ಭಾರತ ವಿರುದ್ಧದ ಮುಂಬರುವ ಮಹತ್ವದ 5 ಪಂದ್ಯಗಳ ಏಕದಿನ ಸರಣಿಗೂ ಮುನ್ನ ನ್ಯೂಝಿಲೆಂಡ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರಾದ ಮಾರ್ಕ್ ಚಾಪ್ಮನ್ ಮತ್ತು ರಚಿನ್ ರವೀಂದ್ರ ಅವರು ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ.
ಗಾಯದ ಸಮಸ್ಯೆ ಏನು?
ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯ ಮೂಲಗಳ ಮಾಹಿತಿ ಪ್ರಕಾರ, ಮಧ್ಯಮ ಕ್ರಮಾಂಕದ ಬ್ಯಾಟರ್ ಮಾರ್ಕ್ ಚಾಪ್ಮನ್ ಭೀಕರ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ, ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವ ಆಲ್ ರೌಂಡರ್ ರಚಿನ್ ರವೀಂದ್ರ ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ (ಹೆಗಲಿನ ಗಾಯದ ಚೇತರಿಕೆ) ಮುನ್ನೆಚ್ಚರಿಕಾ ಕ್ರಮವಾಗಿ ಸರಣಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ತಂಡಕ್ಕೆ ಮರಳಿದ ನಿಕೋಲ್ಸ್:
ಇಬ್ಬರು ಆಟಗಾರರ ಅಲಭ್ಯತೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನ್ಯೂಝಿಲೆಂಡ್ ಆಯ್ಕೆ ಸಮಿತಿಯು ಅನುಭವಿ ಬ್ಯಾಟರ್ ಹೆನ್ರಿ ನಿಕೋಲ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ನಿಕೋಲ್ಸ್ ಅವರ ಅನುಭವವು ಭಾರತದ ವಿರುದ್ಧದ ಸರಣಿಯಲ್ಲಿ ಕಿವೀಸ್ ಪಡೆಗೆ ನೆರವಾಗಲಿದೆ ಎಂಬ ನಂಬಿಕೆ ಮ್ಯಾನೇಜ್ಮೆಂಟ್ದ್ದಾಗಿದೆ.
ಸೈಫರ್ಟ್, ಫಿಶರ್ಗೆ ಹೆಚ್ಚಿನ ಜವಾಬ್ದಾರಿ:
ಆಟಗಾರರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೈಫರ್ಟ್ ಮತ್ತು ಯುವ ಬೌಲರ್ ಮ್ಯಾಟ್ ಫಿಶರ್ ಅವರಿಗೆ ತಂಡದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.
- ಮಾರ್ಕ್ ಚಾಪ್ಮನ್ ಹೊರಬಿದ್ದಿರುವುದರಿಂದ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯಬಲ್ಲ ಆಕ್ರಮಣಕಾರಿ ಬ್ಯಾಟರ್ ಕೊರತೆ ಎದುರಾಗಿದ್ದು, ಈ ಜವಾಬ್ದಾರಿಯನ್ನು ಟಿಮ್ ಸೈಫರ್ಟ್ ನಿರ್ವಹಿಸಲಿದ್ದಾರೆ.
- ರಚಿನ್ ರವೀಂದ್ರ ಅವರು ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮತೋಲನ ನೀಡುತ್ತಿದ್ದರು. ರಚಿನ್ ಇಲ್ಲದಿರುವುದರಿಂದ ಯುವ ಬೌಲರ್ ಮ್ಯಾಟ್ ಫಿಶರ್ ಅವರನ್ನು ಕಣಕ್ಕಿಳಿಸಲು ನ್ಯೂಝಿಲೆಂಡ್ ಟೀಮ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ರೂಪಿಸಿದೆ.
ನ್ಯೂಝಿಲೆಂಡ್ ಏಕದಿನ ತಂಡ (ಮೊದಲ 3 ಪಂದ್ಯಗಳಿಗೆ): ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್, ನಾಥನ್ ಸ್ಮಿತ್, ವಿಲ್ ಯಂಗ್, ಬ್ಲೇರ್ ಟಿಕ್ನರ್.
ಇದನ್ನೂ ಓದಿ: 36 ಎಸೆತಗಳಲ್ಲಿ 154 ರನ್ ಚಚ್ಚಿದ ಪಾಕಿಸ್ತಾನ್: ವಿಶ್ವ ದಾಖಲೆ ಜಸ್ಟ್ ಮಿಸ್!
ನ್ಯೂಝಿಲೆಂಡ್ ಏಕದಿನ ತಂಡ (ಕೊನೆಯ 2 ಪಂದ್ಯಗಳಿಗೆ): ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಶರ್, ಡೀನ್ ಫಾಕ್ಸ್ಕ್ರಾಫ್ಟ್, ಲಾಕಿ ಫರ್ಗುಸನ್, ಮಿಚ್ ಹೇ (ವಿಕೆಟ್ ಕೀಪರ್), ನಿಕ್ ಕೆಲ್ಲಿ, ಟಿಮ್ ಸೈಫರ್ಟ್, ಬ್ಲೇರ್ ಟಿಕ್ನರ್, ವಿಲ್ ಯಂಗ್.

