‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಗಾನವಿ ಹಾಗೂ ಯಶಸ್ ಮಧ್ಯೆ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಸಮತೋಲನ ಕಾಯ್ದುಕೊಳ್ಳುತ್ತಲೇ ನಿಖರವಾಗಿ ಟವರ್ ನಿರ್ಮಿಸುವ ಕಠಿಣ ಟಾಸ್ಕ್‌ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಯಾರು ಗೆದ್ದು ಈ ವಾರದ ಕ್ಯಾಪ್ಟನ್ ಪಟ್ಟಕ್ಕೇರಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ರೋಚಕ ಸಂಚಿಕೆಯನ್ನು ರಾತ್ರಿ 9:30 ಕ್ಕೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ 24/7 ಲೈವ್ ವೀಕ್ಷಿಸಬಹುದಾಗಿದೆ.

ಕ್ಯಾಪ್ಟನ್ಸಿ ಪಟ್ಟ ಗೆಲ್ಲುವುದು ಪ್ರತಿಯೊಬ್ಬ ಸ್ಪರ್ಧಿಗೂ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಕ್ಯಾಪ್ಟನ್ ಆದ ಸ್ಪರ್ಧಿಗೆ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ನೇರ ರಕ್ಷಣೆ ಸಿಗಲಿದೆ. ಎಲಿಮಿನೇಷನ್ ಭೀತಿಯಿಂದ ಬಚಾವ್ ಆಗಲು ಇಬ್ಬರೂ ಪ್ರಾಣಪಣಟ್ಟು ಆಡುತ್ತಿದ್ದಾರೆ. ಈ ಗೆಲುವು ಅವರ ಮುಂದಿನ ಆಟದ ಹಾದಿಯನ್ನು ಸುಲಭಗೊಳಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.