, ಪ್ರಶ್ನೆಗಳ ಸಾಕ್ಷ್ಯ ಕೊಡಿ ಎಂದಿದ್ದೇವೆ. ಆದರೆ ಅದ್ಯಾವುದೂ ಕೊಡುತ್ತಿಲ್ಲ.‌ ಗುಗ್ಗು ಗುಗ್ಗುನೇ, ಎಲ್ಲಿಯಾದರೂ ಇರಿ’ ಎಂದು ಕೆಣಕಿದರು. ಹಳ್ಳಿಯವರಿಗೆ ಅಪಮಾನ ಮಾಡಿರುವ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಆಡು ಭಾಷೆಯಲ್ಲಿ ಹೇಳಿರುವುದರಲ್ಲಿ ತಪ್ಪೇನಿದೆ? ಅವರು (ಕುಮಾರಸ್ವಾಮಿ) ಆಡಿದ ಮಾತುಗಳಿಗೆ ವಿಷಾದ ವ್ಯಕ್ತಪಡಿಸಲಿ, ಆಮೇಲೆ‌ ನೋಡೋಣ’ ಎಂದರು.

261106-51-386254744