ಬೆಂಗಳೂರು: ‘ಲೈಂಗಿಕ ದೌರ್ಜನ್ಯದಿಂದ ಗರ್ಭ ಧರಿಸಿ, ವೈದ್ಯಕೀಯ ಮಂಡಳಿಯ ಸಲಹೆಯಂತೆ ಗರ್ಭಪಾತ ಮಾಡಿಸಿಕೊಂಡ ಸಂತ್ರಸ್ತ ಬಾಲಕಿಯೊಬ್ಬಳಿಗೆ ನೀಡಲು ಆದೇಶಿಸಲಾಗಿರುವ ₹1 ಲಕ್ಷದ ಪರಿಹಾರ ಮೊತ್ತ ಅತ್ಯಲ್ಪ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಪರಿಹಾರದ ಮೊತ್ತವನ್ನು ₹7 ಲಕ್ಷಕ್ಕೆ ಏರಿಸಿ ಆದೇಶಿಸಿದೆ.
ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ತ್ಯಾಗರಾಜ ಎನ್. ಇನವಳ್ಳಿ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಈ ಕುರಿತಂತೆ ಆದೇಶಿಸಿದೆ.
‘ಪರಿಹಾರ ನಿಗದಿಪಡಿಸು ವಾಗ ಅಪರಾಧದ ಗಂಭೀರತೆ, ಸಂತ್ರಸ್ತೆಗೆ ಉಂಟಾದ ದೈಹಿಕ ಮತ್ತು ಮಾನಸಿಕ ಹಾನಿಯ ತೀವ್ರತೆ, ಚಿಕಿತ್ಸೆ ಹಾಗೂ ಸಮಾಲೋಚನೆಯ ವೆಚ್ಚವೂ ಸೇರಿದಂತೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ನಷ್ಟವೂಪರಿಗಣಿಸಬೇಕಾದ ಅಂಶಗಳಾಗಿವೆ’ ಎಂದು ನ್ಯಾಯಪೀಠ ವಿವರಿಸಿದೆ.
‘ಸಂತ್ರಸ್ತೆ ಈಗಾಗಲೇ ಪ್ರಾಪ್ತ ವಯಸ್ಕ ಳಾಗಿರುವ ಕಾರಣ ಪರಿಹಾರದ ಮೊತ್ತ ಠೇವಣಿಯಾದ ಬಳಿಕ ಸಂಪೂರ್ಣ ಹಣವನ್ನು ಆಕೆಗೆ ನೀಡಬೇಕು’ ಎಂದು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್ಎಸ್ಎ) ಶಿಫಾರಸು ಮಾಡಲಾಗಿದೆ.
261106-51-148487962

