ಹಾಸನ, ನವೆಂಬರ್ 02: ಐತಿಹಾಸಿಕ ಹಾಸನಾಂಬ ದೇವಾಲಯದ ಸಾರ್ವಜನಿಕ ದರ್ಶನಕ್ಕೆ ಈ ಬಾರಿ ಅಭೂತಪೂರ್ವ ಜನಸಾಗರ ಹರಿದುಬರುತ್ತಿದೆ. ಶಕ್ತಿದೇವತೆ ಹಾಸನಾಂಬೆಯ ದರ್ಶನಕ್ಕೆಂದು ರಾಜ್ಯದ ಮೂಲೆಮೂಲೆಯಿಂದ ಆಗಮಿಸುತ್ತಿರುವ ಭಕ್ತಾದಿಗಳಿಂದ ದೇವಾಲಯದ ಸುತ್ತಮುತ್ತಲ ಪ್ರದೇಶ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಸಾರ್ವಜನಿಕ ದರ್ಶನ ಪ್ರಾರಂಭವಾಗಿ ನಾಲ್ಕನೇ ದಿನವೂ ಸಹ ಸಾವಿರಾರು ಭಕ್ತರು ದೇವಿಯ ಕೃಪೆಗೆ ಪಾತ್ರರಾಗಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ದೇವಸ್ಥಾನದಲ್ಲಿ ಧರ್ಮ ದರ್ಶನ, 1000 ರೂಪಾಯಿ ಹಾಗೂ 300 ರೂಪಾಯಿಗಳ ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಸಾಲುಗಳಲ್ಲೂ ಭಕ್ತಾದಿಗಳು ಕಿಕ್ಕಿರಿದು ತುಂಬಿದ್ದಾರೆ. ದೇವರ ದರ್ಶನ ಪಡೆಯಲು ಕೆಲ ಗಂಟೆಗಳ ಕಾಲ ಕಾಯುವುದು ಸಾಮಾನ್ಯವಾಗಿದೆ. ದರ್ಶನ ಆರಂಭವಾದ ಮೊದಲ ಮೂರು ದಿನಗಳಲ್ಲೇ ದೇವಾಲಯಕ್ಕೆ ಐದು ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದ್ದು, ಇದು ದೇವಸ್ಥಾನದ ಇತಿಹಾಸದಲ್ಲಿ ದಾಖಲೆಯಾಗಿದೆ. ಭಕ್ತರ ಸುರಕ್ಷತೆ ಮತ್ತು ಸುಗಮ ದರ್ಶನಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

