ಚೆನ್ನೈನಲ್ಲಿ ನಡೆದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಕುಟುಂಬದ ಅದ್ಧೂರಿ ರಿಸೆಪ್ಷನ್​ನಲ್ಲಿ ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಷಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ವೇದಿಕೆ ಏರಿ ನವಜೋಡಿಗೆ ಶುಭ ಹಾರೈಸಿದರು. ಇವರ ಜೊತೆಗೆ ವಿಜಯ್ ಅವರ ತಾಯಿ ಶೋಭಾ ಕೂಡ ಭಾಗಿಯಾಗಿದ್ದರು. ಈ ಅಪರೂಪದ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತಮಿಳುನಾಡು ರಾಜಕೀಯ ಹಾಗೂ ಚಿತ್ರರಂಗದಲ್ಲಿ ಈಗ ಒಂದೇ ಒಂದು ಸುದ್ದಿ ಸದ್ದು ಮಾಡುತ್ತಿದೆ. ಅದುವೇ ಸಿಎಂ ವಿಜಯ್ ಹಾಗೂ ತ್ರಿಷಾ ಅವರ ಡೇಟಿಂಗ್ ವಿಷಯ. ಈ ಮೊದಲು ಕೂಡ ಚೆನ್ನೈನಲ್ಲಿ ನಡೆದ ಮದುವೆಗೆ ಒಟ್ಟಾಗಿ ಹಾಜರಿ ಹಾಕಿ ಸುದ್ದಿ ಆಗಿದ್ದರು. ಈಗ ಇಬ್ಬರೂ ಚೆನ್ನೈನ ಪ್ರಸಿದ್ಧ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಜೊತೆಯಾಗಿ ಬಂದಿದ್ದರು. ಜಗನ್ ಮೋಹನ್ ರೆಡ್ಡಿ ಕುಟುಂಬಕ್ಕೆ ಅವರು ವಿಶ್ ಮಾಡಿ ತೆರಳಿದರು.

ವಿಜಯ್ ಅವರು ಕಂದು ಬಣ್ಣದ ರಾಯಲ್ ಸೂಟ್ ಧರಿಸಿ ಮಿಂಚಿದ್ದಾರೆ. ತ್ರಿಷಾ ಅವರು ತಿಳಿ ಗುಲಾಬಿ ಬಣ್ಣದ ಸುಂದರ ಸೀರೆಯಲ್ಲಿ ಕಂಗೊಳಿಸಿದರು. ಇಬ್ಬರೂ ಹೂಗುಚ್ಛ ಹಿಡಿದು ಜೊತೆಯಾಗಿ ವೇದಿಕೆಗೆ ಆಗಮಿಸಿದರು. ನಂತರ ನವ ದಂಪತಿಗಳಿಗೆ ಶುಭ ಕೋರಿದರು. ಈ ವೇಳೆ ಜಗನ್ ಮೋಹನ್ ರೆಡ್ಡಿ ಕುಟುಂಬದವರೂ ಜೊತೆಯಾಗಿ ಫೋಟೋಗೆ ಪೋಸ್ ನೀಡಿದರು.

#WATCH | ஜெகன் மோகன் வீட்டுக் கல்யாணம்: மணமக்களை வாழ்த்திய முதலமைச்சர் விஜய், உடன் நடிகை த்ரிஷா இருந்தார்.

#SunNews | #Vijay | #Trisha | #JaganMohan https://t.co/m1f5ZNtGx2

— Sun News (@sunnewstamil) November 5, 2026

ಇವರಿಬ್ಬರ ಜೊತೆಯಲ್ಲಿ ಸಿಎಂ ವಿಜಯ್ ಅವರ ತಾಯಿ ಶೋಭಾ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಎಲ್ಲರೂ ಒಂದೇ ಕಡೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಕಳೆದ ಕೆಲವು ಸಮಯದಿಂದ ವಿಜಯ್ ಹಾಗೂ ತ್ರಿಷಾ ನಡುವಿನ ಸ್ನೇಹದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಲೇ ಇವೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಹಿಂಪಡೆದ ಬಳಿಕ ಈ ವದಂತಿ ತಣ್ಣಗಾಗಿತ್ತು. ಈಗ ಮತ್ತೆ ಅದಕ್ಕೆ ರೆಕ್ಕೆ-ಪುಕ್ಕ ಬಂದಿದೆ. ಆದರೆ ಇಬ್ಬರೂ ಈ ಎಲ್ಲ ವದಂತಿಗಳಿಗೆ ತಲೆ ಕೆಡಿಸಿಕೊಳ್ಳದೆ ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಎಂಜಿಆರ್ ಬಯೋಪಿಕ್‌: ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ತ್ರಿಷಾ? ಹೆಚ್ಚಿದೆ ಕುತೂಹಲ

ಬೆಳ್ಳಿ ಪರದೆಯ ಮೇಲೆ ತ್ರಿಷಾ ಹಾಗೂ ವಿಜಯ್ ಅವರದ್ದು ಹಿಟ್ ಜೋಡಿ. ನಟ ಅಜಿತ್ ಅವರ ತಾಯಿಯ ಅಗಲಿಕೆಯ ಸಮಯದಲ್ಲಿ ಇಬ್ಬರೂ ಜೊತೆಯಾಗಿ ಸಾಂತ್ವನ ಹೇಳಲು ಹೋಗಿದ್ದರು. ಅಲ್ಲದೆ ಇತ್ತೀಚೆಗೆ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕರಿಸುವಾಗಲೂ ತ್ರಿಷಾ ಹಾಜರಿದ್ದು ಭಾವಕರಾಗಿದ್ದರು. ಇದು ಗೆಳೆತನವೋ ಅಥವಾ ಅದನ್ನು ಮೀರಿದ ಬಾಂಧವ್ಯವೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.