Breaking News Today Live Updates in Kannada: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾದ ಮೊಬೈಲ್ ಫೋನ್ ದೆಹಲಿಯಲ್ಲಿರುವ ಹೆಚ್‌ಡಿಕೆ ನಿವಾಸದ ಬಳಿ ವಿನಿಮಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿದ್ದ ಹೇಳಿಕೆಯನ್ನು ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದರು. “ನಾಳೆ ಪಿಕ್ಚರ್ ತೋರಿಸ್ತೀನಿ” ಎಂದು ನಿನ್ನೆ ಹೇಳಿದ್ದ ಹೆಚ್‌ಡಿಕೆ, ಇಂದು ಬೆಳಿಗ್ಗೆ 11 ಗಂಟೆಗೆ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಪ್ರಮುಖ ದಾಖಲೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇನ್ನೊಂದೆಡೆ ಹಾಲಿನ ದರ ಏರಿಕೆಯ ಬೆನ್ನಲ್ಲೇ ಶಾಂತಿನಗರದ ‘ಉಡುಪಿ ಗ್ರ್ಯಾಂಡ್ ವೆಜ್’ ಹೋಟೆಲ್‌ನಲ್ಲಿ ಟೀ-ಕಾಫಿ ಬೆಲೆ ಬರೋಬ್ಬರಿ 5 ರೂಪಾಯಿ ಹೆಚ್ಚಳವಾಗಿದೆ. 15 ರೂಪಾಯಿ ಇದ್ದ ಮಿನಿ ಟೀ-ಕಾಫಿ ಈಗ 20 ರೂಪಾಯಿಗೆ ಹಾಗೂ 20 ರೂಪಾಯಿ ಇದ್ದ ಒಂದು ಕಪ್ ಟೀ-ಕಾಫಿ ದರ 25 ರೂಪಾಯಿಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ‘ಮುರಾಸು’ ಚಂಡಮಾರುತ ಗಂಟೆಗೆ 100-120 ಕಿ.ಮೀ ವೇಗದಲ್ಲಿ ನೆಲ್ಲೂರು-ನರಸಾಪುರ ನಡುವೆ ಅಪ್ಪಳಿಸುವ ಸಾಧ್ಯತೆಯಿದೆ. ಪರಿಣಾಮವಾಗಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ರಾಷ್ಟ್ರೀಯ
Karnataka News Live: ಸ್ಟಿಂಗ್ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಹೆಸರು; ಇಂದು ಜೆಪಿ ಭವನದಲ್ಲಿ ಮಹತ್ವದ ಸುದ್ದಿಗೋಷ್ಠಿ!

ಈ ವಿಷಯವನ್ನು TV9 Kannada - Karnataka ಪ್ರಕಟಿಸಿದೆ; IB9TV ಇದನ್ನು ಬರೆದಿಲ್ಲ, ಸಂಪಾದಿಸಿಲ್ಲ. ಮೂಲ ಸುದ್ದಿ ನೋಡಿ
