ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ;
ಎಲ್ಲರೂ ಎದ್ದೆದ್ದು ಓಡಿ ಬನ್ನಿ;
ಕನ್ನಡದ ಗಡಿ ಕಾಯ, ಗುಡಿ ಕಾಯ...
ಕಾಯಲಾರೆನೆ ಸಾಯೆ ಓ ಬನ್ನಿ -
ಬೆಂಕಿ ಬಿದ್ದಿದೆ ಮನೆಗೆ!
ಕಾಸರಗೋಡಿನ ಕನ್ನಡಿಗರನ್ನು ಬಡಿದೆಬ್ಬಿಸಲು ಕಯ್ಯಾರ ಕಿಞ್ಞಣ್ಣ ರೈ ಬರೆದ ಕವನ ಇದು. ಕಾಸರಗೋಡನ್ನು ಕರ್ನಾಟಕದೊಂದಿಗೆ ವಿಲೀನ ಮಾಡಲೇಬೇಕು ಎಂಬ ಕನ್ನಡಿಗರ ತುಡಿತ ಕೇವಲ ಮನಸ್ಸಿನ ಭಾವನೆಯಾಗದೇ ದಶಕಗಳ ಹೋರಾಟದ ಕಿಚ್ಚಾಗಿ ಉರಿಯಲು ಕಿಞ್ಞಣ್ಣ ಮುಖ್ಯ ಕಾರಣರಾಗಿದ್ದರು.
ಕರ್ನಾಟಕ–ಕೇರಳದ ಗಡಿಯಲ್ಲಿರುವ ಕಾಸರಗೋಡನ್ನು ವಿಶೇಷವಾಗಿ ಚಂದ್ರಗಿರಿ ನದಿಯ ಉತ್ತರ ಭಾಗವನ್ನು ಕರ್ನಾಟಕಕ್ಕೆ ಸೇರಿಸಲು ದಶಕಗಳ ಕಾಲ ನಡೆದ ಪ್ರಮುಖ ಭಾಷಾ ಚಳವಳಿಯೇ ಕಾಸರಗೋಡು ಹೋರಾಟ.
ಕನ್ನಡಕ್ಕೆ ಮೊದಲ ಸ್ಥಾನ; ಏಕೀಕೃತ ಕರ್ನಾಟಕಕ್ಕೆ ಸಾಂಸ್ಕೃತಿಕ ಹೊಣೆ!: ಕುವೆಂಪುಕರುನಾಡೋತ್ಸವ: ವಿಶಿಷ್ಟ ಭಾಷೆ ತುಳುವಿನ ಅಭಿವೃದ್ಧಿಗಾಗಿ ಜನ್ಮ ತಾಳಿದ ಅಕಾಡೆಮಿಬ್ರಿಟಿಷ್ ಆಳ್ವಿಕೆಯಲ್ಲಿ ದಕ್ಷಿಣ ಕನ್ನಡವು ಮದ್ರಾಸ್ ಪ್ರಾಂತ್ಯದ ವ್ಯಾಪ್ತಿಯಲ್ಲಿತ್ತು. ದಕ್ಷಿಣ ಕನ್ನಡದಲ್ಲಿ ಕಾಸರಗೋಡು ಕೂಡ ಸೇರಿತ್ತು. ಭಾರತವು ಸ್ವತಂತ್ರಗೊಂಡ ಬಳಿಕ 1956ರಲ್ಲಿ ರಾಜ್ಯಗಳ ಉದಯವಾದಾಗ ತುಳು ಮತ್ತು ಕನ್ನಡ ಮಾತನಾಡುವ ಕಾಸರಗೋಡು ಪ್ರದೇಶವು ಕೇರಳದ ಪಾಲಾಯಿತು. ಅಂದಿನಿಂದಲೇ ಕಾಸರಗೋಡು ಕನ್ನಡಿಗರು ತಮ್ಮ ಸಾಂಸ್ಕೃತಿಕ ಬೇರುಗಳನ್ನು, ಭಾಷೆಯನ್ನು ಉಳಿಸಿಕೊಳ್ಳಲು ಚಳವಳಿ ಕಟ್ಟಿದರು.

ಕರುನಾಡೋತ್ಸವ
ಹೋರಾಟವು ತೀವ್ರಗೊಂಡು, ಗಡಿವಿವಾದವು ತಾರಕಕ್ಕೇರಿದ್ದರಿಂದ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೆಹರ್ಚಂದ್ ಮಹಾಜನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. ಕಾಸರಗೋಡು ತಾಲ್ಲೂಕಿನ ಕಾಸರಗೋಡು ಮತ್ತು ಮಂಜೇಶ್ವರ ಭಾಗಗಳು ಮೈಸೂರು ರಾಜ್ಯಕ್ಕೆ (ಇಂದಿನ ಕರ್ನಾಟಕ) ಸೇರಬೇಕು ಎಂದು ಮಹಾಜನ್ ಆಯೋಗವು ಶಿಫಾರಸು ಮಾಡಿತು. ಆದರೆ, ಕೇರಳ (ಈಗಿನ ಕೇರಳಂ) ಸರ್ಕಾರವು ಈ ಭಾಗವನ್ನು ಬಿಟ್ಟುಕೊಡಲು ಒಪ್ಪದೇ ಇದ್ದಿದ್ದರಿಂದ ಕಾಸರಗೋಡು ಕೇರಳದಲ್ಲಿಯೇ ಉಳಿಯಬೇಕಾಯಿತು.
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ: ದಾಖಲೆಗಳ ಸಂಗ್ರಹದಲ್ಲಿ ತೊಡಗಿದ ತೋಟಿಗೇರಜಯನಗರ ಗ್ಯಾರೇಜ್ನಲ್ಲಿ ಹುಟ್ಟಿದ ಆಲೋಚನೆ: WildCraft ಬ್ರಾಂಡ್ ಬೆಳೆದಿದ್ದೇ ರೋಚಕಕಯ್ಯಾರ ಕಿಞ್ಞಣ್ಣ ರೈ ಅವರು ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯನ್ನು ಕಟ್ಟಿ ಹೋರಾಟವನ್ನು ನಿರಂತರವಾಗಿ ಮಾಡಿದರು. ತನಗೆ 100 ವರ್ಷ ದಾಟಿದರೂ ಹೋರಾಟದಿಂದ ಹಿಂದಕ್ಕೆ ಸರಿಯಲಿಲ್ಲ. ಅವರ ಜೊತೆಗೆ ಹಿರಿಯ ಸಾಹಿತಿಗಳಾದ ಬಿ.ಎಂ. ಉಡುಪ, ಉಮೇಶ್ ರಾವ್ ಸಹಿತ ಅನೇಕರು ಹೋರಾಟ ಮಾಡಿ ಜೈಲುವಾಸ ಅನುಭವಿಸಿದರು.
ಕಿಞ್ಞಣ್ಣ ರೈಗಳ ಕಾಲಾನಂತರ ಕಾಸರಗೋಡಿನ ಹೋರಾಟವು ಕಸುವು ಕಳೆದುಕೊಂಡರೂ ಧ್ವನಿ ಇನ್ನೂ ಅಡಗಿಲ್ಲ. ಈಗಂತು ಸರ್ಕಾರಿ ಕಚೇರಿಗಳ ಆದೇಶಗಳು, ನಾಮಫಲಕಗಳು, ಕಂದಾಯ ಇಲಾಖೆಯ ದಾಖಲೆಗಳ ಸಹಿತ ಎಲ್ಲವನ್ನು ಮಲಯಾಳೀಕರಣ ಮಾಡಲಾಗುತ್ತಿದೆ. ಶಾಲೆಯಲ್ಲಿ ಕನ್ನಡ ಪುಸ್ತಕ ಪೂರೈಕೆಯಾಗುತ್ತಿಲ್ಲ.
ಕನ್ನಡ ನಾಡು ಉದಯವಾದರೂ ಕೇರಳಂ ಸರ್ಕಾರದ ಹಠದಿಂದಾಗಿ ಕಾಸರಗೋಡು ಕರ್ನಾಟಕಕ್ಕೆ ಸೇರಲಿಲ್ಲ. ಕನ್ನಡಿಗರು ನೋವುಣ್ಣುತ್ತಲೇ ಮನೆಯೊಳಗೆ ಭಾಷೆಯನ್ನು ಉಳಿಸಿಕೊಂಡಿದ್ದಾರೆ. ಬೀದಿಗೆ ಮಲಯಾಳಂ ನುಗ್ಗಿದೆ. ಮಹಾಜನ್ ವರದಿ ಜಾರಿಯಾಗಬೇಕು. ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕು ಎಂಬ ಹೋರಾಟ ಈಗಲೂ ನಡೆಯುತ್ತಿದೆ.
ಸಂದರ್ಶನ | ಜನಕನ್ನಡಂ ಗೆಲ್ಗೆ: ಬರಗೂರು ರಾಮಚಂದ್ರಪ್ಪ ಆಶಯಪ್ರಜಾವಾಣಿ ಕರುನಾಡೋತ್ಸವ| ಲಕ್ಷ್ಮೀಶ ಕವಿಯ 'ದೇವನೂರು'
