ಬೆಂಗಳೂರು, ನವೆಂಬರ್ 6: ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಹಾಗೂ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಡುವೆ ಅಧಿಕಾರ ವ್ಯಾಪ್ತಿಯಲ್ಲಿ ಬದಲಾವಣೆ ಆಗುತ್ತಿರುವುದರಿಂದ, ಮಂಗಳೂರು ಸೆಂಟ್ರಲ್ ಸೇರಿದಂತೆ ಈ ಭಾಗದ ಹಲವು ರೈಲುಗಳ ಸಂಖ್ಯೆಯನ್ನು ಬದಲಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ಒಟ್ಟು 18 ಎಕ್ಸ್ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಹಾಗೂ 12 ದೈನಂದಿನ ಪ್ಯಾಸೆಂಜರ್ ರೈಲುಗಳ ಸಂಖ್ಯೆ ಬದಲಾಗಲಿದೆ. ಹೊಸ ಸಂಖ್ಯೆಗಳು 2027 ರ ಜನವರಿ 1 ರಿಂದ ಜಾರಿಯಾಗಲಿವೆ. ರಾಮೇಶ್ವರಂ ಮಾರ್ಗದ ಎರಡು ವೀಕ್ಲಿ ರೈಲು ಸಂಚಾರಕ್ಕೆ ಮಾತ್ರ ಬೇರೆ ದಿನಾಂಕ ನಿಗದಿಯಾಗಿದೆ. ಮಂಗಳೂರು ರೈಲು ನಿಲ್ದಾಣವನ್ನು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರಿಸಿ ಇತ್ತೀಚೆಗೆ ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ಪ್ರಕಟಿಸಿತ್ತು.
ನೈಋತ್ಯ ರೈಲ್ವೆ ಎಕ್ಸ್ ಸಂದೇಶ
Kindly note:
The train numbers of the following Express, Vande Bharat Express and Passenger trains will be changed due to jurisdictional change between Mysuru Division of South Western Railway and Palakkad Division of Southern Railway. The changed numbers will come into effect from January 2027.
#SWRupdates— South Western Railway (@SWRRLY) November 5, 2026
ರೈಲುಗಳ ನಿಲ್ದಾಣಗಳು ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ರೈಲುಗಳ ಹೊಸ ಸಂಖ್ಯೆಯ ಪಟ್ಟಿ
ಹಳೆ ಸಂಖ್ಯೆ ರೈಲು ಹೊಸ ಸಂಖ್ಯೆ 16629 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಮಲಬಾರ್ ಡೈಲಿ ಎಕ್ಸ್ಪ್ರೆಸ್ 16230 16630 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಮಲಬಾರ್ ಡೈಲಿ ಎಕ್ಸ್ಪ್ರೆಸ್ 16229 16603 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಮಾವೇಲಿ ಡೈಲಿ ಎಕ್ಸ್ಪ್ರೆಸ್ 16233 16604 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಮಾವೇಲಿ ಡೈಲಿ ಎಕ್ಸ್ಪ್ರೆಸ್ 16234 16649 ಮಂಗಳೂರು ಸೆಂಟ್ರಲ್–ಕನ್ಯಾಕುಮಾರಿ ಪರಶುರಾಮ್ ಡೈಲಿ ಎಕ್ಸ್ಪ್ರೆಸ್ 16249 16650 ಕನ್ಯಾಕುಮಾರಿ–ಮಂಗಳೂರು ಸೆಂಟ್ರಲ್ ಪರಶುರಾಮ್ ಡೈಲಿ ಎಕ್ಸ್ಪ್ರೆಸ್ 16250 16605 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ಎರ್ನಾಡ್ ಡೈಲಿ ಎಕ್ಸ್ಪ್ರೆಸ್ 16237 16606 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ಎರ್ನಾಡ್ ಡೈಲಿ ಎಕ್ಸ್ಪ್ರೆಸ್ 16238 16622 ಮಂಗಳೂರು ಸೆಂಟ್ರಲ್–ರಾಮೇಶ್ವರಂ ವೀಕ್ಲಿ ಎಕ್ಸ್ಪ್ರೆಸ್ 16241 16621 ರಾಮೇಶ್ವರಂ–ಮಂಗಳೂರು ಸೆಂಟ್ರಲ್ ವೀಕ್ಲಿ ಎಕ್ಸ್ಪ್ರೆಸ್ 16242 16324 ಮಂಗಳೂರು–ಕೊಯಮತ್ತೂರು ಡೈಲಿ ಎಕ್ಸ್ಪ್ರೆಸ್ 16243 16323 ಕೊಯಮತ್ತೂರು–ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್ಪ್ರೆಸ್ 16244 16610 ಮಂಗಳೂರು ಸೆಂಟ್ರಲ್–ಪಾಲಕ್ಕಾಡ್ ಡೈಲಿ ಎಕ್ಸ್ಪ್ರೆಸ್ 16245 16611 ಪಾಲಕ್ಕಾಡ್–ಕಣ್ಣೂರು ಡೈಲಿ ಎಕ್ಸ್ಪ್ರೆಸ್ 16246 20631 ಮಂಗಳೂರು ಸೆಂಟ್ರಲ್–ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ 26659 20632 ತಿರುವನಂತಪುರಂ ಸೆಂಟ್ರಲ್–ಮಂಗಳೂರು ಸೆಂಟ್ರಲ್ ವಂದೇ ಭಾರತ್ 26660 20646 ಮಂಗಳೂರು ಸೆಂಟ್ರಲ್–ಮಡಗಾಂವ್ ವಂದೇ ಭಾರತ್ 26657 20645 ಮಡಗಾಂವ್–ಮಂಗಳೂರು ಸೆಂಟ್ರಲ್ ವಂದೇ ಭಾರತ್ 26658 56632 ಕಣ್ಣೂರು–ಕೋಯಿಕ್ಕೋಡ್ 56211 56617 ಕೋಯಿಕ್ಕೋಡ್–ಕಣ್ಣೂರು 56212 56619 ಕಣ್ಣೂರು–ಚೆರುವತ್ತೂರು 56213 56621 ಚೆರುವತ್ತೂರು–ಮಂಗಳೂರು ಸೆಂಟ್ರಲ್ 56214 56625 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ 56225 56626 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ 56226 56627 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ 56227 56628 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ 56228 56629 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ 56233 56630 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ 56234 56615 ಮಡಗಾಂವ್–ಮಂಗಳೂರು ಸೆಂಟ್ರಲ್ 56216 56616 ಮಂಗಳೂರು ಸೆಂಟ್ರಲ್–ಮಡಗಾಂವ್ 56215ಪ್ರಯಾಣಿಕರ ಗಮನಕ್ಕೆ
ರೈಲುಗಳ ನಿಲುಗಡೆ ಮತ್ತು ವೇಳಾಪಟ್ಟಿ ಈಗಿರುವಂತೆಯೇ ಮುಂದುವರಿಯಲಿದೆ. ಟಿಕೆಟ್ ಬುಕಿಂಗ್ ಅಥವಾ ರೈಲಿನ ಸ್ಥಿತಿ ಪರಿಶೀಲಿಸುವಾಗ ಜನವರಿಯಿಂದ ಹೊಸ ಸಂಖ್ಯೆಯನ್ನು ಬಳಸಬೇಕು ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

